Prabhas Take Loan: ಆಸ್ತಿ ಅಡವಿಟ್ಟು ಸಾಲ ಪಡೆದ ಪ್ರಭಾಸ್, ಅಂತ ಕಷ್ಟ ಏನಿತ್ತು ಎಂದು ಕೇಳಿದ ಜನರು.

Prabhas Take Loan: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ (Prabhas) ತಮ್ಮ ನಟನೆಯ ಮೂಲಕ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾ ವಿಶ್ವದಾದ್ಯಂತ ದಾಖಲೆ ಮೂಡಿಸಿದೆ. ಬಾಹುಬಲಿ ಸಿನಿಮಾದಲ್ಲಿ ನಟಿಸಿದ ಪ್ರಭಾಸ್ ಚಿತ್ರರಂಗದಲ್ಲಿ ಬಹಳ ಖ್ಯಾತಿ ಪಡೆದಿದ್ದರು. ಬಾಹುಬಲಿ (Bahubali Movie) ಚಿತ್ರದ ಮೂಲಕ ಅವರು ಹಲವಾರು ಜನರ ಮೆಚ್ಚುಗೆಗೆ ಪಾತ್ರರಾದರು.

Prabhas who took a loan by mortgaging his property
Image Credit: timesofindia.indiatimes

ಸಂಕಷ್ಟದಲ್ಲಿರುವ ನಟ ಪ್ರಭಾಸ್
ತೆಲುಗು ಚಿತ್ರರಂಗದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟ ಪ್ರಭಾಸ್ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದೆ ಕಾರಣದಿಂದಾಗಿ ಆಸ್ತಿಯನ್ನು ಅಡಮಾನವಿಟ್ಟು ಸುಮಾರು 21 ಕೋಟಿ ರೂಪಾಯಿ ಹಣವನ್ನ ಬ್ಯಾಂಕ್ ಒಂದರಲ್ಲಿ ಸಾಲ ಪಡೆದಿದ್ದಾರಂತೆ. ಹೀಗೊಂದು ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

Actor Prabhas, who secured a loan due to financial difficulties
Image Credit: timesofindia.indiatimes

ನಟ ಪ್ರಭಾಸ್ ಅವರ ವ್ಯವಹಾರಗಳು
ನಟ ಪ್ರಭಾಸ್ ಜೊತೆ ಕೆಲವು ಯಶಸ್ವಿ ಉದ್ದಿಮೆಗಳು ಪಾಲುದಾರರು ಸಹ ಹೌದು. ಯುವಿ ಕ್ರಿಯೇಷನ್ ಪಾಲುದಾರರು ಆಗಿರುವ ಪ್ರಭಾಸ್ ಕೆಲವು ರಿಯಲ್ ಎಸ್ಟೇಟ್ ಪ್ರಾಪರ್ಟಿ ಗಳನ್ನೂ ಹೊಂದಿದ್ದಾರೆ.

ಇದು ಮಾತ್ರ ಅಲ್ಲದೆ ದುಬೈ ನಲ್ಲಿ ಹೋಟೆಲ್ ಒಂದನ್ನು ಸಹ ಪ್ರಭಾಸ್ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರ ಜೊತೆಗೆ ಕೆಲವು ನವ ಉದ್ಯಮಗಳಲ್ಲಿಯೂ ಪ್ರಭಾಸ್ ಹಣ ತೊಡಗಿಸಿದ್ದಾರಂತೆ.

Join Nadunudi News WhatsApp Group

Actor Prabhas took a loan by mortgaging his property to start a new business
Image Credit: siasat

ನಟ ಪ್ರಭಾಸ್ ಅವರ ಸಿನಿಮಾಗಳು
ನಟ ಪ್ರಭಾಸ್ ಅವರು ದೊಡ್ಡ ದೊಡ್ಡ ಉದ್ದಿಮೆಗಳನ್ನು ಹೊಂದಿರುವ ವ್ಯಕ್ತಿ. ಇವರಿಗೆ ಸಾಲ ಮಾಡುವ ಅವಶ್ಯಕತೆ ಏನಿತ್ತು ಎಂಬುದರ ಬಗ್ಗೆ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಆದರೆ ತೆರಿಗೆ ಉಳಿಸಲು ಹೀಗೆ ಬ್ಯಾಂಕ್‌ ಲೋನ್‌ಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.

ಆ ಕಾರಣಕ್ಕಾಗಿ ಪ್ರಭಾಸ್ ಸಾಲ ಪಡೆದಿರಬಹುದು ಎನ್ನಲಾಗುತ್ತಿದೆ. ಇನ್ನು ನಟ ಪ್ರಭಾಸ್ ನಟನೆಯ ಹಿಂದಿನ ಸಿನಿಮಾ ರಾಧೆ ಶ್ಯಾಮ್ ಸಿನಿಮಾ (Radhe Shyam) ಪ್ಲಾಪ್ ಆಗಿದೆ.

ಇದೀಗ ಪ್ರಭಾಸ್ ನಟನೆಯ ಆದಿಪುರುಷ್ ತೆರೆಗೆ ಬರಲಿದೆ. ಆದರೆ ಸಿನಿಮಾದ ಬಗ್ಗೆ ಈಗಾಗಲೇ ಋಣಾತ್ಮಕ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದೆ. ಅದರ ಬಳಿಕ ಸಾಲಾರ್ ಸಿನಿಮಾ ಬಿಡುಗಡೆ ಅಗಲಿದ್ದು ಈ ಸಿನಿಮಾವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Join Nadunudi News WhatsApp Group