Android Phone: ಆಂಡ್ರಾಯ್ಡ್ ಫೋನ್ ಬಳಕೆ ಮಾಡುವವರಿಗೆ ಎಚ್ಚರಿಕೆ ನೀಡಿದ ಸರ್ಕಾರ, ತಪ್ಪದೆ ಈ ಕೆಲಸ ಮಾಡಬೇಕು.

ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡುವವರಿಗೆ ಎಚ್ಚರಿಕೆಯ ಸಂದೇಶ, ಹ್ಯಾಕ್ ಆಗಲಿದೆ ನಿಮ್ಮ ಮೊಬೈಲ್.

Android Phone Hacking In India: ಸಾಮಾನ್ಯವಾಗಿ ಹೆಚ್ಚಿನ ಜನರು ಆಂಡ್ರಾಯ್ಡ್ ಮೊಬೈಲ್ ಫೋನ್ (Android Phone) ಗಳನ್ನೂ ಬಳಸುತ್ತಾರೆ. ಇತ್ತೀಚೆಗಂತೂ ವಿಭಿನ್ನ ರೀತಿಯ ತಂತ್ರಜ್ಞಾನಗಳು ಬೆಳಕಿಗೆ ಬಂದಿವೆ. ನಮ್ಮ ದೇಶದಲ್ಲಿ ಕೂಡ 5G ಸೇವೆಗಳು ಆರಂಭವಾಗಲಿದೆ.

ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಹ್ಯಾಕರ್ ಗಳ ಹಾವಳಿ ಕೂಡ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಇದೀಗ ಆಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.

Android Phone Hacking In India
Image Source: Economic Times

ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ
CERT -IN ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಕೆಲವು ಆವೃತ್ತಿಗಳಲ್ಲಿ ಅವರು ಹೊಸ ದೋಷಗಳನ್ನು ಕಂಡುಕೊಂಡಿದ್ದಾರೆ ಮತ್ತು ಅದನ್ನು ಹೆಚ್ಚಿನ ತೀವ್ರತೆ ಎಂದು ವರ್ಗಿಕರಿಸಿದ್ದಾರೆ ಎಂದು ಸರ್ಕಾರಿ ಸಂಸ್ಥೆ ವರದಿ ನೀಡಿದೆ.

ಆಂಡ್ರಾಯ್ಡ್ ಫೋನ್ ಗಳಲ್ಲಿ ದುರ್ಬಲತೆ ಹೆಚ್ಚಾಗಿವೆ
CERT -ಇನ್ ನ ವರದಿಯ ಪ್ರಕಾರ, ಆಂಡ್ರಾಯ್ಡ್ 11, ಆಂಡ್ರಾಯ್ಡ್ 12, ಆಂಡ್ರಾಯ್ಡ್ 12L, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸಾಧನಗಳು Android ಆಪರೇಟಿಂಗ್ ಸಿಸ್ಟಮ್ ನಲ್ಲಿ (Android Operating System) ಕಂಡುಬರುವ ದೋಷಗಳಿಂದ ಪರಿಣಾಮ ಬೀರಬಹುದು.

Android Phone Hacking In India
Image Source: Auto Mobile India

Android OS 11 12 12L ಮತ್ತು 13 ನಲ್ಲಿ ಹಲವಾರು ದುರ್ಬಲತೆಗಳು ಇದೆ ಎಂದು ವರದಿಯಾಗಿದೆ. ಹ್ಯಾಕರ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಅನಿಯಂತ್ರಿಕ ಕೋಡ್ ಅನ್ನು ಕಾರ್ಯಗತಗೊಳಿಸಲು ಮತ್ತು ಸಾಧನಕ್ಕೆ ವಿಶೇಷ ಪ್ರವೇಶವನ್ನು ಪಡೆಯಲು ಈ ದುರ್ಬಲತೆಯನ್ನು ಬಳಸಬಹುದು.

Join Nadunudi News WhatsApp Group

CERT-In ಪ್ರಕಾರ ಮೊಬೈಲ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಇತ್ತೀಚಿನ ಭದ್ರತಾ ಪ್ಯಾಚ್ ಅನ್ನು ಸ್ಥಾಪಿಸಲು ಸಲಹೆ ನೀಡಿದೆ. ನವೀಕರಣವು ಈ ದೋಷಗಳನ್ನು ತೆಗೆದುಹಾಕುತ್ತದೆ. ಬಳಕೆದಾರರು ತಮ್ಮ ಸಾಧನಗಳಲ್ಲಿ ನವೀಕರಣಕ್ಕೆ ಅಪ್ಡೇಟ್ ಮಾಡಬೇಕು ಎಂದು  CERT -In ತಿಳಿಸಿದೆ.

Android Phone Hacking In India
Image Source: eBay Ink

Join Nadunudi News WhatsApp Group