Voter ID Rule: ವೋಟರ್ ID ಇದ್ದವರು ಆದಷ್ಟು ಬೇಗ ಈ ಕೆಲಸ ಮುಗಿಸಿಕೊಳ್ಳಿ, ವರ್ಷದ ಅಂತ್ಯದಲ್ಲಿ ಕೇಂದ್ರದ ಇನ್ನೊಂದು ಆದೇಶ

Voter ID ಜೊತೆ Aadhaar Link ಮಾಡುವ ಬಗ್ಗೆ ಕೇಂದ್ರದ ಸ್ಪಷ್ಟನೆ

Aadhaar Link with Voter ID: ಸದ್ಯ ದೇಶದಲ್ಲಿ Aadhaar Card ಎಲ್ಲ ದಾಖಾಲೆಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಎಲ್ಲ ರೀತಿಯ ವೈಯಕ್ತಿಕ ದಾಖಲೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಹೀಗಾಗಿ ಮತದಾರರ ಗುರುತಿನ ಚೀಟಿಯ ಪ್ರಾಮುಖ್ಯತೆ ಇದೀಗ ಹೆಚ್ಚುತ್ತಿದೆ ಎನ್ನಬಬುದು.

ಪ್ರಸ್ತುತ Voter ID ಜೊತೆ Aadhaar Link ಮಾಡುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ. ಜನಸಾಮಾನ್ಯರು ಇದೀಗ Voter ID ಜೊತೆ Aadhaar Link ಮಾಡುವ ಯೋಚಿಸಬೇಕಿದೆ. ಸದ್ಯ ಭಾರತ ಸರ್ಕಾರದಿಂದ ಇದೀಗ Voter ID ಜೊತೆ Aadhaar Link ಮಾಡುವ ಬಗ್ಗೆ ಸ್ಪಷ್ಟನೆ ಲಭಿಸಿದೆ.

Aadhaar Link with Voter ID
Image Credit: Scroll

ವೋಟರ್ ಐಡಿ ಜೊತೆ ಆಧಾರ್ ಜೋಡಣೆ ಮಾಡಬೇಕಾ..?
ಡಿಸೆಂಬರ್ 4 ರಂದು ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಶುಕ್ರವಾರ ಲೋಕಸಭೆಯ ಕಲಾಪದಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಆಧಾರ್- ಮತದಾರರ ಗುರುತಿನ ಚೀಟಿ ಹೊಂದಾಣಿಕೆ ವಿಚಾರಕ್ಕೆ ಲಿಖಿತ ಉತ್ತರ ನೀಡಿ ಸ್ಪಷ್ಟನೆ ನೀಡಿದ್ದಾರೆ.

“ಆಧಾರ್ ಲಿಂಕ್ ಮಾಡುವುದು ಪ್ರಕ್ರಿಯೆ ಚಾಲಿತವಾಗಿದೆ. ಚುನಾವಣಾ ಫೋಟೋ ಐಡಿಯೊಂದಿಗೆ ಆಧಾರ್ ಲಿಂಕ್ ಮಾಡಲು ಯಾವುದೇ ಗುರಿಗಳನ್ನು ನೀಡಲಾಗಿಲ್ಲ. ಇದಲ್ಲದೆ, ಎಪಿಕ್ ಜೊತೆಗೆ ಆಧಾರ್ ಲಿಂಕ್ ಮಾಡುವ ಕೆಲಸ ಇನ್ನೂ ಪ್ರಾರಂಭವಾಗಿಲ್ಲ ಎಂದು ಭಾರತ ಚುನಾವಣಾ ಆಯೋಗ ಹೇಳಿದೆ. ಇದಲ್ಲದೆ, ಫಾರ್ಮ್ 6 ಬಿ ಸಲ್ಲಿಸುವ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ’ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.

ಜನರು ಆದಷ್ಟು ಬೇಗ ತಮ್ಮ ವೋಟರ್ ID ಗಳಿಗೆ ಆಡ್ಸರ್ ಕಾರ್ಡ್ ಲಿಂಕ್ ಮಾಡಬಹುದು, ಇನ್ನು ವೋಟರ್ ID ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಅಲ್ಲ ಎಂದು ಅವರು ಹೇಳಿದ್ದಾರೆ. ಇನ್ನು ಈ ಹೇಳಿಕೆಯನ್ನ ನೀಡುವುದರ ಮೂಲಕ ಜನರ ಎಲ್ಲಾ ಪ್ರಶ್ನೆಗೆ ಉತ್ತರವನ್ನ ನೀಡಲಾಗಿದೆ. ಜನರು ಯಾವುದೇ ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ.

Join Nadunudi News WhatsApp Group

Voter ID And Aadhar Card
Image Credit: Shutterstock

ಫಾರ್ಮ್ 6B (ಆಧಾರ್ ಕಾರ್ಡ್ ಲಿಂಕ್ ಮಾಡಲು) ಸಲ್ಲಿಸುವ ಅವಧಿಯನ್ನು ಮಾರ್ಚ್ 2024 ರ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಮತದಾರರ ಗುರುತಿನ ಚೀಟಿಯನ್ನು ಪ್ರತ್ಯೇಕವಾಗಿ ಇರಿಸಿರುವ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರ ಪ್ರಶ್ನೆಗೆ ಕಾನೂನು ಸಚಿವ ಮೇಘವಾಲ್ ಉತ್ತರಿಸಿದ್ದಾರೆ.

Join Nadunudi News WhatsApp Group