Athiya Shetty Marriage Dress: ಆಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾ ತಯಾರಿಸಲು 1 ವರ್ಷ ತಗೆದುಕೊಂಡ ಡಿಸೈನರ್.

Athiya Shetty Marriage Dress: ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ (KL Rahul) ಮತ್ತು ಬಾಲಿವುಡ್ (Bollywood) ಖ್ಯಾತ ನಟಿ ಆಥಿಯಾ ಶೆಟ್ಟಿ (Athiya Shetty) ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಇದೀಗ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ ಎಲ್ ರಾಹುಲ್ ಜನವರಿ 23 ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲಾ ಬಂಗಲೆಯಲ್ಲಿ ಈ ಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Athiya Shetty Marriage Dress
Image Source: India Today

 

ನಟಿ ಆಥಿಯಾ ಶೆಟ್ಟಿ ಹಾಗು ಕೆ ಎಲ್ ರಾಹುಲ್ ಅವರ ಅದ್ದೂರಿ ಮದುವೆ
ಆಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣ (Social Media) ದಲ್ಲಿ ಈಗಾಗಲೇ ವೈರಲ್ ಆಗಿದೆ.

ಆಥಿಯಾ ಶೆಟ್ಟಿ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾ ಎಲ್ಲರ ಗಮನ ಸೆಳೆದಿದೆ. ಆಥಿಯಾ ಶೆಟ್ಟಿ ಅವರ ಮದುವೆ ಲೆಹೆಂಗಾ ತಯಾರಿಸಲು ತೆಗೆದುಕೊಂಡ ಸಮಯ ಕೇಳಿದರೆ ನೀವು ಶಾಕ್ ಆಗುತ್ತೀರಾ. ಈ ಬಗ್ಗೆ ಆಥಿಯಾ ಅವರ ಡ್ರೆಸ್ ಡಿಸೈನರ್ ಅನಾಮಿಕ ಖನ್ನಾ ರಿವೀಲ್ ಮಾಡಿದ್ದಾರೆ.

Join Nadunudi News WhatsApp Group

ಆಥಿಯಾ ಧರಿಸಿದ್ದ ಲೆಹಂಗಾ ತಯಾರಿಸಲು 10 ಸಾವಿರ ಗಂಟೆಗಳು ಬೇಕಾಯಿತು
ಮದುವೆಯಲ್ಲಿ ಆಥಿಯಾ ಪಿಂಕ್ ಬಣ್ಣದ ಗ್ರಾಂಡ್ ಡ್ರೆಸ್ ನಲ್ಲಿ ಮಿಂಚಿದರೆ ರಾಹುಲ್ ಬಿಳಿ ಬಣ್ಣದ ಶೇರ್ವಾನಿಯಲ್ಲಿ ಕಂಗೊಳಿಸಿದರು. ಆಥಿಯಾ ಧರಿಸಿದ್ದ ಲೆಹೆಂಗಾ ಮೇಲೆ ಹ್ಯಾಂಡ್ ಮೆಡ್ ವರ್ಕ್ ಮಾಡಿದ್ದು ವಿಶೇಷವಾಗಿದೆ.

Athiya Shetty Marriage Dress
Image Source: India Today

 

ಈ ಡ್ರೆಸ್ ಅನ್ನು ಕೈಯಿಂದ ನೇಯ್ದಿದ್ದಾರೆ, ಜರ್ದೋಜಿ ಮಚ್ಚು ಜಾಲಿ ವರ್ಕ್ ಅನ್ನು ರೇಷ್ಮೆಯಿಂದ ಮಾಡಿಸಲಾಗಿದೆ. ಆಥಿಯಾ ಶೆಟ್ಟಿ ಧರಿಸಿದ್ದ ಲೆಹಂಗಾವನ್ನು ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು ಬೇಕಾಯಿತು.

ಅಂದರೆ 1 ವರ್ಷ 51 ದಿನಗಳು ಬೇಕಾಯಿತು ಎಂಡ್ ಹೇಳಿದ್ದಾರೆ. ಇಷ್ಟು ಸುಂದರವಾಗಿ ಲೆಹೆಂಗಾ ತಯಾರಿಸಲು ಸ್ಫೂರ್ತಿಯೇ ಆಥಿಯಾ ಶೆಟ್ಟಿ ಎಂದು ಅನಾಮಿಕ ಖನ್ನಾ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಅಥಿಯಾ ಸುಂದರ ಟೇಸ್ಟ್ ಹೊಂದಿರುವ ವ್ಯಕ್ತಿಯಾಗಿದ್ದು, ಹಾಗಾಗಿ ಅವರಿಗಾಗಿ ಸ್ಪೆಷಲ್ ಆಗಿ ಲೆಹಾಂಗಾ ತಯಾರಿಸಿದ್ದಾರೆ.

Athiya Shetty Marriage Dress
Image Source: Times Of India

Join Nadunudi News WhatsApp Group