Yash first Film: ವೈರಲ್ ಆಯಿತು ರಾಕಿಂಗ್ ಸ್ಟಾರ್ ಯಶ್ ಅವರ ಮೊದಲ ಸಂಭಾವನೆ.

Yash first Film: ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ಯಶ್ (Yash) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಯಶ್ ಮೊನ್ನೆಯಷ್ಟೇ ಬಹಳ ಅದ್ದೂರಿಯಾಗಿ ದುಬೈನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಟ ಯಶ್ ಅವರ ಅಭಿಮಾನಿಗಳು ಅವರ ಹೊಸ ಸಿನಿಮಾದ ಘೋಷಣೆಗಾಗಿ ಕಾಯುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್
ನಟ ಯಶ್ (Yash) ಬೆಳೆದುಬಂದ ಹಾದಿ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. ಈಗ ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಯಶ್ ಮೊದಲು ಎಷ್ಟು ಸಂಭಾವನೆ ಪಡೆದಿದ್ದರು ಎಂಬ ಕುತೂಹಲ ಅನೇಕರಲ್ಲಿದೆ. ಯಶ್ ಅವರ ತಂದೆ ತಾಯಿಗೆ ಮಗ ಸರ್ಕಾರಿ ಅಧಿಕಾರಿ ಆಗಬೇಕು ಎಂಬ ಆಸೆ ಇದ್ದಿತ್ತು. ಆದರೆ ನಟ ಯಶ್ ಕರ್ನಾಟಕ ಹೆಸರಾಂತ ನಟರಾದರು.

Rocking star Yashs first salary went viral.
Image Source: India Today

ನಟ ಯಶ್ ಅವರ ಸಿನಿಮಾ ಜರ್ನಿ
ಬೆಂಗಳೂರಿಗೆ ಬಂದ ಯಶ್ ಬೆನಕ ದ್ರಾಮ ಟ್ರೂಪ್ ಸೇರಿದರು. ಬ್ಯಾಕ್ ಸ್ಟೇಜ್ ಕೆಲಸಗಾರರಾಗಿ ವೃತ್ತಿ ಆರಂಭಿಸಿದರು. ಆಗ ಯಶ್ ಪಡೆಯುತ್ತಿದ್ದ ಸಂಬಳ ದಿನಕ್ಕೆ 50 ರೂಪಾಯಿ. ನಟ ಯಶ್ ಇಲ್ಲಿ ಕೆಲಸ ಮಾಡುತ್ತ ತಮ್ಮ ಕಾಲೇಜು ವಿದ್ಯಾರ್ಥಿ ಜೀವನವನ್ನು ಪೂರ್ಣಗೊಳಿಸಿದರು.

ನಂತರ ರಾಧಿಕಾ ಪಂಡಿತ್ (Radhika Pandith) ಜೊತೆ ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದರು. ಅನಂತರ 2007 ರಲ್ಲಿ ಜಂಬದ ಹುಡುಗಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.

Rocking star Yash's first salary went viral.
Image Source: India Today

ಕೋಟಿ ಕಲೆಕ್ಷನ್ ಮಾಡಿದ ಯಶ್ ಸಿನಿಮಾಗಳು
2011 ರಲ್ಲಿ ರಿಲೀಸ್ ಆದ ಕಿರಾತಕ ಸಿನಿಮಾ ಬಹಳ ಯಶಸ್ಸು ಕಂಡಿತು. ಹಳ್ಳಿ ಹೈದನ ಪಾತ್ರದ ಮೂಲಕ ಯಶ್ ಎಲ್ಲರ ಮನ ಗೆದ್ದಿದ್ದರು. ನಂತ್ರ ತೆರೆಗೆ ಬಂದ ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ರಾಮಾಚಾರಿ ಹೀಗೆ ಅನೇಕ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡವು.

Join Nadunudi News WhatsApp Group

ಆ ಬಳಿಕ 2014 ರಲ್ಲಿ ಬಿಡುಗಡೆಯಾದ ರಾಮಾಚಾರಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿ ರೆಕಾರ್ಡ್ ಬರೆಯಿತು. ಇದಾದ ನಂತರ ಕೆಜಿಎಫ್ 100 ಕೋಟಿ ಕಲೆಕ್ಷನ್ ಮಾಡಿತ್ತು. ಕೆಜಿಎಫ್ 2 (KJF 2) 1400 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತು.

Rocking star Yash's first salary went viral.
Image Source: Times Of India

Join Nadunudi News WhatsApp Group