Actress Prema: ನಟಿ ಪ್ರೇಮ ವಿಚ್ಛೇಧನ ಪಡೆದಿದ್ದು ಯಾಕೆ…? ಎರಡನೆಯ ಮದುವೆಯ ಬಗ್ಗೆ ನಟಿ ಪ್ರೇಮ ಮಾತು.

ನಟಿ ಪ್ರೇಮ ವಿವಾಹ ಆದ ಕೆಲವೇ ಸಮಯದ ನಂತರ ವಿಚ್ಛೇಧನ ಪಡೆದಿದ್ದು ಯಾಕೆ...?

Actress Prema About Her Divorce: ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರೇಮ ಇಂದಿಗೂ ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸುತ್ತಿಲ್ಲವಾದರೂ ಕೂಡ ಒಂದೊಂದು ಚಿತ್ರದಲ್ಲಿ ನಟಿಸುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇನ್ನು ಜೀ ವಾಹಿನಿಯಲ್ಲಿ ನಡೆಯುತ್ತಿರುವ ಮಹಾನಟಿ ಕಾರ್ಯಕ್ರಮದಲ್ಲಿ ಪ್ರೇಮ ಅವರು ತೀರ್ಪುಗಾರರಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಸದ್ಯ ನಟಿ ಪ್ರೇಮ ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬದುಕಿನ ಸಿಹಿ ಕಹಿ ಘಟನೆಗಳ ಬಗ್ಗೆ ಮನದಾಳದ ಮಾತನ್ನು ಆಡಿದ್ದಾರೆ. ನಟಿ ಪ್ರೇಮ ವಿವಾಹ ಆದ ಕೆಲವೇ ಸಮಯದ ನಂತರ ವಿಚ್ಛೇಧನ ಪಡೆದಿದ್ದು ಯಾಕೆ…? ಎನ್ನುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Actress Prema About Her Divorce
Image Credit: Deccanherald

ನಟಿ ಪ್ರೇಮ ವಿಚ್ಛೇಧನ ಪಡೆದಿದ್ದು ಯಾಕೆ…?
ಪ್ರೇಮಾ ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಜೀವನ್ ಅಪ್ಪಚ್ಚು ಅವರನ್ನು ವಿವಾಹವಾದರು. ಆದರೆ 2016ರಲ್ಲಿ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ಬಗ್ಗೆ ಪ್ರೇಮ ಹೇಳಿಕೊಂಡಿದ್ದಾರೆ. ಆಗ ನನಗೆ ಸರಿಯಾದ ಅವಕಾಶಗಳು ಸಿಗುತ್ತಿರಲಿಲ್ಲ. ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸಿದರು. ನನ್ನ ತಂಗಿ 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಹಾಗಾಗಿ ಮದುವೆ ಆಗದಿದ್ದರೆ ತಂಗಿಗೆ ಮದುವೆ ಆಗುವುದಿಲ್ಲ ಎಂದು ಅಪ್ಪ ಅಮ್ಮ ಹೇಳುತ್ತಿದ್ದರು. ಹಾಗಾಗಿ ಬೇಡ ಎನ್ನಲಾಗದೆ ಮದುವೆಗೆ ಒಪ್ಪಿಕೊಂಡೆ. ನಮ್ಮದು ಅರೇಂಜ್ಡ್ ಮ್ಯಾರೇಜ್ ಎಂದಿದ್ದಾರೆ ಪ್ರೇಮ.

ಮದುವೆಯ ಬಗ್ಗೆ ನಟಿ ಪ್ರೇಮ ಮಾತು
ಜೀವನ್ ಅಪ್ಪಚ್ಚು ಅವರನ್ನು ಮದುವೆಯಾಗಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರೇಮ, “ಅವರು ಆಗಾಗ ಮನೆಗೆ ಬರುತ್ತಿದ್ದರು. ಅವರೇ ಮದುವೆಯಾಗುತ್ತೀರಾ ಎಂದು ಕೇಳಿದರು. ಆಗ ಎಲ್ಲರೂ ಒಪ್ಪಿದರು. ಅವರ ಮನೆ ನಮ್ಮ ಮನೆಯ ಸಮೀಪದಲ್ಲಿದೆ. ಹಾಗಾಗಿ ನಾನು ನನ್ನ ತಾಯಿಯ ಮನೆಗೆ ಹೋಗಿ ನೋಡಬಹುದು ಎಂದು ಯೋಚಿಸಿ ಮದುವೆಗೆ ಒಪ್ಪಿಕೊಂಡೆ.

ಎಲ್ಲ ಹುಡುಗಿಯರಂತೆ ನನಗೂ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾದಲ್ಲಿ ಬ್ಯುಸಿ ಇದ್ದಿದ್ದರಿಂದ ಕನಸುಗಳನ್ನೆಲ್ಲ ಮುಂದೂಡುತ್ತಲೇ ಇದ್ದೆ. ಮದುವೆಯ ನಂತರ ಪಬ್ ಗೆ ಹೋಗೋದು, ಬೇರೆ ಕಡೆ ಹೋಗೋದು ಅಂತಾ ಎಂಜಾಯ್ ಮಾಡುದು ಎಲ್ಲ ಮದುವೆಯ ಬಳಿಕ ಎಂದುಕೊಂಡಿದ್ದೆ. ನನ್ನ ಪತಿ ಹೀಗಿರಬೇಕು ಎಂಬ ನಿರೀಕ್ಷೆ ಇದೆ. ಆದರೆ ಈ ಎಕ್ಸ್ಪೆಟೇಷನ್ ಹರ್ಟ್ ಆಗುದು ಎಂದಿದ್ದಾರೆ ಪ್ರೇಮ.

Join Nadunudi News WhatsApp Group

Actress Prema Latest News
Image Credit: Zeenews

ನನ್ನ ಮದುವೆಯ ನಿರ್ಧಾರ ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಅವಸರದಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. ಮದುವೆ ಒಂದು ಬದ್ಧತೆ. ಜವಾಬ್ದಾರಿ ಇದು ನನ್ನ ತಪ್ಪು ಅಲ್ಲ. ಇಬ್ಬರದ್ದು ಸರಿ ತಪ್ಪು ಇದೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಮದುವೆಯ ನಂತರ ನನಗೆ ಆ ಸ್ವಾತಂತ್ರ್ಯವಿಲ್ಲ ಎಂದು ಭಾವಿಸಿದೆ. ಎಲ್ಲಾ ಹುಡುಗಿಯರಿಗೆ ನಾನು ಹೇಳುವುದು ಇದನ್ನೇ, ಸಮಯ ತೆಗೆದುಕೊಳ್ಳಿ ಮತ್ತು ಯೋಚಿಸಿ. ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಮದುವೆ ಒಂದು ಜವಾಬ್ದಾರಿ. ಆತುರಪಡಬೇಡಿ ಎಂದರು.

Actress Prema
Image Credit: Zee News

Join Nadunudi News WhatsApp Group