Small Invest: ಕೇವಲ 7 ರೂ ಹೂಡಿಕೆ ಮಾಡಿದರೆ ಸಿಗಲಿದೆ ಪ್ರತಿ ತಿಂಗಳು 5,000 ರೂ ಪಿಂಚಣಿ, ಕೇಂದ್ರದ ಹೊಸ ಪಿಂಚಣಿ ಯೋಜನೆ.

ಕೇಂದ್ರ ಸರ್ಕಾರ ಈ APY ನಲ್ಲಿ ಎಷ್ಟು ಹೂಡಿಕೆಯಲ್ಲಿ ಎಷ್ಟು ಲಾಭವನ್ನು ಗಳಿಸಬಹುದು ಎನ್ನುವ ಬಗ್ಗೆ ತಿಳಿಯಿರಿ.

Atal Pension Yojana Investment: ಕೇಂದ್ರ ಸರ್ಕಾರ ಜನರಿಗಾಗಿ ವಿವಿಧ ಪಿಂಚಣಿಯ ಯೋಜನೆಯನ್ನು ಪರಿಚಯಿಸಿದೆ. ಸರ್ಕಾರದ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹಿರಿಯ ನಾಗರಿಕರು ತಮ್ಮ ವೃದ್ದಾಪ್ಯದಲ್ಲಿ ಮಾಸಿಕ ಪಿಂಚಣಿಯನ್ನು ಪಡೆಯುದರ ಮೂಲಕ ನಿವೃತ್ತಿಯ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ನಡೆಸಬಹುದಾಗಿದೆ.

ಕೇಂದ್ರ ಸರಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದ್ದು, ಅದರಲ್ಲಿ Atal Pension Scheme ಹಿರಿಯ ನಾಗರಿಕರಿಗೆ ಉತ್ತಮ ಆಯ್ಕೆ ಎನ್ನಬಹುದು. ಕೇಂದ್ರ ಸರ್ಕಾರ ಈ APY ನಲ್ಲಿ ಎಷ್ಟು ಹೂಡಿಕೆಯ ಮೊತ್ತದಲ್ಲಿ ಎಷ್ಟು ಲಾಭವನ್ನು ಗಳಿಸಬಹುದು ಎನ್ನುವ ಬಗ್ಗೆ ವಿವರ ತಿಳಿಯೋಣ.

Atal Pension Yojana
Image Credit: Mppeb

Atal Pension Yojana (APY)
ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. Atal Pension Yojana ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.

ಕೇವಲ 210 ರೂ. ಹೂಡಿಕೆಯಲ್ಲಿ ಪಡೆಯಿರಿ ಮಾಸಿಕ 5000 ರೂ. ಪಿಂಚಣಿ
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಈ ಯೋಜನೆಗಳಲ್ಲಿ 210 ರೂ.ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Atal Pension Yojana Investment
Image Credit: TV9hindi

ಕೇವಲ 7 ರೂ ಹೂಡಿಕೆ ಮಾಡಿದರೆ ಮಾಸಿಕ ಪಿಂಚಣಿ ಪಡೆಯಬಹುದು
ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಉಳಿತಾಯ ಖಾತೆ ಇತ್ಯಾದಿಗಳು ಅವಶ್ಯಕ. 1,000 ರೂ.ನಿಂದ 5,000 ರೂ.ವರೆಗಿನ ಪಿಂಚಣಿ ಪಡೆಯಲು ಪ್ರತಿ ತಿಂಗಳು 42 ರಿಂದ 210 ರೂ. ಹೂಡಿಕೆ ಅಗತ್ಯವಾಗಿದೆ.

Join Nadunudi News WhatsApp Group

ಇನ್ನು ಮಾಸಿಕ 210 ರೂ. ಎಂದರೆ ನೀವು ಪ್ರತಿ ನಿತ್ಯ 7 ರೂ. ಖರ್ಚಿನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬೇಕಾಗುತ್ತದೆ. ಇನ್ನು 18 ವರ್ಷದ ವ್ಯಕ್ತಿ ಪ್ರತಿ ತಿಂಗಳು 210 ರೂ.ಗಳನ್ನು ಠೇವಣಿ ಮಾಡುವುದರಿಂದ ರೂ. 5,000 ಪಿಂಚಣಿ ಪ್ರಯೋಜನವನ್ನು ಪಡೆಯುತ್ತದೆ.

Join Nadunudi News WhatsApp Group