iPhone 14: 7999 ರೂ ನಲ್ಲಿ ಖರೀದಿ iPhone 14 , ಆಫರ್ ಘೋಷಣೆಯ ಕೆಲವೇ ಸಮಯದಲ್ಲಿ ಲಕ್ಷ ಲಕ್ಷ ಬುಕಿಂಗ್.
ಐಫೋನ್ ಖರೀದಿಯ ಮೇಲೆ ಫ್ಲಿಪ್ ಕಾರ್ಟ್ ಭರ್ಜರಿ ರಿಯಾಯಿತಿಯನ್ನ ನೀಡುತ್ತಿದೆ.
iPhone 14 Flipkart Offer: ದೇಶದಲ್ಲಿ ದುಬಾರಿ ಬ್ರಾಂಡ್ ಆಗಿರುವ ಐಫೋನ್ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. Apple ಹೊಸ ಹೊಸ ರೂಪಾಂತರವನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇನ್ನು ಇನ್ನಿತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಐಫೋನ್ ಬೆಲೆ ಅಧಿಕವಾಗಿರುತ್ತದೆ. ಸಾಮಾನ್ಯವಾಗಿ ಐಫೋನ್ ನಲ್ಲಿ ಇತರ ಫೋನ್ ಗಳಿಗಿಂತ ಹೆಚ್ಚಿನ ಫೀಚರ್ ಲಭ್ಯವಿರುತ್ತದೆ.
ಈ ಕಾರಣಕ್ಕಾಗಿ ಎಲ್ಲರು ಐಫೋನ್ ಖರೀದಿಸಲು ಬಯಸುತ್ತಾರೆ. ಆದರೆ ಐಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಿರದೆ ಇರುವ ಕಾರಣ ಖರೀದಿಸುವ ಆಸೆಯನ್ನು ಕೈಬಿಡುತ್ತಾರೆ. ಇನ್ನು ದೇಶದ ಜನಪ್ರಿಯ ಇ – ಕಾಮರ್ಸ್ ಫ್ಲಾಟ್ ಫಾರ್ಮ್ ಗಳು ಇತ್ತೀಚಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಅದರಲ್ಲೂ Flipkart ಗ್ರಾಹಕರಿಗೆ ಐಫೋನ್ ಅನ್ನು ವಿಶೇಷ ದರದಲ್ಲಿ ನೀಡಲು ಮುಂದಾಗಿದೆ.
![Buy iPhone 14 at just Rs 7999](https://nadunudi.in/wp-content/uploads/2023/08/iphone-14-offers.png)
ಐಫೋನ್ 14 ಫ್ಲಿಪ್ ಕಾರ್ಟ್ ಆಫರ್
Apple ಕಂಪನಿ ಇದೀಗ ಐಫೋನ್ 15 ಅನ್ನು ಬಿಡುಗಡೆಗೊಳಿಸಿದೆ. ಹೀಗಾಗಿ ಐಫೋನ್ 14 ಗೆ ಬರ್ಜರಿ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ. ಐಫೋನ್ 14 ರ 128GB ರೂಪಾಂತರವನ್ನು ಖರೀದಿಸಲು ಗ್ರಾಹಕರು 68999 ರೂ. ಗಳನ್ನು ಪಾವತಿಸಬೇಕಾಗುತ್ತದೆ. ನೀವು ಫ್ಲಿಪ್ ಕಾರ್ಟ್ ನ ವಿನಿಮಯ ಪ್ರಯೋಜನವನ್ನು ಬಳಸಿಕೊಳ್ಳದಿದ್ದರೆ ಈ ಬೆಲೆಯನ್ನು ಪಾವತಿಸಬೇಕಾಗುತ್ತದೆ. ಆದರೆ ಫ್ಲಿಪ್ ಕಾರ್ಟ್ ನ ಆಫರ್ ಅನ್ನು ಬಳಸಿಒಂದು ನೀವು ಕೇವಲ 7,999 ರೂ. ನಲ್ಲಿ 69 ಸಾವಿರ ಮೌಲ್ಯದ ಐಫೋನ್ 14 ಅನ್ನು ಖರೀದಿಸಬಹುದು.
![iPhone 14 Flipkart Offer](https://nadunudi.in/wp-content/uploads/2023/08/iphone-14-new-offer.png)
ಕೇವಲ 7999 ರೂ ನಲ್ಲಿ ಖರೀದಿಸಿ iPhone 14
ಫ್ಲಿಪ್ ಕಾರ್ಟ್ ಐಫೋನ್ 14 ನ ಖರೀದಿಯ ಮೇಲೆ ಬರೋಬ್ಬರಿ 61,000 ವಿನಿಮಯ ಕೊಡುಗೆಯನ್ನು ನೀಡಿದೆ. ನೀವು ಐಫೋನ್ 14 ಪ್ರೊ ಅಥವಾ ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. 61,000 ಎಕ್ಸ್ ಚೇಂಜ್ ಆಫರ್ ಅನ್ನು ಬಳಸಿಕೊಂಡು ಕೇವಲ 7,999 ರೂ. ಗೆ ಐಫೋನ್ 14 ಅನ್ನು ನಿಮ್ಮದಾಗಿಸಿಕೊಳ್ಳಬಹುದು.