Solar Yojana: ನರೇಂದ್ರ ಮೋದಿ ಸೋಲಾರ್ ಸ್ಕೀಮ್ ಸಬ್ಸಿಡಿ ಪಡೆಯುವುದು ಹೇಗೆ…? ಬೇಕಾದ ದಾಖಲೆಗಳು ಏನು…?

PM ಸೂರ್ಯ ಘರ್ ಯೋಜನೆಯ ಲಾಭ ಪಡೆಯುವುದು ಹೇಗೆ...?

How To Apply Surya Ghar Muft Bijli Scheme: ಸದ್ಯ ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಮಗದೊಂದು ಯೋಜನೆಯನ್ನು ಆರಂಭಿಸಿದೆ. ಈ ನೂತನ ಯೋಜನೆಯಡಿ ಅರ್ಹರು ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆದುಕೊಳ್ಳಬಹುದು. ಸದ್ಯ ಮೋದಿ ಸರ್ಕಾರ ದೇಶದ ಜನರಿಗೆ ಉಚಿತ ವಿದ್ಯುತ್ ನೀಡಲು Surya Ghar Muft Bijli ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಡಿ ದೇಶದ ಜನತೆಗೆ ಉಚಿತವಾಗಿ 300 ಯುನಿಟ್ ವಿದ್ಯುತ್ ಅನ್ನು ನೀಡಲಾಗುತ್ತದೆ. ಉಚಿತ ವಿದ್ಯುತ್ ಗಾಗಿ ಮೇಲ್ಚಾವಣಿ ಸೌರ ಯೋಜನೆಯನ್ನು ಘೋಷಿಸಿರುವುದಾಗಿ ಮೋದಿ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಈ ಯೋಜನೆಯಡಿ ಮನೆಯ ಮೇಲ್ಚಾವಣಿಗೆ ಸೌರ ಫಲಕವನ್ನು ಹಾಕಿಸಿಕೊಂಡರೆ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

PM Surya Ghar Muft Bijli Yojana
Image Credit: Eprmagazine

PM ಸೂರ್ಯ ಘರ್ ಯೋಜನೆ
ಸದ್ಯ ಲೋಕ ಚುನಾವಣೆಗೂ ಮುನ್ನವೇ ಕೇಂದ್ರದಿಂದ ಉಚಿತ ವಿದ್ಯುತ್ ಯೋಜನೆ ಘೋಷಣೆಯಾಗಿದೆ.  ದೇಶದ 1 ಕೋಟಿ ಕುಟುಂಬಗಳಿಗೆ ನೆರವಾಗಲು ಮೋದಿ ಸರ್ಕಾರ 300 ಯೂನಿಟ್‌ ಗಳವರೆಗೆ ಉಚಿತ ವಿದ್ಯುತ್ ನೀಡಲು  ಮುಂದಾಗಿದೆ. ಸರ್ಕಾರದ ಈ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಪಡೆಯುವುದರ ಜೊತೆಗೆ ಫಲಾನುಭವಿಗಳು ಆದಾಯವನ್ನು ಕೂಡ ಗಳಿಸಬಹುದು. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗಾಗಿ ಸರಕಾರ 75,021 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

PM ಸೂರ್ಯ ಘರ್ ಯೋಜನೆಯ ಲಾಭ ಪಡೆಯುವುದು ಹೇಗೆ…?
PM ಸೂರ್ಯ ಘರ್ ಯೋಜನೆಯಡಿಯಲ್ಲಿ 2 ಕಿಲೋವ್ಯಾಟ್ ವರೆಗಿನ ಸೋಲಾರ್ ಪ್ಲಾಂಟ್‌ ಗಳಿಗೆ ಶೇ.60 ಸಬ್ಸಿಡಿ ಮತ್ತು 1 ಕಿ.ವಾ.ಗೆ ಶೇ.40 ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲು ಪ್ರತಿ ಕುಟುಂಬಕ್ಕೆ 78,000 ಸಹಾಯಧನ ಸಿಗುತ್ತದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ, 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ವರ್ಷಕ್ಕೆ 15,000 ರೂ. ಸಹಾಯಧನದ ಲಾಭ ಸಿಗಲಿದೆ.

300 Unit Free Electricity
Image Credit: Oneindia

ಉಚಿತ ವಿದ್ಯುತ್ ಪಡೆಯಲು ನಿಯಮಗಳೇನು…?
•ಉಚಿತ ವಿದ್ಯುತ್ ನ ಲಾಭ ಪಡೆಯಲು ಅರ್ಜಿದಾರರು ಭಾರತೀಯ ನಿವಾಸಿ ಆಗಿರಬೇಕು.

Join Nadunudi News WhatsApp Group

•ಕುಟುಂಬದ ಯಾವುದೇ ಸದಸ್ಯ ಸರ್ಕಾರೀ ನೌಕರಿ ಹೊಂದಿರಬಾರದು.

•ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದು ಕಡ್ಡಾಯ.

•ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 1 .5 ಲಕ್ಷಕ್ಕಿಂತ ಕಡಿಮೆ ಇರಬೇಕು

•ಇನ್ನು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು https://pmsuryaghar.gov.in/ ನ ಅಧಿಕೃತ WebSite ಗೆ ಭೇಟಿ ನೀಡಿ ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group