APY Scheme: ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 10000 ರೂ ಪಿಂಚಣಿ, ಪೋಸ್ಟ್ ಆಫೀಸ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.
ಗಂಡ ಮತ್ತು ಹೆಂಡತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 10000 ರೂ ಪಿಂಚಣಿ ಸಿಗಲಿದೆ.
APY Scheme For Couples: ಈಗಿನ ಕಾಲದಲ್ಲಿ ಜನರು ಉಳಿತಾಯವನ್ನ ಮಾಡಲು ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳಬಹುದು. ತಮ್ಮ ಭವಿಷ್ಯದ ಉದ್ದೇಶದಿಂದ ಜನರು ಅಂಚೆ ಕಚೇರಿ ಮತ್ತು ಇತರೆ ಬ್ಯಾಂಕುಗಳಲ್ಲಿ ವಿವಿಧ ಯೋಜನೆಯ ಅಡಿಯಲ್ಲಿ ಉಳಿತಾಯವನ್ನ ಮಾಡುತ್ತಿದ್ದಾರೆ.
ಸದ್ಯ ಅಂಚೆ ಕಚೇರಿ (Post Office) ಉಳಿತಾಯ ಮಾಡಲು ಉತ್ತಮವಾದ ವೇದಿಕೆ ಎಂದು ಹೇಳಬಹುದು. ಕೇಂದ್ರ ಸರ್ಕಾರ ಅಂಚೆ ಕಚೇರಿಯಲ್ಲಿ ಹಲವು ಯೋಜನೆಯನ್ನ ಈಗಾಗಲೇ ಬಿಡುಗಡೆ ಮಾಡಿದ್ದು ಸಾಕಷ್ಟು ಜನರು ಈ ಯೋಜನೆಯನ್ನ ಲಾಬಾಗಳನ್ನ ಪಡೆದುಕೊಳ್ಳುತ್ತಿದ್ದಾರೆ.
ಪತಿ ಪತ್ನಿಯರಿಗೆ ಹೊಸ ಯೋಜನೆ ಆರಂಭ
ಮಕ್ಕಳು ತಮ್ಮ ವೃದ್ದಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳುತ್ತಾರೆ ಅನ್ನುವ ಭರವಸೆ ಇತ್ತೀಚಿನ ದಿನಗಳಲ್ಲಿ ಯಾರಿಗೂ ಇಲ್ಲ ಎಂದು ಹೇಳಬಹುದು. ಈಗಿನ ಕಾಲದ ಜನರು ತಮ್ಮ ಮುಂದಿನ ಭವಿಷ್ಯದ ಉದ್ದೇಶದಿಂದ ತಮ್ಮ ಉಳಿತಾಯವನ್ನ ತಾವೇ ಮಾಡಬೇಕಾಗಿದೆ. ಇದರ ನಡುವೆ ಈಗ ಪೋಸ್ಟ್ ಆಫೀಸ್ ನಲ್ಲಿ ಪತಿ ಪತ್ನಿಯರಿಗಾಗಿ ಹೊಸ ಯೋಜನೆಯೊಂದು ಆರಂಭ ಆಗಿದ್ದು ಈ ಯೋಜನೆಯನ್ನ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಒಟ್ಟಾರೆ 10 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.
ಪತಿ ಪತ್ನಿಯರಿಗೆ ಹೊಸ ಯೋಜನೆ ಆರಂಭಿಸಿದ ಅಂಚೆ ಇಲಾಖೆ
ಹೌದು ಅಟಲ್ ಪಿಂಚಣಿ ಯೋಜನೆಯ (Atal Pension Yojana) ಮೂಲಕ ಪತಿ ಮತ್ತು ಪತ್ನಿ ಇಬ್ಬರು ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆಯಬಹುದು. ಈ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರು ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 10 ಸಾವಿರ ರೂಪಾಯಿಯ ತನಕ ಪಿಂಚಣಿ ಹಣ ಪಡೆಯಬಹುದು. ಪತಿ ಪತ್ನಿ 60 ಆರ್ಷ ಪೂರೈಕೆ ಮಾಡಿದರೆ ನಂತರ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. 18 ರಿಂದ 40 ವರ್ಷ ಒಳಗಿನ ಎಲ್ಲಾ ಜನರು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದೆ.
18 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ಹೂಡಿಕೆ ಮಾಡುವ ಮೊತ್ತ 42 ರೂಪಾಯಿ ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ ನೀವು 1000 ರೂಪಾಯಿಯಿಂದ 5000 ರೂಪಾಯಿಯ ತನಕ ಪಿಂಚಣಿ ಹಣ ಪಡೆಯಬಹುದು. ಪತಿ ಮತ್ತು ಪತ್ನಿ ಇಬ್ಬರು ಒಟ್ಟಾಗಿ ಹೂಡಿಕೆ ಮಾಡಿದರೆ ಒಟ್ಟಾರೆ ಪ್ರತಿ ತಿಂಗಳು 10000 ರೂಪಾಯಿ ಪಿಂಚಣಿ ಹಣ ಪಡೆಯಬಹುದು.