Meena Remuneration: ಪತಿ ನಿಧನದ ಬಳಿಕ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟಿ ಮೀನಾ.

Meena Remuneration: ಬಹುಭಾಷಾ ನಟಿ ಮೀನಾ (Actress Meena) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಪತಿ ಆಗಲಿ ಕೆಲವೇ ದಿನಗಳ ಬಳಿಕ ಮೀನಾ ಎರಡನೇ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿತ್ತು. ಆದರೆ ಈ ವಿಚಾರದ ಬಗ್ಗೆ ಸ್ವತಃ ಮೀನಾ ಸ್ಪಷ್ಟನೆ ನೀಡಿದ್ದಾರೆ. ಆದರೆ ಮೀನಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

Actress Meena increased her salary after her husband's death.
Image Credit: economictimes.indiatimes

ಪತಿ ಆಗಲಿ ಬಹಳ ದಿನಗಳ ನಂತರ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಹಳ ದಿನಗಳ ನಂತರ ನಟಿ ಪೋಸ್ಟ್ ಮಾಡಿದ ವಿಡಿಯೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಹೊಸ ವಿಡಿಯೋ ಹಂಚಿಕೊಂಡ ನಟಿ ಮೀನಾ
ತಮ್ಮ ಪತಿಯ ಅಗಲಿಕೆಯ ನೋವಿನಿಂದಾಗಿ ಮೀನಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ಬಹಳ ದಿನಗಳ ನಂತರ ಅವರು ತಾವು ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣ (Social Media) ದಲ್ಲಿ ಹಂಚಿಕೊಂಡಿದ್ದಾರೆ.

Actress Meena is back to act in films after a long time
Image Credit: indiatvnews

ಮತ್ತೆ ಬಣ್ಣ ಹಚ್ಚಲು ರೆಡಿಯಾದ ಮೀನಾ
ಇನ್ನು ಮೀನಾ ಇದೀಗ ಹೊಸ ಜಾಹಿರಾತು ಚಿತ್ರೀಕರಣಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಸಂದರ್ಭದಲ್ಲಿ ಮೀನಾ ಮೇಕಪ್ ಮಾಡಿಕೊಳ್ಳುವ ವಿಡಿಯೋಳನ್ನು ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಮೀನಾ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದರು.

ಹೊಸ ಪ್ರಾಜೆಕ್ಟ್ ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟ ಮೀನಾ
ಬಹುಭಾಷಾ ನಟಿ ಮೀನಾ ಈ ಹಿಂದೆ ನಾಯಕಿಯಾಗಿ ನಟಿಸಿದ್ದರು. ನಂತರ ಅವರು ಪೋಷಕ ಪಾತ್ರ ಮಾಡುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. ಇನ್ನು ಮತ್ತೆ ಚಿತ್ರರಂಗಕ್ಕೆ ಬರಲು ಸಿದ್ದರಾಗಿದ್ದಾರೆ. ಹೊಸ ಹೊಸ ಪ್ರಾಜೆಕ್ಟ್ ಗಳಿಗೆ ಮೀನಾ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Join Nadunudi News WhatsApp Group

Actress Meena is getting 25 to 30 lakhs per film
Image Credit: tollywood

ಹೆಚ್ಚಿನ ಸಂಭಾವನೆ ಪಡೆಯಲು ನಿರ್ಧರಿಸಿದ ಮೀನಾ
ಬಹುಭಾಶಾಹ ನಟಿ ಮೀನಾ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ದರಾಗಿದ್ದಾರೆ. ಆದರೆ ಮುಂಬರುವ ಚಿತ್ರಗಳಿಗೆ ಹೆಚ್ಚಿನ ಸಂಭಾವನೆ ಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆಫರ್ ಗಳು ಹೆಚ್ಚಾಗುತ್ತಿದ್ದಂತೆ ಸಂಭಾವನೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮೀನಾ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Actress Meena has increased her salary for the new film
Image Credit:jsnewstimes

ಕಳೆದ ವರ್ಷಕ್ಕೆ ಹೋಲಿಸಿದರೆ ಮೀನಾ ಭಾರಿ ಪ್ರಮಾಣದ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೀನಾ ಒಂದು ಚಿತ್ರಕ್ಕಾಗಿ 25-30 ಲಕ್ಷ ಸಂಭಾವನೆಯನ್ನು ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪತಿ ತೀರಿಕೊಂಡಿದ್ದರಿಂದ ಮಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮೀನಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Join Nadunudi News WhatsApp Group