Aadhar Address Change: ಆಧಾರ್ ಕಾರ್ಡ್ ವಿಳಾಸವನ್ನು ಎಷ್ಟು ಬಾರಿ ಬದಲಾಯಿಸಬಹುದು, ನಿಯಮ ತಿಳಿದುಕೊಳ್ಳಿ.

ಆಧಾರ್ ಕಾರ್ಡ್ ನಲ್ಲಿ ಇರುವ ವಿಳಾಸ ಮತ್ತು ಇತರೆ ಮಾಹಿತಿಯನ್ನ ಎಷ್ಟು ಬಾರಿ ಬದಲಾಯಿಸಬಹುದು ತಿಳಿದುಕೊಳ್ಳಿ.

Aadhar Card Address Change: ಆಧಾರ್ ಕಾರ್ಡ್ (Aadhar Card) ಇದೀಗ ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವ ಅಗತ್ಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ.

ಇನ್ನು ಇನ್ನಿತರ ವೈಯಕ್ತಿಕ ದಾಖಲೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆಧಾರ್ ಕಾರ್ಡ್ ನ ವಿಳಾಸ ಬದಲಾವಣೆಯ ನಿಯಮಗಳ ಬಗ್ಗೆ ತಿಳಿಯೋಣ.

Aadhar Card Address Change
Image Source: India Today

ಆಧಾರ್ ಕಾರ್ಡ್ ವಿಳಾಸ ಬದಲಾವಣೆ
ಇನ್ನು ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆನ್ಲೈನ್ ನಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನು ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಯನ್ನು ಎಷ್ಟು ಬಾರಿ ಮಾಡಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳು ಆಗುತ್ತವೆ. ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯಲ್ಲಿ ತಪ್ಪಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ UIDAI ಸೂಚನೆ ನೀಡಿದೆ. ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಬಯೋಮೆಟ್ರಿಕ್, ಪಿಂಗರ್ ಫ್ರಿನ್ಟ್ ಹಾಗೂ ಫೋಟೋವನ್ನು ಕೂಡ ನವೀಕರಿಸಬಹುದು.

Aadhar Card Address Change
Image Soource: Times Of India

ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆ ಎಷ್ಟು ಬಾರಿ ಮಾಡಬಹುದು
ಆನ್ಲೈನ್ ನ ಮುಕಾಂತರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಬದಲಾವಣೆಯನ್ನು ಕೂಡ ಮಾಡಬಹುದು. ಆದರೆ ಜನ್ಮ ದಿನಾಂಕದ ಬದಲಾವಣೆಯನ್ನು ಒಮ್ಮೆ ಮಾತ್ರ ಮಾಡಲು ಸಾಧ್ಯ. ಒಂದಕ್ಕಿಂತ ಹೆಚ್ಚು ಬಾರಿ ಆಧಾರ್ ನಲ್ಲಿ ಜನ್ಮ ದಿನಾಂಕವನ್ನು ನವೀಕರಿಸಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು.

Join Nadunudi News WhatsApp Group

ಮಾನ್ಯವಾದ ಜನನ ಪ್ರಮಾಣ ಪತ್ರವನ್ನು ನೀಡುವ ಮೂಲಕ ನಿಮ್ಮ ಜನ್ಮ ದಿನಾಂಕವನ್ನು ನವೀಕರಿಸಬಹುದು. ಹೆಚ್ಚು ಸಮಯ ಆಧಾರ್ ಕಾರ್ಡ್ ನವೀಕರಣ ಮಾಡಬೇಕು ಅಂದರೆ ಆಧಾರ್ ಸೆಂಟರ್ ಗೆ ಭೇಟಿ ನೀಡಬೇಕು

Aadhar Card Address Change
Image Source: Oneindia

Join Nadunudi News WhatsApp Group