Guarantee Scheme: ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಹಣ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್, ಮಾರ್ಚ್ 25 ಕೊನೆಯ ದಿನಾಂಕ

ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳಿಗೆ ಡೆಡ್ ಲೈನ್

Anna Bhagya And Gruha Lakshmi Scheme Latest Update: ರಾಜ್ಯ ಸರ್ಕಾರ ಪರಿಚಯಿಸಿರುವ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ Anna Bhagya ಹಾಗೂ Gruha Lakshmi ಯೋಜನೆಗೆ ಸಂಬಂಧಿಸಿದಂತೆ ಈಗಲೂ ಕೂಡ ದಿನಕ್ಕೊಂದು ಹೊಸ ಹೊಸ ಅಪ್ಡೇಟ್ ಹೊರಬೀಳುತ್ತಿರುತ್ತದೆ. ಯೋಜನೆಗಳು ಅನುಷ್ಠಾನಗೊಂಡು ಹಲವು ತಿಂಗಳು ಕಳೆಯುತ್ತಿದ್ದರು ಕೂಡ ಯೋಜನೆಯ ಲಾಭ ಸಂಪೂರ್ಣ ಅರ್ಹರಿಗೆ ಲಭ್ಯವಾಗುತ್ತಿಲ್ಲ.

ಎರಡು ಯೋಜನೆಗಳ ಹಣ ಅರ್ಹರ ಕಾಹ್ತೆಗೆ ತಲುಪುತ್ತಿಲ್ಲ. ಸದ್ಯ ರಾಜ್ಯ ಸರ್ಕಾರದಿಂದ Anna Bhagya ಹಾಗೂ Gruha Lakshmi ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಯೋಜನೆಯ ಫಲಾನುಭವಿಗಳು ನಿಗದಿತ ಸಮಯದೊಳಗೆ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Anna Bhagya Scheme Latest Update
Image Credit: Oneindia

ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳಿಗೆ ಡೆಡ್ ಲೈನ್
ಸದ್ಯ ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳಿಗೆ ಡೆಡ್ ಲೈನ್ ಫಿಕ್ಸ್ ಆಗಿದೆ. ಮಾರ್ಚ್ 25 ರೊಳಗೆ ಗೃಹ ಲಕ್ಷ್ಮಿ ಹಾಗೂ ಅನ್ನ ಭಾಗ್ಯ ಫಲಾನುಭವಿಗಳು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ.

ಗೃಹ ಲಕ್ಷ್ಮಿ, ಅನ್ನ ಭಾಗ್ಯ ಅರ್ಜಿದಾರರು KYC , Aadhar Link , ಹಾಗೂ NPCI ಲಿಂಕ್ ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ. ಈ ಎಲ್ಲ ಪ್ರಕ್ರಿಯೆಯಲ್ಲಿ ಯಾವುದೇ ಕೆಲಸ ಬಾಕಿ ಇದ್ದರು ಇನ್ನುಮುಂದೆ ನಿಮ್ಮ ಖಾತೆಗೆ ಎರಡು ಯೋಜನೆಗಳ ಹಣ ಜಮಾ ಆಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ.

Gruha Lakshmi Scheme Latest Update
Image Credit: Livemint

ಯೋಜನೆಯ ಲಾಭ ಪಡೆಯಲು ಆದಷ್ಟು ಬೇಗ ಈ ಕೆಲಸಗಳನ್ನು ಮಾಡಿ
ಇನ್ನು ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆದರೆ ನಿಮ್ಮ ಪೋಸ್ಟ್ ಆಫೀಸ್ ಖಾತೆಗೆ ಯಾವುದೇ ಸಮಸ್ಯೆ ಇಲ್ಲದಯೇ ಹಣ ನೇರವಾಗಿ ಜಮಾ ಆಗಲಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಹಣ ಜಮಾ ಆಗದೆ ಇದ್ದರೆ, ಮೊದಲು ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಗೃಹ ಲಕ್ಷ್ಮಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಕ್ಕಿರುವ ಸ್ವೀಕೃತಿ ಎಲ್ಲವನ್ನು ಕೊಟ್ಟು ನಿಮ್ಮ ಖಾತೆಗೆ ಹಣ ಯಾಕೆ ಬಂದಿಲ್ಲ ಎನ್ನುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಸಿಡಿಪಿಒ ಕಚೇರಿಯಲ್ಲಿ ನಿಮ್ಮ ಅರ್ಜಿ ಅನುಮೋದನೆ ಬಾಕಿಯಿದ್ದರೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

Join Nadunudi News WhatsApp Group

Anna Bhagya And Gruha Lakshmi Scheme Latest Update
Image Credit: Karnataka Times

Join Nadunudi News WhatsApp Group