Android Phone: ಮೊಬೈಲ್ ಬಳಸುವ ಎಲ್ಲಾ ಜನರು ಕೂಡಲೇ ಈ ಕೆಲಸ ಮಾಡಬೇಕು, ಕೇಂದ್ರದಿಂದ ಎಚ್ಚರಿಕೆ.

ಇದೀಗ ಕೇಂದ್ರ ಸರ್ಕಾರ ಮೊಬೈಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.

Android Phone Issues: ಪ್ರಸ್ತುತ ಜಗತ್ತಿನಲ್ಲಿ ಮೊಬೈಲ್ (Mobile) ಮಾನವನ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಕೂಡ ಮೊಬೈಲ್ ಫೋನ್ ಗಳನ್ನೂ ಬಳಸುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಫೋನ್ ಗಳು ಬಿಡುಗಡೆಯಾಗುತ್ತಲೇ ಇದೆ.

ಇತ್ತೀಚಿಗೆ ಕೇಂದ್ರ ಸರ್ಕಾರ ಮೊಬೈಲ್ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್(Update) ಅನ್ನು ನೀಡುತ್ತಲೇ ಇದ್ದೆ. ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ಹ್ಯಾಕರ್ ಗಳ ಹಾವಳಿ ಕೂಡ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್(Cyber Crime) ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಇದೀಗ ಆಂಡ್ರಾಯ್ಡ್ ಫೋನ್(Android Phone) ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರು ದೊಡ್ಡ ಪ್ರಮಾಣದ ಸಂಕಷ್ಟ ಎದುರಿಸಬೇಕಿದೆ.

Android Phone Issues
Image Credit: CNET

ಆಂಡ್ರಾಯ್ಡ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ
Android ಫೋನ್ ಗಳಲ್ಲಿ ಹೆಚ್ಚಿನ ಅಪಾಯದ ದೋಷಗಳನ್ನು ಸರ್ಕಾರ ಪತ್ತೆ ಮಾಡಿದೆ. CERT -IN ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಕೆಲವು ಆವೃತ್ತಿಗಳಲ್ಲಿ ಅವರು ಹೊಸ ದೋಷಗಳನ್ನು ಕಂಡುಕೊಂಡಿದ್ದಾರೆ ಮತ್ತು ಅದನ್ನು ಹೆಚ್ಚಿನ ತೀವ್ರತೆ ಎಂದು ವರ್ಗಿಕರಿಸಿದ್ದಾರೆ ಎಂದು ಸರ್ಕಾರಿ ಸಂಸ್ಥೆ ವರದಿ ನೀಡಿದೆ.

Android Phone ಗಳಲ್ಲಿ ದುರ್ಬಲತೆ ಹೆಚ್ಚಾಗಿವೆ
CERT -In ನ ವರದಿಯ ಪ್ರಕಾರ, ಆಂಡ್ರಾಯ್ಡ್ 11, ಆಂಡ್ರಾಯ್ಡ್ 12, ಆಂಡ್ರಾಯ್ಡ್ 12L, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುವ ಸಾಧನಗಳು Android ಆಪರೇಟಿಂಗ್ ಸಿಸ್ಟಮ್ ನಲ್ಲಿ (Android Operating System) ಕಂಡುಬರುವ ದೋಷಗಳಿಂದ ಪರಿಣಾಮ ಬೀರಬಹುದು. Android OS 11 12 12L ಮತ್ತು 13 ನಲ್ಲಿ ಹಲವಾರು ದುರ್ಬಲತೆಗಳು ಇದೆ ಎಂದು ವರದಿಯಾಗಿದೆ. ಹ್ಯಾಕರ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು.

Warning from the government for Android users
Image Credit: Hindustantimes

ಅನಿಯಂತ್ರಿಕ ಕೋಡ್ ಅನ್ನು ಕಾರ್ಯಗತಗೊಳಿಸಲು ಮತ್ತು ಸಾಧನಕ್ಕೆ ವಿಶೇಷ ಪ್ರವೇಶವನ್ನು ಪಡೆಯಲು ಈ ದುರ್ಬಲತೆಯನ್ನು ಬಳಸಬಹುದು. CERT-In ಪ್ರಕಾರ ಮೊಬೈಲ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಇತ್ತೀಚಿನ ಭದ್ರತಾ ಪ್ಯಾಚ್ ಅನ್ನು ಸ್ಥಾಪಿಸಲು ಸಲಹೆ ನೀಡಿದೆ. ನವೀಕರಣವು ಈ ದೋಷಗಳನ್ನು ತೆಗೆದುಹಾಕುತ್ತದೆ. ಬಳಕೆದಾರರು ತಮ್ಮ ಸಾಧನಗಳಲ್ಲಿ ನವೀಕರಣಕ್ಕೆ ಅಪ್ಡೇಟ್ ಮಾಡಬೇಕು ಎಂದು CERT-In ತಿಳಿಸಿದೆ.

Join Nadunudi News WhatsApp Group

Join Nadunudi News WhatsApp Group