Amritbaal Scheme: ಪೋಷಕರೇ ಇನ್ಮುಂದೆ ಮಕ್ಕಳ ಶಿಕ್ಷಣ ಚಿಂತೆ ಬಿಟ್ಟುಬಿಡಿ, ಈ ಯೋಜನೆಯಲ್ಲಿ ಮಕ್ಕಳ ಎಲ್ಲಾ ಖರ್ಚು LIC ನೋಡಲಿದೆ

ಇನ್ಮುಂದೆ ಮಕ್ಕಳ ಶಿಕ್ಷಣದ ಚಿಂತೆ ಬಿಟ್ಟುಬಿಡಿ, LIC ಯಿಂದ ಜಾರಿಗೆ ಬಂತು ಅಮೃತಬಲ್ ಪಾಲಿಸಿ.

LIC New Amritbaal Scheme: ಈಗಾಗಲೇ Life insurance Corporation Of India ಸಾಕಷ್ಟು LIC ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ಜನರು LIC ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

ಇದೀಗ LIC ಮಕ್ಕಳಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿ ಮಕ್ಕಳ ಹೆಸರಿನಲ್ಲಿ ಹೂಡಿಕೆಯನ್ನು ಮಾಡುವುದರಿಂದ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡಬಹುದು. ನಾವೀಗ LIC ಈ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

LIC New Amrit Bal Scheme
Image Credit: Government Jobsinkarnataka

ಇನ್ಮುಂದೆ ಮಕ್ಕಳ ಶಿಕ್ಷಣದ ಚಿಂತೆ ಬಿಟ್ಟುಬಿಡಿ
ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವುದು ಪೋಷಕರ ಹೊಣೆಯಾಗಿರುತ್ತದೆ. ಮಕ್ಕಳ ಭವಿಷ್ಯವನ್ನು ರೂಪಿಸಲು ಹಣದ ಅವಶ್ಯಕತೆ ಇರುತ್ತದೆ. ಇನ್ನು ನೀವು LIC ಪರಿಚಯಿಸಿಯುವ ಈ Amrit baal ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಈ ಯೋಜನೆಗೆ ಸೇರಲು ಕನಿಷ್ಠ ವಯಸ್ಸಿನ ಮಿತಿಯು ಜನನದ ನಂತರ 30 ದಿನಗಳು ಮತ್ತು ಗರಿಷ್ಠ ವಯಸ್ಸಿನ ಮಿತಿ 13 ವರ್ಷಗಳು. Policy Maturity ಅವಧಿ ಕನಿಷ್ಠ 18 ವರ್ಷಗಳು ಹಾಗೆಯೆ ಗರಿಷ್ಠ 25 ವರ್ಷಗಳು. ಇನ್ನು 5, 6 ಅಥವಾ 7 ವರ್ಷಗಳ ಅಲ್ಪಾವಧಿಯ Premium ಪಾವತಿ ನಿಯಮಗಳು ಪಾಲಿಸಿಗೆ ಲಭ್ಯವಿದೆ. ಪಾಲಿಸಿದಾರನು Policy ಪಾವತಿಯ ಸಮಯದಲ್ಲಿ ಮರಣಹೊಂದಿದರೆ, ನಾಮಿನಿಗೆ ಮರಣದ ಪ್ರಯೋಜನಗಳನ್ನು ಸಹ ಒದಗಿಸಲಾಗುತ್ತದೆ.

LIC Amrit Bal Scheme 2024
Image Credit: TV9gujarati

LIC ಯಿಂದ ಜಾರಿಗೆ ಬಂತು ಅಮೃತಬಲ್ ಪಾಲಿಸಿ
ಪಾಲಿಸಿಯ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿರಬಹುದು. ಇದರಲ್ಲಿ ಕನಿಷ್ಠ ಕಂತು ಮೊತ್ತವು ಕ್ರಮವಾಗಿ ರೂ. 5000, ರೂ. 15000, ರೂ. 25000 ಅಥವಾ ರೂ. 50000 ಆಗಿರಬಹುದು. ಏಕ ಪ್ರೀಮಿಯಂ ಮತ್ತು ಸೀಮಿತ ಪ್ರೀಮಿಯಂ ಪಾವತಿಯ ಅಡಿಯಲ್ಲಿ ಲಭ್ಯವಿರುವ ಎರಡು ಆಯ್ಕೆಗಳ ಪ್ರಕಾರ ‘ಸಾವಿನ ವಿಮಾ ಮೊತ್ತ’ ಆಯ್ಕೆ ಮಾಡುವ ಆಯ್ಕೆ ಇರುತ್ತದೆ.

Join Nadunudi News WhatsApp Group

ಮಗುವಿನ ಅಗತ್ಯತೆಗಳಿಗೆ ಅನುಗುಣವಾಗಿ ಆಯ್ಕೆಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಏಕೆಂದರೆ ಯೋಜನೆಯ ಅಡಿಯಲ್ಲಿ ಪ್ರೀಮಿಯಂಗಳು ಮತ್ತು ಪ್ರಯೋಜನಗಳು ಆಯ್ಕೆಮಾಡಿದ ಆಯ್ಕೆಯ ಪ್ರಕಾರವಾಗಿರುತ್ತವೆ. ಆಯ್ಕೆಯ ನಂತರ ಬದಲಾವಣೆಗೆ ಅವಕಾಶ ಇರುವುದಿಲ್ಲ. ಏಕ ಪ್ರೀಮಿಯಂ ಪಾವತಿ ಹಾಗೂ ಸೀಮಿತಿ ಪ್ರೀಮಿಯಂ ಪಾವತಿಯ ಅಡಿಯಲ್ಲಿ ಆಯ್ಕೆಯನ್ನು ಆರಿಸಿಕೊಳ್ಳಬಹುದು.

Join Nadunudi News WhatsApp Group