APY Details: ಕೇಂದ್ರದ ಈ ಯೋಜನೆಯಲ್ಲಿ ಕೇವಲ 210 ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಖಾತೆಗೆ ಬರಲಿದೆ 5000 ರೂ

ಅಟಲ್ ಪಿಂಧನಿ ಯೋಜನೆಯ ಅಡಿಯಲ್ಲಿ 210 ರೂ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 5000 ರೂ ಗಳಿಸಬಹುದು

Atal Pension Scheme Details: ಪ್ರತಿಯೊಬ್ಬರಿಗೂ ಜೀವನದಲ್ಲಿ ಉಳಿತಾಯ (Savings) ಎನ್ನುವುದು ಬಹಳ ಮುಖ್ಯ ಆಗಿರುತ್ತದೆ. ನಮಗೆ ಆದಾಯ ಬರುತ್ತಿರುವಾಗಲೇ ನಾವು ಅದರಲ್ಲಿ ಒಂದಿಷ್ಟನ್ನು ಉಳಿತಾಯಕ್ಕೆ ಬಳಸಿಕೊಳ್ಳಬೇಕು,ಇಲ್ಲಾ ಅಂತಾದರೆ ನಾವು ಭವಿಷ್ಯದಲ್ಲಿ ಬಹಳ ತೊಂದರೆಗೆ ಒಳಗಾಗಬೇಕಾಗುತ್ತದೆ. ನಮ್ಮಲ್ಲಿ ಸ್ವಲ್ಪ ಉಳಿತಾಯ ಇದ್ದರೇ ನಾವು ವೃದ್ಧ್ಯಾಪ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಂಭವ ಬರುವುದಿಲ್ಲಾ.

ಇಂದಿನ ದಿನಗಳಲ್ಲಿ ನಾವು ಹಲವು ರೀತಿಯ ನಿವೃತ್ತಿ ಯೋಜನೆಗಳನ್ನೂ ಕಾಣಬಹುದಾಗಿದೆ ಅದರಲ್ಲಿ ಸರ್ಕಾರದ ಎಪಿವೈ ಅಂದರೆ ಅಟಲ್ ಪಿಂಚಣಿ ಯೋಜನೆ ಹೆಚ್ಚು ಜನಪ್ರಿಯವಾಗಿದೆ. ಈ ಯೋಜನೆಯು 60 ವಯಸ್ಸಿನ ನಂತರ ಐಷಾರಾಮಿ ಬದುಕು ನಡೆಸಲು ಸೂಕ್ತ ಅವಕಾಶ ಕಲ್ಪಿಸಿಕೊಡುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ಕಡಿಮೆ ಹಣವನ್ನ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆಯಬಹುದಾಗಿದೆ.

Atal Pension Scheme Details
Image Credit: Sarkariyojnaa

ಅಟಲ್ ಪಿಂಚಣಿ ಯೋಜನೆ (APY) ಬಗ್ಗೆ ಮಾಹಿತಿ

ದೇಶದಲ್ಲಿ 2015-16 ರಲ್ಲಿಅಟಲ್ ಪಿಂಚಣಿ ಯೋಜನೆ (APY) ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಮಾಡಿದರೆ ಖಾತರಿಯ ಪಿಂಚಣಿ ಸಿಗುತ್ತದೆ. ನಿವೃತಿಯ ನಂತರ ಈ ಯೋಜನೆ ನಮಗೆ ಆದಾಯವನ್ನು ನೀಡುತ್ತದೆ. ಸರ್ಕಾರದ ಪಿಂಚಣಿ ಪಡೆಯಲು ಸಾಧ್ಯವಾಗದವರು ಇದರಲ್ಲಿ ಹೂಡಿಕೆ ಮಾಡುವ ಮೂಲಕ ನಿಯಮಿತ ಆದಾಯವನ್ನು ಖಚಿತಪಡಿಸಿಕೊಳ್ಳಬಹುದು.

ಅಟಲ್ ಪಿಂಚಣಿ ಯೋಜನೆಗೆ ಬೇಕಾಗಿರುವ ಕಡ್ಡಾಯ ಅರ್ಹತೆಗಳು

Join Nadunudi News WhatsApp Group

ಅಟಲ್ ಪಿಂಚಣಿ ಯೋಜನೆಯಡಿ ಖಾತೆಯನ್ನು ತೆರೆಯಬೇಕಾದರೆ ಭಾರತದ ಪ್ರಜೆಯಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 40 ರ ನಡುವೆ ಇರಬೇಕು. ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದಲ್ಲದೆ, ಅರ್ಜಿದಾರರು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಇದರಲ್ಲಿ ಕನಿಷ್ಠ ಕೊಡುಗೆ ಅವಧಿಯನ್ನು 20 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಆದಾಯ ತೆರಿಗೆ ಪಾವತಿದಾರರು ಈ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ.

Atal Pension Scheme Investment
Image Credit: Zee News

ಈ ಯೋಜನೆ ಮಾಸಿಕ ಪಿಂಚಣಿಯನ್ನು ನೀಡುತ್ತದೆ

ಅಟಲ್ ಪಿಂಚಣಿ ಯೋಜನೆ ವೃದ್ಧಾಪ್ಯದಲ್ಲಿ ಬಹಳ ಸಹಾಯಕ ಆಗಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 1,000 ರಿಂದ 5,000 ರೂ.ವರೆಗೆ ಮಾಸಿಕ ಪಿಂಚಣಿ ಪಡೆಯಬಹುದು. ಇದಕ್ಕಾಗಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಠೇವಣಿ ಮಾಡಬಹುದು. APY ಯೋಜನೆಯಲ್ಲಿ ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ವೃದ್ಧ್ಯಾಪ್ಯದಲ್ಲಿ ಪ್ರತಿ ತಿಂಗಳು 5,000 ರೂಪಾಯಿಗಳ ಪಿಂಚಣಿ ಪಡೆಯಬಹುದು. ಈ ಯೋಜನೆ ಮಧ್ಯಮ ವರ್ಗದವರಿಗೆ ಮತ್ತು ಬಡಜನರಿಗೆ ಬಹಳ ಸಹಕಾರಿ ಆಗಲಿದೆ ಎಂದು ಹೇಳಬಹುದು. ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿಯಲು ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕಿಗೆ ಭೇಟಿ ನೀಡಬಹುದಾಗಿದೆ.

Join Nadunudi News WhatsApp Group