Ration E-KYC: BPL ರೇಷನ್ ಕಾರ್ಡುದಾರರಿಗೆ ದಿಡೀರ್ ಹೊಸ ನಿಯಮ, ತಕ್ಷಣ ಈ ಕೆಲಸ ಮಾಡದಿದ್ದರೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ಕಟ್.

December 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಡಿಲೀಟ್.

Aadhaar Card And Ration Card Link Process: ದೇಶದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಸರ್ಕಾರ Aadhaar Card Link To Ration Card ಅನ್ನು ಕಡ್ಡಾಯಗೊಳಿಸಿದೆ. ಹಾಗೆಯೆ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ನೀಡುವುದಾಗಿ, ಗೃಹ ಯೋಜನೆಯಡಿ ಅರ್ಹ ಮಹಿಳೆಯರಿಗೆ 2000 ರೂ. ಘೋಷಣೆ ಮಾಡಲಾಗಿತ್ತು.

ಆದರೆ ಕೆಲವು ಸಮಸ್ಯೆಗಳಿಂದ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ತಲುಪುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಆಧಾರ್ ರೇಷನ್ ಲಿಂಕ್ ಪರಿಹಾರವಾಗಿದೆ ಎನ್ನಬಹುದು. ಹೌದು ರೇಷನ್ ಕಾರ್ಡ್ ಇದ್ದವರರು ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆಯಬೇಕು ಅಂದರೆ ಡಿಸೆಂಬರ್ 31 ರೊಳಗೆ KYC ಅನ್ನು ಪೂರ್ಣ ಮಾಡಬೇಕು ಎಂದು ಸರ್ಕಾರ ಆದೇಶವನ್ನ ಹೊರಡಿಸಿದೆ.

Aadhaar Card And Ration Card Link Process
Image Credit: Kannada News Today

ಆಧಾರ್ ಕಾರ್ಡ್ ಜೊತೆ ರೇಷನ್ ಕಾರ್ಡ್ ಲಿಂಕ್
ಇನ್ನು BPL ಕಾರ್ಡ್ ದಾರರಿಗೆ ಸೌಲಭ್ಯಗಳು ಹೆಚ್ಚುತ್ತಿರುವ ಕಾರಣ BPL ಕಾರ್ಡ್ ಅನ್ನು ಹೊಂದಲು ಆರ್ಥಿಕವಾಗಿ ಸಬಲರಾಗಿರುವವರು ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಅನರ್ಹ ವ್ಯಕ್ತಿಗಳು ಕೂಡ ಪಡಿತರ ವಿತರಣೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಈ ನಡುವೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದ್ದು, ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಗೆ ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಿದೆ.

ಡಿಸೆಂಬರ್ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ನಿಮ್ಮ ರೇಷನ್ ಕಾರ್ಡ್
ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. December 31 ರೊಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಿದೆ. ಆಧಾರ್ ಜೊತೆ ರೇಷನ್ ಕಾರ್ಡ್ ಮಾಡುವುದು ವಂಚನೆಯನ್ನು ತಡೆಯುವ ಮೂಲ ಉದ್ದೇಶವಾಗಿದೆ.

Ration Card E-KYC
Image Credit: Original Source

ಮೂಲ ಪಡಿತರ ಚೀಟಿಯ ಫೋಟೋಕಾಪಿ, ಕುಟುಂಬದ ಎಲ್ಲ ಸದ್ಯಸರ, ಹಾಗೂ ಮುಖ್ಯಸ್ಥರ ಆಧಾರ್ ಕಾರ್ಡ್ ನ ಫೋಟೋಕಾಪಿ, ಬ್ಯಾಂಕ್ ಪಾಸ್ ಬುಕ್ ನ್ ಪ್ರತಿ, ಕುಟುಂಬದ ಮುಖ್ಯಸ್ಥರ ಎರಡು ಪಾಸ್ ಪೋರ್ಟ್ ಗಾತ್ರದ ಫೋಟೋ ನೀಡುವ ಮೂಲಕ ನೀವು ಆನ್ಲೈನ್ ಅಥವಾ ಆಫ್ ಲೈನ್ ನಲ್ಲಿ ಸುಲಭವಾಗಿ ಪಡಿತರ ಚೀಟಿಗೆ ಆಧಾರ್ ಅನ್ನು ಲಿಂಕ್ ಮಾಡಿಕೊಳ್ಳಬಹುದು. ಇನ್ನು ಡಿಸೆಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಸಿಗುವ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ರದ್ದಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡಿ
*ಗ್ರಾಹಕರು ಮೊದಲು ತನ್ನ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

*ಬ್ಯಾಂಕಿಂಗ್ ನ ಪೋರ್ಟಲ್ ತೆರೆದ ನಂತರ Login ಆಗಿ ನಂತ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

*ಅಲ್ಲಿ ಕೇಳಲಾಗುವ ಎಲ್ಲ ವೈಯಕ್ತಿಕ ಮಾಹಿತಿಯಾದ, ಹೆಸರು, ವಿಳಾಸ, ಹುಟ್ಟಿದ ದಿನಾಂಕ ಎಲ್ಲ ಮಾಹಿತಿಯನ್ನು ನಮೂದಿಸಿ.

*ಆಧಾರ್, ಪಾನ್ ಹಾಗೆ ಇತರ್ ಅಗತ್ಯ ಮಾಹಿತಿಯ ಪ್ರತಿಯನ್ನು ಎರಡು ಬದಿ ಸ್ಕಾನ್ ಮಾಡಿ ಅಪ್ಲೋಡ್ ಮಾಡಿ.

*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ Submit ಆಯ್ಕೆಯನ್ನು ಆರಿಸಿ. ನಂತರ ನಿಮಗೆ ಸೇವಾ ವಿನಂತಿಯನ್ನು ನೀಡಲಾಗುತ್ತದೆ.

*ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನವೀಕರಣ ಮಾಹಿತಿಯನ್ನು ಗ್ರಾಹಕರ ಮೇಲ್ ಅಥವಾ ಮೊಬೈಲ್ ಸಂದೇಶದ ಮೂಲಕ ರವಾನೆ ಮಾಡಲಾಗುತ್ತದೆ.

Join Nadunudi News WhatsApp Group