APY Pensions: ಕೇಂದ್ರದ ಇನ್ನೊಂದು ಬಹುದೊಡ್ಡ ಯೋಜನೆ, 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5000

ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸಿಗಲಿದೆ 5 ಸಾವಿರ ಪಿಂಚಣಿ.

Atal Pension Yojana Investment Profit: ಕೇಂದ್ರದಿಂದ ವಿವಿಧ ಪಿಂಚಣಿಯ ಯೋಜನೆಗಳು ಜಾರಿಯಾಗಿವೆ. 60 ವರ್ಷ ಮೇಲ್ಪಟ್ಟ ನಂತರ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಣೆಗಾಗಿ ಜನರು ಹೆಚ್ಚಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.ಇನ್ನು ಕೇಂದ್ರದಿಂದ Atal Pension Yojana ಲಭ್ಯವಿರುವ ನಿಮಗೆ ಮಾಹಿತಿ ತಿಳಿದಿದೆಯಾ..?

ಈ ಯೋಜನೆಯಡಿ ಸಾಕಷ್ಟು ಜನರು ಹೂಡಿಕೆ ಮಾಡಿ ಪಿಂಚಣಿಯ ಲಾಭವನ್ನು ಪಾಡೆಯುತ್ತಿದ್ದರೆ. ನೀವು ಈ ಯೋಜನೆಯಲ್ಲಿನ ಹೊದಿಕೆಯ ಮೊತ್ತದ ಬಾಗ್ಗೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದೀಗ ನಾವು APY ಹೂಡಿಕೆಯಲ್ಲಿ ಎಷ್ಟು ಪಿಂಚಣಿಯಾ ಲಾಭ ಪಡೆಯಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Atal Pension Yojana
Image Credit: News 18

ಕೇಂದ್ರದ ಇನ್ನೊಂದು ಬಹುದೊಡ್ಡ ಯೋಜನೆ
Atal Pension Yojana ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ನೀವು ಈ ಯೋಜನೆಗಳಲ್ಲಿ ಎಷ್ಟು ಬೇಗ ಹೂಡಿಕೆ ಮಾಡುತ್ತಿರೋ ಅಷ್ಟು ಹೆಚ್ಚು ಹಣವನ್ನು ಪಡೆಯುವ ಅವಕಾಶ ಇರುತ್ತದೆ. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.

60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು 5000
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಈ ಯೋಜನೆಗಳಲ್ಲಿ 210 ರೂ.ಗಿಂತ ಕಡಿಮೆ ಹೂಡಿಕೆ ಮಾಡಬಹುದು. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

Atal Pension Yojana Investment Profit
Image Credit: Sarkari Yojana

APY ಯೋಜನೆಯ ಬಗ್ಗೆ ಸಂಪೂರ್ಣ ವಿವರ
ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಉಳಿತಾಯ ಖಾತೆ ಇತ್ಯಾದಿಗಳು ಅವಶ್ಯಕ. ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಸಂಗಾತಿಗೆ ಪಿಂಚಣಿ ದೊರೆಯುತ್ತದೆ. ಒಂದು ವೇಳೆ ಇಬ್ಬರೂ ಮೃತಪಟ್ಟರೆ ಪಿಂಚಣಿ ನಿಧಿಯು ನಾಮಿನಿಗೆ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರ ಅರ್ಧಕ್ಕೆ ಪಿಂಚಣಿಯನ್ನು ಕೊನೆಗೊಳಿಸುವಂತಿಲ್ಲ. ಹೂಡಿಕೆದಾದರೂ ಮೃತಪಟ್ಟ ಸಂದರ್ಭದಲ್ಲಿ ಮಾತ್ರ ಈ ಯೋಜನೆಯನ್ನು ರದ್ದುಗೊಳಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group