APY 2024: 60 ವರ್ಷ ಮೇಲ್ಪಟ್ಟವರು 210 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 5000 ರೂ, ಇಂದೇ ಅರ್ಜಿ ಹಾಕಿ.

60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ 5000 ರೂ ಪಿಂಚಣಿ

Atal Pension Scheme Benefits For Senior Citizens: ವಯಸ್ಸಿನಲ್ಲಿ ದುಡಿಯಲು ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ವಯಸ್ಸಾದ ಬಳಿಕ ದುಡಿಯುವ ಸಾಮರ್ಥ್ಯವಿಲ್ಲದೆ ಆರ್ಥಿಕ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ಕಷ್ಟದಿಂದ ತಪ್ಪಿಸಿಕೊಳ್ಳಲು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಪಿಂಚಣಿ ಯೋಜನೆಯಲ್ಲಿನ ಹೂಡಿಕೆಯು ದುಡಿಯುವ ಸಾಮರ್ಥ್ಯ ಕೆಳೆದುಕೊಂಡಾಗ ಅಥವಾ ನಿವೃತ್ತಿ ಹೊಂದಿದ ನಂತರ ಜೀವನ ನಿರ್ವಹಣೆಗೆ ಸಹಾಯವಾಗುತ್ತದೆ.

Atal Pension Scheme Benefits For Senior Citizens
Image Credit: Sarkari Yojnaa

60 ವರ್ಷ ಮೇಲ್ಪಟ್ಟವರಿಗಾಗಿ ಹೊಸ ಪಿಂಚಣಿ ಯೋಜನೆ ಜಾರಿ
ನಿಮ್ಮ ಆಯ್ಕೆಗೆ ಅನುಗುಣವಾಗಿ ಸಣ್ಣ ಮೊತ್ತವನ್ನು ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆಯಲ್ಲಿ ಮಾಡಿದರೆ ನಿವೃತ್ತಿಯ ನಂತರ ಮಾಸಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ನೀಡುವ ಸಲುವಾಗಿ ಸರ್ಕಾರ Atal Pension Scheme ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೀವು ಹೂಡಿಕೆಯನ್ನು ಆರಂಭಿಸಿದರೆ ನಿಮಗೆ 60 ವರ್ಷವಾದಾಗ ಯಾವುದೇ ಚಿಂತೆಯಿಲ್ಲದೆ ಪಿಂಚಣಿಯನ್ನು ಪಡೆಯುತ್ತ ನಿಮ್ಮ ನಿವೃತ್ತಿ ಜೀವನವನ್ನು ಆನಂದಿಸಬಹುದಾಗಿದೆ.

ಕೇವಲ 210 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 5000 ರೂ
•Atal Pension Scheme 22 ವರ್ಷಗಳ ಹೂಡಿಕೆಯ ಅವಧಿಯನ್ನು ಪಡೆದುಕೊಂಡಿದೆ.

•ಅಟಲ್ ಪಿಂಚಣಿ ಯೋಜನೆಯಲ್ಲಿ 18 ರಿಂದ 42 ವರ್ಷದೊಳಗಿನವರು ಹೂಡಿಕೆ ಮಾಡಬಹುದಾಗಿದೆ.

•ಯೋಜನೆಗೆ ಸೇರಲು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆಯನ್ನು ಹೊಂದಿರಬೇಕಾಗುತ್ತದೆ.

Join Nadunudi News WhatsApp Group

•ನೀವು 18 ನೇ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ, ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

•ಮಾಸಿಕ 210 ರೂ. ನ ಹೂಡಿಕೆಯು ನಿಮಗೆ ನಿವೃತ್ತಿಯ ನಂತರ 5000 ರೂ. ಪಿಂಚಣಿ ಪಡೆಯಲು ಸಹಾಯವಾಗುತ್ತದೆ.

Atal Pension Scheme Benefits
Image Credit: Apanabihar

ಅಟಲ್ ಪಿಂಚಣಿ ಯೋಜನೆಯ ನಿಯಮಗಳೇನು..?
ಈ ಯೋಜನೆಗೆ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ನೀವು ಮಾಸಿಕ 1000 ರೂ. ಪಿಂಚಣಿ ಪಡೆಯಲು 18 ನೇ ವಯಸಿನಲ್ಲಿ 42 ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರು ಹೂಡಿಕೆ ಮಾಡಿದರೆ 60 ವರ್ಷ ವಯಸ್ಸಿನ ನಂತರ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಪ್ರತಿ ತಿಂಗಳು ಐದೈದು ಸಾವಿರ ರೂಪಾಯಿಗಳ ಪಿಂಚಣಿ ಪಡೆಯಬಹುದು.

ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಸಂಗಾತಿಗೆ ಪಿಂಚಣಿ ದೊರೆಯುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ ಪಿಂಚಣಿ ನಿಧಿಯು ನಾಮಿನಿಗೆ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಅರ್ಧಕ್ಕೆ ಪಿಂಚಣಿಯನ್ನು ಕೊನೆಗೊಳಿಸುವಂತಿಲ್ಲ. ಹೂಡಿಕೆದಾದರೂ ಮೃತಪಟ್ಟ ಸಂದರ್ಭದಲ್ಲಿ ಮಾತ್ರ ಈ ಯೋಜನೆಯನ್ನು ರದ್ದುಗೊಳಿಸಬಹುದಾಗಿದೆ.

Join Nadunudi News WhatsApp Group