Aadhaar Link: ನಿಮ್ಮ ಜಮೀನಿನ ಪಹಣಿಗೆ ಯಾಕೆ ಆಧಾರ್ ಲಿಂಕ್ ಮಾಡಬೇಕು…? ಇಲ್ಲವಾದರೆ ಸಿಗಲ್ಲ ಈ ಸರ್ಕಾರೀ ಸೌಲಭ್ಯ

ಜಮೀನಿನ ದಾಖಲೆಗಳಿಗೆ ಯಾಕೆ ಆಧಾರ್ ಕಾರ್ಡ್ ಮಾಡಬೇಕು ಎಂದು ತಿಳಿದುಕೊಳ್ಳಿ

Aadhaar Link With RTC Online Process: ಸದ್ಯ ರಾಜ್ಯ ಸರ್ಕಾರ ದೇಶದ ಎಲ್ಲ ರೈತರಿಗೆ ಹೊಸ ನಿಯಮವನ್ನು ಜಾರಿ ಮಾಡಿದೆ. ಯಾರು  ಸ್ವಂತ ಆಸ್ತಿ, ಜಮೀನನ್ನು ಹೊಂದಿರುತ್ತಾರೋ ಅಂತವರು ತಮ್ಮ ಎಲ್ಲ ಆಸ್ತಿಗೆ Aadhaar Link ಅನ್ನು ಮಾಡಲು ಹೊಸ ನಿಯಮವನ್ನು ರೂಪಿಸಿದೆ.

ಇನ್ನು ಹೆಚ್ಚುತ್ತಿರುವ ವಂಚನೆಯ ತಡೆಗಾಗಿ ಹಾಗೂ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡುವಂತಹ ಯೋಜನೆಗಳ ಲಾಭದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಇದೀಗ ನಾವು ರೈತರು ತಮ್ಮ ಜಮೀನಿಗೆ Aadhaar Link ಅನ್ನು ಯಾಕೆ ಮಾಡಬೇಕು ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Aadhaar Link With RTC
Image Credit: Revenuefacts

ನಿಮ್ಮ ಜಮೀನಿನ ಪಹಣಿಗೆ ಯಾಕೆ ಆಧಾರ್ ಲಿಂಕ್ ಮಾಡಬೇಕು…?
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ. ಈ ಕಾರಣಕ್ಕೆ ರೈತರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಸದ್ಯ ಎಲ್ಲ ರೀತಿಯ ಕೆಲಸಗಳಿಗೂ ಅಗತ್ಯವಿರುವ, ಮುಖ್ಯ ದಾಖಲೆಯಾಗಿರುವ ಆಧಾರ್ ಕಾರ್ಡ್ ಅನ್ನು RTC ಜೊತೆಗೆ ಲಿಂಕ್ ಮಾಡಲು ಸರ್ಕಾರ ಹೇಳಿದೆ.

RTC ಜೊತೆ ಆಧಾರ್ ಲಿಂಕ್ ಮಾಡಿದರೆ ರೈತರು ಸರ್ಕಾರ ನೀಡಿರುವ ಯಾವುದೇ ಯೋಜನೆಯಿಂದ ವಂಚಿತರಾಗಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸರ್ಕಾರ RTC ಜೊತೆ ಆಧಾರ್ ಲಿಂಕ್ ಮಾಡಲು ಹೇಳಿದೆ. ನೀವು Online ಅಥವಾ Offline ನಲ್ಲಿ Aadhar Link ಅನ್ನು ಮಾಡಬಹುದು. ನಾವೀಗ ಈ ಲೇಖನದಲ್ಲಿ ಆನ್ಲೈನ್ ಮೂಲಕ RTC ಜೊತೆಗೆ ಆಧಾರ್ ಲಿಂಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Aadhaar Link With RTC Online Process
Image Credit: Karnataka Times

ಈ ರೀತಿಯಾಗಿ ನಿಮ್ಮ ಪಹಣಿ ಜೊತೆ ಆಧಾರ್ ಲಿಂಕ್ ಮಾಡಿ
RTC ಜೊತೆಗೆ ಆಧಾರ್ ಲಿಂಕ್ ಮಾಡಲು ಮೊದಲು •http://landrecords.karnataka.gov.in/service4  ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

Join Nadunudi News WhatsApp Group

•ಭೂಮಿ ನಾಗರೀಕ ಸೇವಾ Website ಗೆ Login ಆಗಿ ಅಲ್ಲಿ ಕೇಳದಾದಾಗ ಮಾಹಿತಿಯನ್ನು ಭರ್ತಿ ಮಾಡಬೇಕು.

•OTP ಯೊಂದಿಗೆ Website Login ಆದ ಬಳಿಕ ಅಲ್ಲಿ RTC ಜೊತೆಗೆ Aadhar Link ಆಯ್ಕೆ ಕಾಣುತ್ತದೆ. ಅಲ್ಲಿ ಪಹಣಿ ಪತ್ರ ಯಾರ ಹೆಸರಿನಲ್ಲಿದೆ ಎನ್ನುವುದನ್ನು ನಮೂದಿಸಬೇಕು.

•ನಂತರ ಆಧಾರ್  ನಲ್ಲಿರುವ ಸರಿಯಾದ ಮಾಹಿತಿಯನ್ನು ನಮೂದಿಸಿ ರೈಟ್ ಸೆಡ್ ನಲ್ಲಿ ಕಾಣಸಿಗುವು Verify ಆಯ್ಕೆಯನ್ನು ಕ್ಲಿಕ್ ಮಾಡಬೇಕು.

•ನಂತರ E -KYC ಓಪನ್ ಆಗುತ್ತದೆ. ಆಧಾರ್ ಮಾಹಿತಿ ನೀಡಿ, ಮೊಬೈಲ್ ಗೆ ಬರುವ OTP ಯನ್ನು ನಮೂದಿಸಿ Submit ಮಾಡಬೇಕು.

•ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ  ನಿಮ್ಮ ಪ್ರೊಫೈಲ್ ಓಪನ್ ಆಗುತ್ತದೆ.

•ನಿಮ್ಮ Profile ನಲ್ಲಿ 3 ಡಾಟ್ ನ ಕ್ಲಿಕ್ ಮಾಡಿದಾಗ Link Aadhaar ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು.

•ಇದಾದ ಬಳಿಕ ನಿಮ್ಮ ಜಮೀನಿನ ಪೂರ್ಣ ಮಾಹಿತಿ ಕೆಳಗುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದರೆ ನಿಮ್ಮ ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

Join Nadunudi News WhatsApp Group