Minimum Balance: ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದ್ದವರಿಗೆ RBI ನಿಂದ ಬಿಗ್ ಅಪ್ಡೇಟ್, ಕನಿಷ್ಠ ಬ್ಯಾಲೆನ್ಸ್ ನಿಯಮ ಚೇಂಜ್.
RBI ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಹೊಸ ನಿಯಮ ಜಾರಿಮಾಡಿದೆ.
Bank Account Minimum Balance Rules: ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಖಾತೆಗಳನ್ನು ತೆರೆಯುದರ ಜೊತೆಗೆ ಅದರ ನಿರ್ವಹಣೆ ಮಾಡುದು ಕೂಡ ಮುಖ್ಯವಾಗಿರುತ್ತದೆ.
Account ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಿಸುದು ಅತಿ ಅಗತ್ಯವಾಗಿದೆ. Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಸದ್ಯ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದ್ದವರಿಗೆ RBI ನಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ. RBI ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ಹೊಸ ನಿಯಮ ಜಾರಿಮಾಡಿದೆ.
![Saving Account Rules](https://nadunudi.in/wp-content/uploads/2024/02/Saving-Account-Rules.png)
ಬ್ಯಾಂಕಿನಲ್ಲಿ ಉಳಿತಾಯ ಖಾತೆ ಇದ್ದವರಿಗೆ RBI ನಿಂದ ಬಿಗ್ ಅಪ್ಡೇಟ್
RBI ತನ್ನ ಮಾರ್ಗಸೂಚಿಯಲ್ಲಿ Bank ನ Minimum Balance ದಂಡದ ಬಗ್ಗೆ ಸುತ್ತೋಲೆ ಹೊರಡಿಸಿದೆ. ದೇಶದ ವಿವಿಧ ಬ್ಯಾಂಕುಗಳು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡವನ್ನು ವಿಧಿಸುತ್ತದೆ. ಸದ್ಯ RBI ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಗೆ ದಂಡವನ್ನು ವಿಧಿಸುವಂತಿಲ್ಲ ಎಂದು RBI ಆದೇಶಿಸಿದೆ.
ಕನಿಷ್ಠ ಬ್ಯಾಲೆನ್ಸ್ ನಿಯಮ ಚೇಂಜ್
ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಗಳ ಪ್ರಕಾರ, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ದಂಡದ ಕಾರಣದಿಂದಾಗಿ ಯಾವುದೇ ಖಾತೆಯಲ್ಲಿನ ಬ್ಯಾಲೆನ್ಸ್ ಋಣಾತ್ಮಕವಾಗದಂತೆ ಎಲ್ಲಾ ಬ್ಯಾಂಕುಗಳು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಆದಾಗ್ಯೂ, ಗ್ರಾಹಕರು ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸದಿದ್ದಕ್ಕಾಗಿ ದಂಡವನ್ನು ಪಾವತಿಸಬೇಕಾಗಿಲ್ಲ ಎಂದು RBI ಸ್ಪಷ್ಟಪಡಿಸಿದೆ.
![Bank Account Minimum Balance Rules](https://nadunudi.in/wp-content/uploads/2024/02/Bank-Account-Minimum-Balance-Rules.png)
ನವೆಂಬರ್ 20 , 2014 ರಂದು ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಹೊರಡಿಸಿತ್ತು. ಖಾತೆಯು ಕನಿಷ್ಟ ಬ್ಯಾಲೆನ್ಸ್ ಗಿಂತ ಕಡಿಮೆಯಾದ ತಕ್ಷಣ ಬ್ಯಾಂಕ್ ಗಳು ಗ್ರಾಹಕರಿಗೆ ತಕ್ಷಣ ತಿಳಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವಿಧಿಸಲಾಗುವ ಶುಲ್ಕಗಳ ಬಗ್ಗೆ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ತಿಳಿಸುವುದು ಸಹ ಮುಖ್ಯವಾಗಿದೆ. ಇದರಿಂದ ಅವರು ಸಮಯಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು RBI ಹೇಳಿದೆ.
ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ಬ್ಯಾಂಕ್ ದಂಡವನ್ನು ಹೇಗೆ ಪಾವತಿಸಿಕೊಳುತ್ತವೆ..?
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಗಿಂತ ಕಡಿಮೆ ಹಣ ಇದ್ದರೆ ಖಾತೆಯು ನಕಾರಾತ್ಮಕವಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ. ಈ ಸಮಯದಲ್ಲಿ ಗ್ರಾಹಕರು ಅದರಲ್ಲಿ ಹಣವನ್ನು ಠೇವಣಿ ಮಾಡಿದಾಗ, ದಂಡದ ಮೊತ್ತವನ್ನು ಮೊದಲು ಕಡಿತಗೊಳಿಸಲಾಗುತ್ತದೆ. ನೀವು ಠೇವಣಿ ಮಾಡಿದ ಹಣದಲ್ಲಿ ದಂಡದ ಮೊತ್ತ ಕಡಿತವಾಗಿ ಉಳಿದ ಮೊತ್ತವನ್ನು ಮಾತ್ರ ನೀವು ಹಿಂಪಡೆಯಲು ಸಾಧ್ಯವಾಗುತ್ತದೆ. ನೀವು ಆಗಾಗ ಬ್ಯಾಂಕ್ ನ ಮಿನಿಮಂ ಬ್ಯಾಲೆನ್ಸ್ ಬಗ್ಗೆ ಗಮನ ಇರಿಸುವುದು ಉತ್ತಮ.