Aadhar Link: ನಿಮ್ಮ ಆಧಾರ್ ಕಾರ್ಡಿಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ, ಸುಲಭವಾಗಿ ಪರಿಶೀಲಿಸಿಕೊಳ್ಳಿ.

ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಯಾವ ನಂಬರ್ ಗೆ ಆಧಾರ್ ಲಿಂಕ್ ಆಗಿದೆ ಎನ್ನುವ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.

Aadhar Card And Mobile Number Link Check: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar Card) ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬರುತ್ತಿವೆ. ಆಧಾರ್ ಕಾರ್ಡ್ ಇದೀಗ ಪ್ರಮುಖ ಧಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ.

ಇನ್ನು ಯುಐಡಿಎಐ ಇತ್ತೀಚಿಗೆ ಆಧಾರ್ ತಿದ್ದುಪಡಿಯನ್ನು ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಕುರಿತಂತೆ ಸಾಕಷ್ಟು ಹೊಸ ಹೊಸ ನಿಯಮಗಳನ್ನು ಯುಐಡಿಎಐ ಜಾರಿಗೊಳಿಸಿದೆ.

Aadhar Mobile Number Link Check
Image Credit: news18

ಆಧಾರ್ ಕಾರ್ಡ್ ಗೆ ಮೊಬೈಲ್ ಲಿಂಕ್
ಇನ್ನು ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಲು ಯುಐಡಿಎಐ ಕಡ್ಡಾಯಗೊಳಿಸಿದೆ. ಆದರೆ ಕೆಲವರಿಗೆ ನಿಮ್ಮ ಆಧಾರ್ ಗೆ ಯಾವ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಈ ಸುಲಭ ವಿಧಾನವನ್ನು ಅನುಸರಿಸುವ ಮೂಲಕ ಯಾವ ನಂಬರ್ ಗೆ ಆಧಾರ್ ಲಿಂಕ್ ಆಗಿದೆ ಎನ್ನುವ ಬಗ್ಗೆ ಸುಲಭವಾಗಿ ತಿಳಿದುಕೊಳ್ಳಬಹುದು.

ಆಧಾರ್ ಕಾರ್ಡ್  ಬಗ್ಗೆ ಮಾಹಿತಿ ತಿಳಿಯಲು ಸುಲಭ ವಿಧಾನ
ನಿಮ್ಮ ಆಧಾರ್ ಕಾರ್ಡ್ ನಿಮ್ಮ ಯಾವ ಮೊಬೈಲ್ ನಂಬರ್ ನೊಂದಿಗೆ ಯಾವ ಯಾವ ಮೇಲ್ ಐಡಿಗೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಲು ಈಗ ಯುಐಡಿಎಐ ಹೊಸ ಸೇವೆಯನ್ನು ಒದಗಿಸಿದೆ. ನೀವು ಆಧಾರ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ಈ ರೀತಿಯಾಗಿ ಪರಿಶೀಲಿಸಿಕೊಳ್ಳಬಹುದು.

How to Check Which Mobile Number is Linked to Aadhaar Card
Image Credit: thehansindia

* ಯುಐಡಿಎಐ ನ ಅಧಿಕೃತ ವೆಬ್ ಸೈಟ್ https://myaadhaar.uidai.gov.in/ ಗೆ ಭೇಟಿ ನೀಡಬೇಕು.
* ನಂತರ ಅಲ್ಲಿ ಮೈ ಆಧಾರ್ ಮೇಲೆ ಕ್ಲಿಕ್ ಮಾಡಿ ಮತ್ತು ವೆರಿಫೈ ಇಮೈಲ್ ಅಥವಾ ಮೊಬೈಲ್ ನಂಬರ್ ಆಯ್ಕೆಯನ್ನು ಆರಿಸಿ.
*ನಂತರ ಸರಿಯಾದ ಇಮೇಲ್ ಅನ್ನು ನಮೂದಿಸಿ ಅಲ್ಲಿ ಕೇಳುವ ವೈಯಕ್ತಿಕ ದಾಖಲೆಯ ವಿವರವನ್ನು ನೀಡಬೇಕು.
*ನಂತರ ಸೆಂಡ್ OTP ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನೋಂದಾಯಿತಾ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿದರೆ ಸರಿಯಾದ ಮಾಹಿತಿ ದೊರೆಯುತ್ತದೆ.

Join Nadunudi News WhatsApp Group

Join Nadunudi News WhatsApp Group