Pan Card: ಪಾನ್ ಕಾರ್ಡ್ ನಲ್ಲಿ ಈ ತಪ್ಪು ಇದ್ದರೆ ಅದನ್ನ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲು ಸಾಧ್ಯವಿಲ್ಲ.

ಆಧಾರ್ ಕಾರ್ಡನೊಂದಿಗೆ ಪಾನ್ ಕಾರ್ಡ್ ಲಿಂಕ್ ಆಗದಿರಲು ಕಾರಣ.

Aadhar And Pan Card Not Link: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಭಂದಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು.

ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರಕಾರ 1000 ದಂಡ ವಿಧಿಸಿತ್ತು. ಆದರೆ ಇದೀಗ ಕೆಲವರು 1000 ರೂ. ಪಾವತಿಸಿದರು ಸಹ ನಿಮ್ಮ ಆಧಾರ್ ಕಾರ್ಡ್ ಪಾನ್ ನೊಂದಿಗೆ ಲಿಂಕ್ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

aadhar card and pan card link latest update
Image Credit: timesofindia

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ 1000 ದಂಡ
ಈ ಹಿಂದೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು.ಆದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಸರಕಾರ ಈ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದರೆ. ಆದರೆ ದಿನಾಂಕದ ಗಡುವನ್ನು ಮಾತ್ರ ವಿಸ್ತರಿಸಲಾಗಿದೆ.

1000 ದಂಡ ಪಾವತಿಸುವಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಇನ್ನು ಸಹ 1000 ಪಾವತಿಸಿ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ 1000 ಪಾವತಿಸಿದರು ಕೂಡ ಕೆಲವರ ಆಧಾರ್ ಕಾರ್ಡ್ ಪಾನ್ ಕಾರ್ಡ್ ನೊಂದಿಗೆ ಲಿಂಕ್ ಆಗುತ್ತಿಲ್ಲ.

Aadhar And Pan Card Link
Image Credit: timesnownews

ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಆಗದೆ ಇರಲು ಕಾರಣ
*ಆಧಾರ್ ಹಾಗೂ ಪಾನ್ ಕಾರ್ಡ್ ನಲ್ಲಿ ಹೆಸರು ಒಂದೇ ರೀತಿ ಇಲ್ಲದೆ ಇದ್ದರೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಆಗುವುದಿಲ್ಲ.
*ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ನಲ್ಲಿ ಹೆಸರು ಹೊಂದಾಣಿಕೆ ಇದ್ದಲ್ಲಿ ಮಾತ್ರ ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಆಗುತ್ತದೆ.
*ನಿಮ್ಮ ಸರಿಯಾದ ಹೆಸರು ಯಾವ ದಾಖಲೆಯಲ್ಲಿ ಇದೆಯೋ ಆ ದಾಖಲೆಗೆ ಅನುಗುಣವಾಗಿ ನಿಮ್ಮ ಹೆಸರನ್ನು ಬದಲಾಯಿಸಿಕೊಳ್ಳಿ. ಆಧಾರ್ ಹಾಗೂ ಪಾನ್ ಕಾರ್ಡ್ ನಲ್ಲಿ ಒಂದೇ ರೀತಿಯ ಹೆಸರಿದ್ದರೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಜೋಡಣೆ ಸುಲಭವಾಗಿ ನಡೆಯುತ್ತದೆ.

Join Nadunudi News WhatsApp Group

Join Nadunudi News WhatsApp Group