Ram Lalla: ಈ ಒಂದು ಕಾರಣಕ್ಕೆ ರಾಮನ ಕಣ್ಣುಗಳನ್ನ ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಿಂದ ಕೆತ್ತಲಾಗಿದೆ, ಅರುಣ್ ಯೋಗಿರಾಜ್

ಶ್ರೀರಾಮನ ಕಣ್ಣುಗಳನ್ನು ಕೆತ್ತಲು ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಬಳಸಲಾಗಿದೆ

Ram Lalla Idol: ಹಿಂದೂಗಳ ಹಲವು ವರ್ಷದ ಕನಸು ಅಯೋಧ್ಯ ರಾಮ ಮಂದಿರ (Ram Mandir) ನಿರ್ಮಾಣ ಈ ವರ್ಷದಲ್ಲಿ ನನಸಾಗಲಿದೆ. ಅಯೋದ್ಯೆಯಲ್ಲಿ ಶ್ರೀರಾಮ ನೆಲಸಿದ್ದು, ಸದ್ಯ ಲಕ್ಷಂತಾರ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ಸದ್ಯ ಎಲ್ಲೆಡೆ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದೆ.

ರಾಮ ಮಂದಿರದಲ್ಲಿ ನೆಲೆಸಿರುವ ರಾಮ ಲಲ್ಲಾ ಮೂರ್ತಿಯು ಇದೀಗ ಜನರ ಮನಸ್ಸಿಗೆ ಹತ್ತಿರವಾಗುತ್ತಿದೆ. ಎಲ್ಲೆಡೆ ರಾಮನ ವಿಗ್ರಹದ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ರಾಮನ ವಿಗ್ರವಹು ಬಹಳ ವಿಶೇಷವಾಗಿದ್ದು ಎಲ್ಲರು ಇಷ್ಟಪಟ್ಟಿದ್ದಾರೆ. ಸದ್ಯ ರಾಮ ಲಲ್ಲಾ ಮೂರ್ತಿ ಕೆತ್ತಿರುವ ಶಿಲ್ಪಿ ವಿಗ್ರಹದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನೀವು ಶ್ರೀರಾಮ ಲಲ್ಲಾ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಓದಿ.

Ram Lalla Idol Made By Sculptor Arun Yogiraj
Image Credit: India

ರಾಮ ಲಲ್ಲಾ ಮೂರ್ತಿ ಕೆತ್ತಿದವರು ಯಾರು.. ?
ಇನ್ನು 29 ಡಿಸೆಂಬರ್ 2023 ರಂದು ರಾಮ ಮಂದಿರಕ್ಕಾಗಿ ರಾಮ ಲಲ್ಲಾನ ವಿಗ್ರಹದ ಆಯ್ಕೆಯನ್ನು ಮಾಡಲಾಯಿತು. ಭಾರತದಾದ್ಯಂತ ವಿವಿಧ ಪ್ರತಿಮೆಗಳಿಗೆ ಹೆಸರುವಾಸಿಯಾದ ಶಿಲ್ಪಿ, ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj) ಅವರು ರಾಮನ ವಿಗ್ರಹವನ್ನು ರಚಿಸಿದ್ದಾರೆ. ಕರ್ನಾಟಕದ ಶಿಲ್ಪಿ ನಿರ್ಮಿಸಿದ ರಾಮನ ವಿಗ್ರಹ ಜನವರಿ 22 ರಂದು ಅಯೋದ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದೆ.

ರಾಮನ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯಿಂದ ಕೆತ್ತಲಾಗಿದೆ
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ರಾಮ ಲಲ್ಲಾ ಪ್ರತಿಮೆ 51 ಇಂಚು ಎತ್ತರ ಮತ್ತು 1.5 ಟನ್ ತೂಕವಿದೆ. ನೇಪಾಳದಿಂದ ತಂದ ಶಾಲಿಗ್ರಾಮ್ ಎಂದು ಕರೆಯಲ್ಪಡುವ ವಿಶೇಷ ಬಂಡೆಗಳಿಂದ ಪ್ರತಿಮೆಯನ್ನು ಮಾಡಲಾಗಿದೆ. ಸುಮಾರು 60 ಮಿಲಿಯನ್ ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ, ಈ ಬಂಡೆಗಳು ಹಿಂದೂ ಧಾರ್ಮಿಕ ಪದ್ಧತಿಗಳಲ್ಲಿ ಮಹತ್ವದ್ದಾಗಿದೆ.

Ayodhya Ram Mandir Latest News Updates
Image Credit: NDTV

ಇನ್ನು ಶ್ರೀರಾಮ ಲಲ್ಲಾ ಮೂರ್ತಿಯಲ್ಲಿ ರಾಮನ ಕಣ್ಣುಗಳು ಬಹಳ ವಿಶೇಷವಾಗಿದೆ. ವಿಗ್ರಹದ ಕಣ್ಣುಗಳು ತಮ್ಮ ಜೀವಂತಿಕೆಯ ಅಭಿವ್ಯಕ್ತಿ ಮತ್ತು ಆಳಕ್ಕೆ ವಿಶೇಷವಾಗಿ ಗಮನ ಸೆಳೆಯುತ್ತವೆ. ಶಿಲ್ಪಿ ಅರುಣ್ ಯೋಗಿರಾಜ್ ಅವರು ಸಂದರ್ಶನದ್ಲಲಿ ರಾಮನ ಕಣ್ಣುಗಳು ಹೇಗೆ ಕೆತ್ತಲಾಗಿದೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ.

Join Nadunudi News WhatsApp Group

ಶ್ರೀರಾಮನ ಕಣ್ಣುಗಳನ್ನು ಕೆತ್ತಲು ಶಿಲ್ಪಿ ಅರುಣ್ ಯೋಗಿರಾಜ್ ಅವರು ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಬಳಸಿದ್ದಾರಂತೆ. ಹೀಗಾಗಿ ರಾಮನ್ ಕಣ್ಣುಗಳು ಹೆಚ್ಚು ಆಕರ್ಷಣೀಯವಾಗಿದೆ. ಇನ್ನು ಚಿನ್ನದ ಉಳಿ ಮತ್ತು ಬೆಳ್ಳಿಯ ಸುತ್ತಿಗೆಯನ್ನು ಬಳಸಿ ವಿಗ್ರಹದ ಕಣ್ಣುಗಳು ಕೆತ್ತಿವುದು ನಿಯಮವಾಗಿದೆ ಎಂದು ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಾರೆ.

Join Nadunudi News WhatsApp Group