APY Withdrawal: ಅವಧಿಗೂ ಮುನ್ನವೇ ಅಟಲ್ ಪಿಂಚಣಿ ಯೋಜನೆಯ ಹಣ ಪಡೆಯುವುದು ಹೇಗೆ…? ಇಲ್ಲಿದೆ ಡೀಟೇಲ್ಸ್

ಅವಧಿಗೂ ಮುನ್ನ ಅಟಲ್ ಪಿಂಚಣಿ ಯೋಜನೆಯ ಹಣ ಪಡೆಯುವ ವಿಧಾನ

APY Premature Exit Rule: ಇನ್ನು  60 ವರ್ಷ ಮೇಲ್ಪಟ್ಟ ನಂತರ ನಿವೃತ್ತಿಯ  ಜೀವನ ನಿರ್ವಹಣೆಗಾಗಿ  ಕೇಂದ್ರದಿಂದ Atal Pension Yojana ಉತ್ತಮವಾಗಿದೆ ಎನ್ನಬಹುದು. ಜನರು ಈ ಯೋಜನೆಯಡಿಯಲ್ಲಿ ಹೂಡಿಕೆಯನ್ನು ಪ್ರಾರಂಭಿಸುವ ಮೂಲಕ ಪಿಂಚಣಿಯ ಮೊತ್ತವನ್ನು ಪಡೆಯಬಹುದು.

Atal Pension Yojana ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಇದೀಗ ನಾವು ಅವಧಿಗೂ ಮುನ್ನವೇ ಅಟಲ್ ಪಿಂಚಣಿ ಯೋಜನೆಯ ಹಣ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.

Atal Pension Scheme Details
Image Credit: Sarkariyojnaa

60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5000 ಪಿಂಚಣಿ
ಅಟಲ್ ಪಿಂಚಣಿ ಯೋಜನೆಯನ್ನು (Atal Pension Scheme) ಕೇಂದ್ರ ಸರ್ಕಾರ  2015 ರಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.

ಈ ಯೋಜನೆಗಳಲ್ಲಿ 210 ರೂ.ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 20 ವರ್ಷಗಳ ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಸಂಗಾತಿಗೆ ಪಿಂಚಣಿ ದೊರೆಯುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ ಪಿಂಚಣಿ ನಿಧಿಯು ನಾಮಿನಿಗೆ ಸಿಗುತ್ತದೆ.

Atal Pension Scheme Investment
Image Credit: Zee News

ಅವಧಿಗೂ ಮುನ್ನವೇ ಅಟಲ್ ಪಿಂಚಣಿ ಯೋಜನೆಯ ಹಣ ಪಡೆಯುವುದು ಹೇಗೆ…?
ಅರ್ಜಿದಾರರು 60 ವರ್ಷಕ್ಕಿಂತ ಮೊದಲು ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಬಯಸಿದರೆ ಈ ರೀತಿಯಲ್ಲಿ ಮಾತ್ರ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group

1. ಅನಾರೋಗ್ಯದ ಸಮಸ್ಯೆ ಇದ್ದರೆ
ಅರ್ಜಿದಾರರು ಯಾವುದೇ ಗಂಭೀರ ಅಥವಾ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ಯೋಜನೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಬಯಸಿದರೆ ಮತ್ತು ಅವರು ಯೋಜನೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ಈ ಪರಿಸ್ಥಿತಿಯಲ್ಲಿ ಅವರು ಠೇವಣಿ ಮಾಡಿದ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು. ಈ ಪರಿಸ್ಥಿತಿಯಲ್ಲಿ ಅವರು ತಮ್ಮ ಠೇವಣಿಗಳ ಜೊತೆಗೆ ಗಳಿಸುವ ಮೊತ್ತ, ಸರ್ಕಾರದ ಕೊಡುಗೆಯ ಮೊತ್ತ ಮತ್ತು ಅದರ ಮೇಲೆ ಪಡೆದ ಆದಾಯವು ಅವರ ಖಾತೆಗೆ ಬರುತ್ತದೆ.

APY Premature Exit Rule
Image Credit: Godigit

2 . ಸ್ವಯಂಪ್ರೇರಿತ ಹಿಂಪಡೆದುಕೊಳ್ಳುವಿಕೆ
ಹಿಂತೆಗೆದುಕೊಳ್ಳಲು ಯಾವುದೇ ನಿರ್ದಿಷ್ಟ ಕಾರಣವಿಲ್ಲದಿದ್ದರೆ, ಅರ್ಜಿದಾರರು 60 ವರ್ಷ ವಯಸ್ಸಿನ ಮೊದಲು ಯೋಜನೆಯಲ್ಲಿನ ಕೊಡುಗೆಯನ್ನು ನಿಲ್ಲಿಸುವ ಮೂಲಕ ಹಣವನ್ನು ಹಿಂಪಡೆಯಲು ಸ್ವಯಂಪ್ರೇರಣೆಯಿಂದ ಬಯಸುತ್ತಾರೆ. ನಂತರ ಈ ಸಂದರ್ಭದಲ್ಲಿ ಖಾತೆ ನಿರ್ವಹಣೆ ಮತ್ತು ಮುಂತಾದ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಚಂದಾದಾರರಿಗೆ ಕೊಡುಗೆಯನ್ನು ನೀಡಲಾಗುತ್ತದೆ.

Join Nadunudi News WhatsApp Group