Airplane Price: ಒಂದು ವಿಮಾನದ ಬೆಲೆ ಎಷ್ಟು, ಏಕೆ ಸಾಮಾನ್ಯ ಜನರು ಇದನ್ನು ಖರೀದಿಸಲು ಸಾಧ್ಯವಿಲ್ಲ.

ಒಂದು ವಿಮಾನದ ಬೆಲೆ ಎಷ್ಟು ಮತ್ತು ಯಾಕೆ ಅದನ್ನ ಸಾಮಾನ್ಯ ಜನರು ಖರೀದಿಸಲು ಸಾಧ್ಯವಿಲ್ಲ ತಿಳಿದುಕೊಳ್ಳಿ.

Airplane Cost And Details: ವಿಮಾನ (Airplane) ಪ್ರಯಾಣ ಮಾಡುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ವಿಮಾನ ಪ್ರಯಾಣದ ದರ ಹೆಚ್ಚು. ಇನ್ನು ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಗಿಂತ ಬಸ್ಸು, ಕಾರು, ರೈಲು ಬೈಕು ಗಳಲ್ಲಿ ಸಂಚರಿಸುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ವಿಮಾನಗಳ ಬೆಲೆ ಅತ್ಯಂತ ದುಬಾರಿ ಆಗಿರುತ್ತದೆ.

ಅನೇಕ ರೀತಿಯ ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ತಮ್ಮದೇ ಆದ ಸ್ವಂತ ವಿಮಾನವನ್ನು ಹೊಂದಿರುತ್ತಾರೆ. ಇನ್ನು ದೊಡ ಗಾತ್ರದ ಆಕಾಶದಲ್ಲಿ ತೇಲಾಡುವ ದೈತ್ಯ ವಿಮಾನದ ಬೆಲೆ ಎಷ್ಟಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Airplane Cost And Details
Image Credit: rd

ಒಂದು ವಿಮಾನದ ಬೆಲೆ ಎಷ್ಟು
ವಿಮಾನಗಳು ನೋಡಲು ದೊಡ್ಡದಾಗಿ ಹಾಗೂ ಆಕರ್ಷಕವಾಗಿ ಇರುತ್ತದೆ. ವಿಮಾನದಲ್ಲಿ ಅನೇಕ ರೀತಿಯ ಸೌಲಭ್ಯಗಳು ಇರುತ್ತದೆ. ಇನ್ನು ವಿಮಾನಗಳಿಗೆ ಯಾವುದೇ ನಿಗಧಿತ ಬೆಲೆ ಇರುವುದಿಲ್ಲ. ವಿಮಾನಗಳನ್ನು ಆದೇಶದ ಮೇರೆಗೆ ತಯಾರಿಸಲಾಗುತ್ತದೆ. ಅವುಗಳ ಗಾತ್ರ, ಉಪಕರಣಗಳು ಮತ್ತು ಅವುಗಳಲ್ಲಿ ಸ್ಥಾಪಿಸಲಾದ ಸೌಲಭ್ಯಗಳನ್ನು ಅವಲಂಭಿಸಿ ಅವುಗಳ ವೆಚ್ಚವು ಹೆಚ್ಚು ಅಥವಾ ಕಡಿಮೆ ಆಗುತ್ತದೆ.

airImage Credit: westend61ಆಸನಗಳ ಆಧಾರದ ಮೇಲೆ ವಿಮಾಗಳ ಬೆಲೆ ನಿಗದಿಯಾಗಿತ್ತದೆ
ಇನ್ನು 6 ಜನರ ಆಸನದ ಸಣ್ಣ ಗಾತ್ರದ ವಿಮಾನದ ಬೆಲೆ ಕಡಿಮೆ ಇರುತ್ತದೆ. 300 ಜನರ ಆಸನದ ವಿಮಾನವು ಅಧಿಕ ಬೆಲೆಯನ್ನು ಹೊಂದಿರುತ್ತದೆ. ಫೈನಾನ್ಸ್ ಆನ್ಲೈನ್ ವೆಬ್ ಸೈಟ್ ನ ಪ್ರಕಾರ, ಗಲ್ಫ್ ಸ್ಟ್ರೀಮ್ IV ವಿಮಾನದ ಬೆಲೆ $38 ಮಿಲಿಯನ್ ಅಂದರೆ 3 ಬಿಲಿಯನ್ 12 ಕೋಟಿ 57 ಲಕ್ಷ ರೂ. B -2 ಸ್ಪಿರಿಟ್ ವಿಮಾನದ ಬೆಲೆ ಸುಮಾರು $737 ಮಿಲಿಯನ್ ಅಂದರೆ ಸುಮಾರು 60 ಶತಕೋಟಿ ರೂ.

 

Join Nadunudi News WhatsApp Group

ಇನ್ನು ಬೋಯಿಂಗ್ ಕಂಪನಿಯ ವಿಮಾನಗಳ ವೆಚ್ಚವು ಅತ್ಯಂತ ದುಬಾರಿಯಾಗಿರುತ್ತದೆ. ಕೆಲವು ದೇಶಗಳಲ್ಲಿ ಮಾತ್ರ ವಿಮಾನಗಳನ್ನು ತಯಾರಿಸುವ ತಂತ್ರಜ್ಞಾನವಿದೆ. ವಿಮಾನಗಳ ದುಬಾರಿ ಬೆಲೆಗೆ ಕಾರಣವೆಂದರೆ ಅದರಲ್ಲಿ ಅತ್ಯಾಧುನಿಕ ತಂತ್ರಜ್ಞಾನ. ಯಂತ್ರಗಳು ಮತ್ತು ಮಾನವನ ಶ್ರಮ ಹೆಚ್ಚಿರುತ್ತದೆ. ಈ ಕಾರಣದಿಂದಾಗಿ ವಿಮಾನಗಳ ಬೆಲೆ ಹೆಚ್ಚಿರುತ್ತದೆ.

Join Nadunudi News WhatsApp Group