Ration Card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್, ಸಿಹಿಸುದ್ದಿ, ಈ ದಿನದಂದು ಸಿಗಲಿದೆ ಹೊಸ ಕಾರ್ಡ್
ಶೀಘ್ರದಲ್ಲಿ ಹೊಸ ರೇಷನ್ ಕಾರ್ಡ್ ವಿತರಣೆ, ಸರ್ಕಾರದ ಘೋಷಣೆ
New Ration Card Distribution: ರಾಜ್ಯ ಸರ್ಕಾರ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಆಗಾಗ ಅವಕಾಶವನ್ನು ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಚಯಿಸಿರುವ ಉಚಿತ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯ ದಾಖಲೆಯಾಗಿದೆ. ಹೀಗಿರುವಾಗ ಜನಸಾಮಾನ್ಯರು ಹೊಸ ರೇಷನ್ ಕಾರ್ಡ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
![New Ration Card Distribution](https://nadunudi.in/wp-content/uploads/2024/02/New-Ration-Card-Distribution.jpg)
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
ಇನ್ನು ಉಚಿತ ಆರೋಗ್ಯ ಯೋಜನೆಗಳ ಲಾಭವನ್ನು ಪಡೆಯಲು ಜನರಿಗೆ ರೇಶ ಕಾರ್ಡ್ ಅಗತ್ಯವಾಗಿದೆ. ಜನಸಾಮಾನ್ಯರಿಗೆ ಯೋಜನೆಗಳ ಲಾಭ ಕೈತಪ್ಪಿ ಹೋಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಇದೀಗ ಹೊಸ ರೇಷನ್ ಕಾರ್ಡ್ ವಿರತರಣೆಗೆ ನಿರ್ಧರಿಸಿದೆ. ಈ ದಿನದಂದು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರಿಗೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಅಷ್ಟಕ್ಕೂ ರಾಜ್ಯ ಸರ್ಕಾರ ಹೊಸ ಪಡಿತರ ವಿತರಣೆಗೆ ಯಾವ ದಿನಾಂಕವನ್ನು ನಿಗದಿಪಡಿಸಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
ಈ ದಿನದಂದು ಹೊಸ ರೇಷನ್ ಕಾರ್ಡ್ ವಿತರಣೆ
ಸರ್ಕಾರದ ಗ್ಯಾರಂಟಿ ಯೋಜನೆಗಳು ಘೋಷಣೆಯಾದ ಬೆನ್ನಲ್ಲೇ ಲಕ್ಷಾಂತರ ಜನರು BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಲಕ್ಷಾಂತರ ಫಲಾನುಭವಿಗಳು ಹೊಸ ರೇಷನ್ ಬರುವಿಕೆಯಲ್ಲಿ ಕಾದು ಕುಳಿತಿದ್ದಾರೆ.
![New Ration Card](https://nadunudi.in/wp-content/uploads/2024/02/New-Ration-Card.jpg)
ವಿಧಾನಸಭಾ ಚುನಾವಣೆಗೂ ಮುನ್ನ BPL ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿ ಹೊಸ ಕಾರ್ಡ್ ವಿತರಣೆ ನಡೆಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ. ಇನ್ನು ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾರ್ಚ್ 31 ರೊಳಗೆ ಪರಿಶೀಲಿಸಿ ಏಪ್ರಿಲ್ 1 ರಿಂದ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಇಂದು ಸದನದಲ್ಲಿ ತಿಳಿಸಿದ್ದಾರೆ.