New Ration Card: BPL Card ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್, ಹೊಸ ವರ್ಷಕ್ಕೂ ಮೊದಲೇ ಸರ್ಕಾರದಿಂದ ಬಹುದೊಡ್ಡ ಘೋಷಣೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಗುಡ್ ನ್ಯೂಸ್.
New Ration Card Distribution: ರೇಷನ್ ಕಾರ್ಡ್ (Ration Card) ಅನ್ನು ಸಾಮಾನ್ಯವಾಗಿ ಎಲ್ಲಾ ಕುಟುಂಬದವರು ಹೊಂದಿರುತ್ತಾರೆ. ರೇಷನ್ ಕಾರ್ಡ್ ಇಲ್ಲವಾದರೆ ಸರ್ಕಾರದಿಂದ ಲಭ್ಯವಾಗುವ ಸವಲತ್ತುಗಳು ದೊರೆಯುದಿಲ್ಲ.
ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಿಗೂ ರೇಷನ್ ಕಾರ್ಡ್ ಅತಿ ಅಗತ್ಯವಾಗಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುವ ಸಲುವಾಗಿ ಅರ್ಹತೆ ಇಲ್ಲದವರು ಕೂಡ BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ.
![New Ration Card Distribution](https://nadunudi.in/wp-content/uploads/2023/11/New-Ration-Card-Distribution.jpg)
BPL Card ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
ಸರ್ಕಾರದ ಗ್ಯಾರಂಟಿ ಯೋಜನೆಗಳು ಘೋಷಣೆಯಾದ ಬೆನ್ನಲ್ಲೇ ಲಕ್ಷಾಂತರ ಜನರು BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು.
ಇನ್ನು ಲಕ್ಷಾಂತರ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಚೀಟಿಗಾಗಿ ಕಾದು ಕುಳಿತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ BPL Card ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.
![New Ration Card](https://nadunudi.in/wp-content/uploads/2023/11/New-Ration-Card-1.jpg)
ಹೊಸ ಪಡಿತರ ಚೀಟಿ ವಿತರಣೆಗೆ ಗ್ರೀನ್ ಸಿಗ್ನಲ್
ವಿಧಾನಸಭಾ ಚುನಾವಣೆಗೂ ಮುನ್ನ BPL ಕಾರ್ಡ್ಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿ ಹೊಸ ಕಾರ್ಡ್ ವಿತರಣೆ ನಡೆಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಸರಿ ಸುಮಾರು 3 ಲಕ್ಷ ಅರ್ಜಿಯನ್ನು BPL ಕಾರ್ಡ್ ಗೆ ಸಲ್ಲಿಸಿದ್ದರು, ಸದ್ಯ ಅರ್ಜಿಗಳ ಪರಿಶೀಲನೆ ನೆಡೆಸಿ 7 ಸಾವಿರ ಮಂದಿಗೆ ರೇಷನ್ ಕಾರ್ಡ್ ವಿತರಿಸುದಾಗಿ ಸರಕಾರ ಮಾಹಿತಿ ನೀಡಿದೆ.
ಈ ಅರ್ಜಿಗಳ ವಿಲೇವಾರಿ ಆಗುವ ತನಕ ಹೊಸ ಅರ್ಜಿ ಹಾಕಲು ಅವಕಾಶ ನೀಡಲಾಗುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಕಾನೂನು ಪ್ರಕಾರ ನೆಡೆಯಲಿದೆ, ಫುಡ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ ಬಳಿಕ ರೇಷನ್ ಕಾರ್ಡ್ ಅನ್ನು ವಿತರಣೆ ಮಾಡಲಾಗುದು.