Atal Pension: ಕೇವಲ 7 ರೂ. ಹೂಡಿಕೆಯಲ್ಲಿ ಸಿಗಲಿದೆ 5000 ರೂ. ಪಿಂಚಣಿ, ಇಂದೇ ಹೂಡಿಕೆ ಆರಂಭಿಸಿ.

ಕೇವಲ 7 ರೂ. ಹೂಡಿಕೆಯಲ್ಲಿ ಸಿಗಲಿದೆ 5000 ರೂ. ಪಿಂಚಣಿ

Atal Pension Yojana Investment Details: ನಿವೃತ್ತಿಯ ನಂತರ ಜೀವನ ಆರ್ಥಿಕ ವಿಷಯವಾಗಿ ಸ್ವಲ್ಪ ಕಷ್ಟವಾಗುವುದು ಸಹಜ. ನಿವೃತ್ತಿಯ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಭಿಸಿರಬೇಕಾಗುತ್ತದೆ. ಇನ್ನುಮುಂದೆ ನೀವು ಇದಕ್ಕಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಪಿಂಚಣಿ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವುದರಿಂದ ನಿವೃತ್ತಿಯ ನಂತರದ ಸಮಯದಲ್ಲಿ ಆರ್ಥಿಕ ಸ್ಥಿರತೆ ಕಂಡುಕೊಳ್ಳಬಹುದು.

ನಿವೃತ್ತಿಯ ನಂತರ ಮಾಸಿಕ ಪಿಂಚಣಿ ಪಡೆಯುವಂತಹ ಹೂಡಿಕೆಯ ಯೋಜನೆ ನಿಮಗಾಗಿ ಸರ್ಕಾರ ಪರಿಚಯಿಸಿದೆ. ನೀವು ಸರ್ಕಾರದ ಈ ಉತ್ತಮ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿವೃತ್ತಿಯ ನಂತರ ಮಾಸಿಕ ಪಿಂಚಣಿಯನ್ನು ಸುಲಭವಾಗಿ ಪಡೆಯಬಹುದು. ಅಷ್ಟಕ್ಕೂ ಸರ್ಕಾರ ಪರಿಚಯಿಸಿರುವ ಪಿಂಚಣಿ ಯೋಜನೆ ಯಾವುದು…? ಯೋಜನೆಯ ಹೂಡಿಕೆಯ ಹೇಗೆ…? ಹೂಡಿಕೆಯಿಂದ ಸಿಗುವ ಲಾಭ ಎಷ್ಟು…? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Atal Pension Yojana
Image Credit: Zeebiz

ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಸರ್ಕಾರದ ಹೊಸ ಸ್ಕೀಮ್
ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯು ನಿವೃತ್ತಿಯ ನಂತರ ಪಿಂಚಣಿ ಪಡೆಯಲು ಬೆಸ್ಟ್ ಎನ್ನಬಹುದು. ಅತಿ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯುವ ಯೋಜನೆ ಇದಾಗಿದ್ದು, ಈ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು. ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ.

Atal Pension Yojana Investment
Image Credit: Vakilsearch

ಕೇವಲ 7 ರೂ. ಹೂಡಿಕೆಯಲ್ಲಿ ಸಿಗಲಿದೆ 5000 ರೂ. ಪಿಂಚಣಿ
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಅಂದರೆ ಪ್ರತಿ ನಿತ್ಯ 7 ರೂ. ನ ಹೂಡಿಕೆಯಲ್ಲಿ ನೀವು ನಿವೃತ್ತಿಯ ನಂತರ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಗಂಡ ಮತ್ತು ಹೆಂಡತಿ ಇಬ್ಬರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 10,000 ರೂ. ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group

ಈ ಯೋಜನೆಗಳಲ್ಲಿ 210 ರೂ. ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. ಇನ್ನು 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಇನ್ನು APY ಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1.5 ಲಕ್ಷದವರೆಗೆ ತೆರಿಗೆ ಉಳಿಸಬಹುದು.

Atal Pension Yojana Details
Image Credit: Sarkari Yojnaa

Join Nadunudi News WhatsApp Group