Pension Scheme: ಕೇಂದ್ರದ ಈ ಯೋಜನೆಯಲ್ಲಿ ಕೇವಲ 7 ರೂ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 5000 ರೂ, ಇಂದೇ ಅರ್ಜಿ ಹಾಕಿ.

ಕೇಂದ್ರದ ಈ ಯೋಜನೆಯಲ್ಲಿ 7 ರೂ ಹೂಡಿಕೆಯಿಂದ 5000 ರೂ ಪಿಂಚಣಿ ಪಡೆಯಬಹುದು

Atal Pension Scheme Investment Details: ಕೇಂದ್ರ ಸರ್ಕಾರ ಜನರಿಗಾಗಿ PM Atal Pension Scheme ಅನ್ನು ಪರಿಚಯಿಸಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಬಹುದು. ಈ ಯೋಜನೆಯಡಿ ಲಕ್ಷಾಂತರ ಜನರು ಹೂಡಿಕೆಯ ಆರಂಭಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗಂಡ ಹೆಂಡತಿ ಇಬ್ಬರಿಗೂ ಕೂಡ ಹೂಡಿಕೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.

ದಂಪತಿಗಳು ಜೊತೆಯಾಗಿ PM APY ಯಲ್ಲಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ನಿವೃತ್ತಿಯ ಬದುಕನ್ನು ಆರಾಮದಾಯಕವಾಗಿ ಕಳೆಯಬಹುದಾಗಿದೆ. ಅತಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಯೋಜನೆ ಇದಾಗಿದ್ದು, ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

Atal Pension Scheme Details
Image Credit: Sarkariyojnaa

ಕೇಂದ್ರ ಬೆಸ್ಟ್ ಪೆನ್ಶನ್ ಸ್ಕೀಮ್ ಯಾವುದೇ ನಿಮಗೆ ಗೊತ್ತೇ…?
ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಬೆಸ್ಟ್ ಎನ್ನಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ.

ಕೇಂದ್ರದ ಈ ಯೋಜನೆಯಲ್ಲಿ ಕೇವಲ 7 ರೂ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗಲಿದೆ 5000 ರೂ.
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅಂದರೆ ಪ್ರತಿ ನಿತ್ಯ 7 ರೂ. ನ ಹೂಡಿಕೆಯಲ್ಲಿ ನೀವು ನಿವೃತ್ತಿಯ ನಂತರ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಈ ಯೋಜನೆಗಳಲ್ಲಿ 210 ರೂ. ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ.

Atal Pension Yojana Latest
Image Credit: Apanabihar

ಈ ಹೂಡಿಕೆಯಲ್ಲಿ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ
ಇನ್ನು 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಇನ್ನು APY ಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು. ಈ ತೆರಿಗೆ ಪ್ರಯೋಜನವನ್ನು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ನೀಡಲಾಗಿದೆ. ತೆರಿಗೆ ಪಾವತಿ ಮಾಡುವವರು ಈ ಯೋಜನೆಯಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group