Ather Rizta EV: ಹೊಸ ಅಥೇರ್ Rizta ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ಮೈಲೇಜ್ ಎಷ್ಟು, ಬೆಸ್ಟ್ ಫ್ಯಾಮಿಲಿ ಸ್ಕೂಟರ್.

ಅಥೇರ್ Rizta ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ಮೈಲೇಜ್ ಎಷ್ಟು..?

Ather Rizta Electric Scooter Price And Feature: ಭಾರತೀಯ ಆಟೋ ವಲಯದಲ್ಲಿ Electric ವಾಹನಗಳು ಪಾರುಪತ್ಯ ಸಾಧಿಸಿವೆ. ಸದ್ಯ ಮಾರುಕಟ್ಟೆಯಲ್ಲಿ Ather ಕಂಪನಿಯು ಜನಪ್ರಿಯ ಎಲೆಕ್ಟ್ರಿಕ್ ಮಾದರಿಯನ್ನು ಲಾಂಚ್ ಮಾಡಿದೆ. ನೀವು ಅತಿ ಕಡಿಮೆ ಬೆಲೆಗೆ Ather ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗಾಗಿ Ather Rizta ಎಂಬ ಹೆಸರಿನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ. ಇದೀಗ ನಾವು ಈ ಲೇಖನದಲ್ಲಿ Ather ಕಂಪನಿಯ ನೂತನ Ather Rizta Electric Scooter ನ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.

Ather Rizta Electric Scooter Price And Feature
Image Credit: Bikewale

ಹೊಸ ಅಥೇರ್ Rizta ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಮತ್ತು ಮೈಲೇಜ್ ಎಷ್ಟು
ಕಂಪನಿಯು Ather Rizta Electric Scooter ನಲ್ಲಿ ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಒದಗಿಸಿದೆ. ಕಂಪನಿಯು ತನ್ನ ಟಾಪ್ ಎಂಡ್ ಆವೃತ್ತಿಯಲ್ಲಿ TFT ಡಿಸ್ಪ್ಲೇಯನ್ನು ಬಳಸಿದೆ. ಇದರಲ್ಲಿ ಎರಡು ರೈಡಿಂಗ್ ಮೋಡ್ ಕೂಡ ಇದೆ. ಕಂಪನಿಯ ಈ ಸ್ಕೂಟರ್ ರಿವರ್ಸ್ ಫಂಕ್ಷನ್‌ ನೊಂದಿಗೆ ಬರುತ್ತದೆ.

ಕಂಪನಿಯು ಜುಲೈ ತಿಂಗಳಿನಿಂದ ಈ ಎಲೆಕ್ಟ್ರಿಕ್ ಸ್ಕೂಟರ್‌ ನ ವಿತರಣೆಯನ್ನು ಪ್ರಾರಂಭಿಸುತ್ತದೆ. ಇದರಲ್ಲಿ ನೀವು IP67 ರೇಟಿಂಗ್, 5 ವರ್ಷಗಳ ವಾರಂಟಿ ಮತ್ತು 400 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಸಹ ಪಡೆಯುತ್ತೀರಿ. ಮಾರುಕಟ್ಟೆಯಲ್ಲಿ Ather Rizta Electric Scooter ಆರಂಭಿಕ ಎಕ್ಸ್ ಶೋ ರೂಂ ಬೆಲೆ 1.10 ಲಕ್ಷ ರೂ. ದಿಂದ 1.45 ಲಕ್ಷ ರೂ. ಗೆ ನಿಗದಿಪಡಿಸಲಾಗಿದೆ.

Ather Rizta Electric Scooter Price In India
Image Credit: Bikewale

ಬೆಸ್ಟ್ ಫ್ಯಾಮಿಲಿ ಸ್ಕೂಟರ್
ಕಂಪನಿಯು Ather Rizta Electric Scooter ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ. ಅಂದರೆ ಇದರಲ್ಲಿ ನೀವು ಎರಡು ಬ್ಯಾಟರಿ ಆಯ್ಕೆಗಳನ್ನು ಪಡೆಯುತ್ತೀರಿ. ಇದರಲ್ಲಿ ನೀವು ಮೊದಲ ಬ್ಯಾಟರಿ ಆಯ್ಕೆಯಾಗಿ 2.9kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತೀರಿ. ಇದು ಒಂದೇ ಚಾರ್ಜ್‌ನಲ್ಲಿ 123 ಕಿಲೋಮೀಟರ್‌ ಗಳ ಮೈಲೇಜ್ ಅನ್ನು ನೀಡುತ್ತದೆ. ದೊಡ್ಡದಾದ 3.7kWh ಬ್ಯಾಟರಿ ಪ್ಯಾಕ್ ಎರಡನೇ ಬ್ಯಾಟರಿ ಆಯ್ಕೆಯಾಗಿ ಲಭ್ಯವಿದೆ. ಇದು ಒಂದೇ ಚಾರ್ಜ್‌ನಲ್ಲಿ 165 ಕಿಲೋಮೀಟರ್‌ ಗಳ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

ಈ ಎರಡೂ ರೂಪಾಂತರಗಳು ಗಂಟೆಗೆ 80 ಕಿಲೋಮೀಟರ್ ವೇಗವನ್ನು ನೀಡುತ್ತದೆ. ನೀವು Rizta ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಉತ್ತಮ ಸ್ಪೆಕ್ಸ್ ಅನ್ನು ನೋಡುತ್ತಿರಿ ಮತ್ತು ಆಆರಾಮದಾಯಕ ಪ್ರಯಾಣಕ್ಕಾಗಿ ಉದ್ದವಾದ ಸೀಟ್ ಅನ್ನು ಸ್ಥಾಪಿಸಲಾಗಿದೆ. ಇದರಲ್ಲಿ ನೀವು 56 ಲೀಟರ್ ಸ್ಟೋರೇಜ್ ಪಡೆಯುತ್ತೀರಿ. ಇದರಿಂದ ನೀವು ನಿಮ್ಮ ಬಹಳಷ್ಟು ವಸ್ತುಗಳನ್ನು ಇಟ್ಟುಕೊಂಡು ಆರಾಮದಾಯವಾಗಿ ಪ್ರಯಾಣವನ್ನು ಮಾಡಬಹುದು.

Ather Rizta Electric Scooter
Image Credit: Bikewale

Join Nadunudi News WhatsApp Group