Darshan Arrest: ದರ್ಶನ್ ಅಪರಾಧಿಯೆಂದು ಸಾಭೀತಾದರೆ ಎಷ್ಟು ವರ್ಷ ಜೈಲು ಗೊತ್ತಾ…? ಇಲ್ಲಿದೆ ಕಾನೂನು ನಿಯಮ

ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ...?

Actor Darshan Latest Update: ಸ್ಯಾಂಡಲ್ ವುಡ್ ನಲ್ಲಿ ವಿಚ್ಛೇದನದ ಸುದ್ದಿಗಳು ಹೈಲೈಟ್ ಆಗುತ್ತಿದ್ದಂತೆ ಇದೀಗ ಕನ್ನಡಿಗರಿಗೆ ಶಾಕ್ ನೀಡುವುನತಃ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಹೌದು, ಸ್ಯಾಂಡಲ್ ವುಡ್ ನ ಸ್ಟಾರ್ ನಟ Darshan ಇದೀಗ ಮರ್ಡರ್ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ.

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧಿಸಲಾಗಿದೆ. ಇನ್ನು ಕೊಲೆ ಆರೋಪ ಸಾಬೀತಾದರೆ ದರ್ಶನ್ ಜೈಲು ಪಾಲಾಗುವುದಂತೂ ಖಂಡಿತ. ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ…? ಎನ್ನುವ ಬಗ್ಗೆ ಕಾನೂನಿನ ನಿಯಮ ಏನಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Actor Darshan Latest Update
Image Credit: NDTV

ಕೊಲೆ ಆರೋಪದಲ್ಲಿ ದರ್ಶನ್ ಅರೆಸ್ಟ್
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ರೇಣುಕಾ ಸ್ವಾಮಿಯನ್ನು ಹತ್ಯೆ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ನಟ ದರ್ಶನ್ ಸೂಚನೆ ಮೇರೆಗೆ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ಸಂಚಲನ ಮೂಡಿಸಿದೆ. ನಟ ದರ್ಶನ್ ಅವರನ್ನು ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಪವಿತ್ರಾ ಗೌಡ ದರ್ಶನ್ ಜೊತೆ ಕ್ಲೋಸ್ ಆಗಿದ್ದಾರೆ. ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದಾರೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದರು. ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ನಾಲ್ವರು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆ ವೇಳೆ ದರ್ಶನ್ ಕೂಡ ಇದ್ದರು ಎನ್ನಲಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ರೇಣುಕಾ ಸ್ವಾಮಿ ಕೊಲೆ ನಡೆದಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.

Actor Darshan arrested in murder case
Image Credit: The Hindu

ಕೊಲೆ ಆರೋಪ ನಿಜವಾದರೆ ದರ್ಶನ್ ಗೆ ಎಷ್ಟು ವರ್ಷ ಜೈಲು ಶಿಕ್ಷೆ…?
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 ಅನ್ನು ಲಾರ್ಡ್ ಮೆಕಾಲೆ 1860 ರಲ್ಲಿ ಜಾರಿಗೊಳಿಸಿದರು. ಅಂದಿನಿಂದ ಈ ಕಾನೂನನ್ನು ಹಲವಾರು ಬಾರಿ ತಿದ್ದುಪಡಿ ಮಾಡಲಾಗಿದೆ. ಇದು ಕೊಲೆಯ ಅಪರಾಧ ಮತ್ತು ಕೊಲೆಗೆ ಶಿಕ್ಷೆಯನ್ನು ವ್ಯಾಖ್ಯಾನಿಸುತ್ತದೆ. ಸರಳವಾಗಿ ಹೇಳುವುದಾದರೆ, ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಯ ಸಾವಿಗೆ ಕಾರಣವಾದರೆ, ಅವನ ಮೇಲೆ IPC ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಆರೋಪ ಹೊರಿಸಬಹುದಾಗಿದೆ. ಸಾವನ್ನು ಉಂಟುಮಾಡುವ ಉದ್ದೇಶವು ಪೂರ್ವಯೋಜಿತವಾಗಿರಬೇಕಾಗಿಲ್ಲ.

Join Nadunudi News WhatsApp Group

ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆಗೆ ಶಿಕ್ಷೆಯು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಯಾಗಿದೆ. ಪ್ರತಿಯೊಂದು ಪ್ರಕರಣದ ಸತ್ಯ ಮತ್ತು ಸಂದರ್ಭಗಳ ಆಧಾರದ ಮೇಲೆ ಶಿಕ್ಷೆಯನ್ನು ನಿರ್ಧರಿಸುವ ವಿವೇಚನೆಯನ್ನು ನ್ಯಾಯಾಲಯ ಹೊಂದಿದೆ. ಅಸಾಧಾರಣ ಕ್ರೌರ್ಯ ಅಥವಾ ಕ್ರೌರ್ಯದೊಂದಿಗೆ ಕೊಲೆ ಪ್ರಕರಣಗಳಲ್ಲಿ, ನ್ಯಾಯಾಲಯವು ಮರಣದಂಡನೆಯನ್ನು ನೀಡಬಹುದು. ಇದು ಪ್ರಕರಣದಿಂದ ಪ್ರಕರಣಕ್ಕೆ ಬದಲಾಗುತ್ತದೆ. ಹೆಚ್ಚುವರಿಯಾಗಿ, ನೀವು ದಂಡಗಳು, ಸಮುದಾಯ ಸೇವೆ ಮತ್ತು ಗಡೀಪಾರು ಮುಂತಾದ ಇತರ ಶಿಕ್ಷೆಗಳನ್ನು ವಿಧಿಸಬಹುದು.

pavithra gowda reason for darshan arrest
Image Credit: Oneindia

Join Nadunudi News WhatsApp Group