Aadhaar Scam: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿದವರಿಗೆ ಕೇಂದ್ರದಿಂದ ಖಡಕ್ ಆದೇಶ, ತಕ್ಷಣ ಈ ಕೆಲಸ ಮಾಡಿ.

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಲಾಕ್ ಮಾಡಿ.

Aadhar Card Biometric Scam: ಇತ್ತೀಚಿನ ದಿನಗಳಲ್ಲಿ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ವಂಚಕರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಹೆಚ್ಚಾಗಿ OTP ಅನ್ನು ಬಳಕೆ ಮಾಡುತ್ತಿದ್ದಾರೆ.

OTP ಯಿಂದ ಹಣಕಾಸಿನ ವ್ಯವಹಾರ ಎಷ್ಟು ಸುಲಭ ಆಗಿದೆಯೊ ಅಷ್ಟೇ ಅಪಾಯಕಾರಿ ಕೂಡ ಆಗಿದೆ. OTP ನಂಬರ್ ಇಟ್ಟುಕೊಂಡು ಲಕ್ಷಾಂತರ ರೂ. ಹಣವನ್ನು ವಂಚಕರು ದೋಚುತ್ತಿದ್ದಾರೆ. ಆದರೆ ಈಗ OTP ಇಲ್ಲದೆ ಕೂಡ ವಂಚಕರು ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡ್ತಾ ಇದ್ದಾರೆ.

Scam Alert
Image Credit: Jagran

ಆಧಾರ್ ಕಾರ್ಡ್ ಮೂಲಕ ಹೆಚ್ಚುತ್ತಿದೆ ವಂಚನೆ
ಆಧಾರ್ ಕಾರ್ಡ್ ಭಾರತೀಯರ ಮುಖ್ಯ ಗುರುತಿನ ಚೀಟಿಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಆದರೆ ಈಗ ವಂಚಕರು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಹೌದು ಇದೀಗ ವಂಚಕರು ಆಧಾರ್ ಕಾರ್ಡ್ ನಲ್ಲಿರುವ ಬಯೋಮೆಟ್ರಿಕ್ ಮಾಹಿತಿ ಕದಿಯುವ ಮೂಲಕ ಜನರನ್ನು ಮೋಸಗೊಳಿಸುತಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಇಂತಹ ಅನೇಕ ಘಟನೆಗಳು ವರದಿಯಾಗಿದೆ
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರುವವರ ಆಧಾರ್ ಕಾರ್ಡ್ ನಲ್ಲಿರುವ ಬಯೋಮೆಟ್ರಿಕ್ ಮಾಹಿತಿಯನ್ನು ಕದಿಯುವ ಮೂಲಕ ಖಾತೆಯಿಂದ ಹಣವನ್ನು ದೋಚುತ್ತಿದ್ದಾರೆ. ಆಧಾರ್ ಕಾರ್ಡ್ ನಲ್ಲಿರುವ ಬಯೋಮೆಟ್ರಿಕ್ ಮಾಹಿತಿ ದೊರೆತರೆ ಯಾವುದೇ OTP ಯ ಅವಶ್ಯಕತೆ ಇರುವುದಿಲ್ಲ. ಕಳೆದ ಎರಡು ತಿಂಗಳಿನಿಂದ ಇಂತಹ ಅನೇಕ ಘಟನೆಗಳು ವರದಿಯಾಗಿದೆ.

Aadhar Card Biometric Scam
Image Credit: Biometricupdate

ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಲಾಕ್ ಮಾಡಿ
ಈ ವಂಚನೆಯಿಂದ ತಪ್ಪಿಸಿಕೊಳ್ಳಲು ನೀವು ಮನೆಯಲ್ಲಿ ಕುಳಿತು ನಿಮ್ಮ ಬಯೋಮೆಟ್ರಿಕ್ ಪಿಂಗರ್ಪ್ರಿಂಟ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಾಕ್ ಮಾಡಬಹುದು. ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡುವ ಬಗ್ಗೆ ಈ ವಿಡಿಯೋ ಮೂಲಕ ಮಾಹಿತಿ ತಿಳಿದುಕೊಳ್ಳಿ.

Join Nadunudi News WhatsApp Group

Join Nadunudi News WhatsApp Group