Bank Loan Recovery: ಬ್ಯಾಂಕುಗಳು ಲೋನ್ ಕಟ್ಟುವಂತೆ ಸಮಸ್ಯೆ ಕೊಟ್ಟರೆ ದಂಡ ವಿಧಿಸಬಹುದು, RBI ನಿಯಮದ ಬಗ್ಗೆ ತಿಳಿದುಕೊಳ್ಳಿ.

Bank Loan Recovery: ಬ್ಯಾಂಕುಗಳಲ್ಲಿ ಸಾಲವನ್ನ (Bank Loan) ಜನರು ಹಲವು ಉದ್ದೇಶಗಳಿಂದ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ, ಗೃಹಸಾಲ, ವಯಕ್ತಿಕ ಸಾಲ ಮತ್ತು ಹೆಚ್ಚಿನ ರೈತರು ವ್ಯವಸಾಯವನ್ನ ಮಾಡುವ ಉದ್ದೇಶಗಳಿಂದ ಹೆಚ್ಚಿನ ಹೆಚ್ಚಿನ ಸಾಲವನ್ನ ಮಾಡುತ್ತಾರೆ.

ಬ್ಯಾಂಕುಗಳು ಸಾಲವನ್ನ ನೀಡುವ ಸಮಯದಲ್ಲಿ ಸಾಲಗಾರನಿಂದ ಕೆಲವು ಅಗತ್ಯ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳುತ್ತಾರೆ. ಸಾಲವನ್ನ ನೀಡುವ ಸಮಯದಲ್ಲಿ ಆ ಸಾಲಕ್ಕೆ ಜಾಮೀನು ಯಾರು ಮತ್ತು ಜಾಮೀನುದಾರರಿಂದ ಕೂಡ ಸಹಿಯನ್ನ ಹಾಕಿಸಿಕೊಳ್ಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಬ್ಯಾಂಕುಗಳು ಸಾಲವನ್ನ ಜನರು ಸಾಲವನ್ನ ತೀರಿಸದೆ ಇದ್ದ ಸಮಯದಲ್ಲಿ ಸಾಲವನ್ನ ಹಿಂಪಡೆಯಲು (loan Recover) ಹೆಸರಿನಲ್ಲಿ ಜನರಿಗೆ ಕಾಟವನ್ನ ಕೊಡುತ್ತಿದ್ದಾರೆ. ಸಾಲವನ್ನ ರಿಕವರಿ ಮಾಡುವ ಹೆಸರಿನಲ್ಲಿ ಜನರಿಗೆ ಬಹಳ ತೊಂದರೆ ಕೊಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಬಹಳ ಬೆಳಕಿಗೆ ಬಂದಿದೆ.

 Banks can file a complaint against them if they face difficulty in loan recovery
Image Credit: economictimes.indiatimes

ಅನೇಕ ಬ್ಯಾಂಕುಗಳು ಜನರಿಗೆ ತೊಂದರೆ ಕೊಡುತ್ತಿದೆ
ಲೋನಾ ಕಟ್ಟುವುದು ಒಂದೆರಡು ಕಂತುಗಳು ತಡವಾದರೆ ಅನೇಕ ಖಾಸಗಿ ಬ್ಯಾಂಕುಗಳು ಜನರಿಗೆ ಅನೇಕ ರೀತಿಯಲ್ಲಿ ತೊಂದರೆಯನ್ನ ಕೊಡುತ್ತದೆ.

ನಿಮ್ಮ ವಾಹನ ಜಪ್ತಿ ಮಾಡುತ್ತೇವೆ, ನಿಮ್ಮ ಮನೆಯನ್ನ ಜಪ್ತಿ ಮಾಡುತ್ತೇವೆ ಮತ್ತು ನಿಮ್ಮ ಆಸ್ತಿಯನ್ನ ಜಪ್ತಿ ಮಾಡುತ್ತೇವೆ ಎಂದು ಅನೇಕ ಬ್ಯಾಂಕಿನ ಅಧಿಕಾರಿಗಳು ಜನರಿಗೆ ತೊಂದರೆಯನ್ನ ಕೊಡುತ್ತಿರುವುದು ನಾವು ಇತ್ತೀಚಿನ ದಿನಗಳಲ್ಲಿ ನೋಡಬಹುದಾಗಿದೆ.

Join Nadunudi News WhatsApp Group

RBI ನಿಯಮದ ಪ್ರಕಾರ ತೊಂದರೆ ಕೊಟ್ಟರೆ ಶಿಕ್ಷೆ ಅನುಭವಿಸಬೇಕು
ಅನೇಕ ಸಾಲಗಾರರಿಗೆ RBI ನಿಯಮದ ಬಗ್ಗೆ ತಿಳಿದಿಲ್ಲ. ಬ್ಯಾಂಕುಗಳು ಸಾಲವನ್ನ ರಿಕವರಿ ಮಾಡುವ ನೆಪದಲ್ಲಿ ನಿಮಗೆ ಸಮಸ್ಯೆಯನ್ನ ಕೊಟ್ಟರೆ ನೀವು ಕಾನೂನಿನ ಪರವಾಗಿ ಹೋರಾಟವನ್ನ ಮಾಡಬಹುದು.

As per RBI rules bank officials should not bother people for loan recovery
Image Credit: economictimes.indiatimes

RBI ನಿಯಮಗಳ ಪ್ರಕಾರ ಬ್ಯಾಂಕುಗಳು ಲೋನ್ ರಿಕವರಿ ಮಾಡಲು ನಿಮಗೆ ತೊಂದರೆ ಕೊಟ್ಟರೆ ನೀವು ಆ ಬ್ಯಾಂಕಿನ ವಿರುದ್ಧ ಪೊಲೀಸ್ ಠಾಣೆಯಲ್ಲಿ (Police Station) ನಲ್ಲಿ ದೂರು ನೀಡಬಹುದು. ಕೆಲವು ರಿಕವರಿ ಏಜೆಂಟ್ ಗಳು ಬ್ಯಾಂಕುಗಳ EMI ಪಾವತಿ ಮಾಡುವಂತೆ ಜನರಿಗೆ ತೊಂದರೆ ಕೊಡುವುದು ಮಾತ್ರವಲ್ಲದೆ ಅವರ ಮೇಲೆ ದೌರ್ಜನ್ಯವನ್ನ ಕೂಡ ಮಾಡುತ್ತದೆ.

ಬ್ಯಾಂಕ್ ಸಲ ರಿಕವರಿ ಮಾಡುವ ನೆನಪದಲ್ಲಿ ಜನರ ಮೇಲೆ ದೌರ್ಜನ್ಯ ಮಾಡುವ ಅಧಿಕಾರ ಯಾವ ಬ್ಯಾಂಕಿನ ಅಧಿಕಾರಿಗೂ ಇರುವುದಿಲ್ಲ ಮತ್ತು ಹಾಗೆ ಮಾಡಿದರೆ ಸಾಲಗಾರ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಅಧಿಕಾರವನ್ನ ಹೊಂದಿರುತ್ತಾರೆ.

ಬ್ಯಾಂಕುಗಳಿಗೆ ವಿಧಿಸಬಹುದು ಭಾರಿ ದಂಡ
ಲೋನ್ ರಿಕವರಿ ನೆಪದಲ್ಲಿ ಬ್ಯಾಂಕುಗಳು ಬೇಧರಿಕೆ ಹಾಕಿದರೆ ಆ ಬ್ಯಾಂಕಿನ ಮೇಲೆ ಕಾನೂನು ಪರವಾಗಿ ಹೋರಾಟ ಮಾಡಬಹುದು ಮತ್ತು ಆ ಬ್ಯಾಂಕಿನ ಮೇಲೆ ಭಾರಿ ಮೊತ್ತದ ದಂಡದ ಹಾಕುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಅಧಿಕಾರ ಸಾಲಗಾರ ಹೊಂದಿರುತ್ತಾನೆ.

A complaint can be filed against the bank officials if they give trouble during the recovery of the bank loan.
Image Credit: economictimes.indiatimes

ಬ್ಯಾಂಕುಗಳು ಹಣವನ್ನ ಮರಳಿ ಪಡೆಯುವ ಅಧಿಕಾರ ಹೊಂದಿರುತ್ತಾರೆ, ಆದರೆ RBI ನಿಯಮಗಳ ಅಡಿಯಲ್ಲಿ ಮಾತ್ರ ಅವರು ಹಣವನ್ನ ಮರಳಿ ಪಡೆಯಬೇಕು. ಬ್ಯಾಂಕಿನ ಅಧಿಕಾರಿಗಳು ಅಥವಾ ಏಜೆಂಟ್ ಗಳು ಬ್ಯಾಂಕಿನ ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ಘಂಟೆಯಿಂದ ಸಂಜೆ 7 ಘಂಟೆಯ ಒಳಗೆ ಕರೆಮಾಡಿ ಸಾಲದ ಮರುಪಾವತಿಯ ಬಗ್ಗೆ ಸಾಲಗಾರನ ಬಳಿ ಮಾತನಾಡಬಹುದು.

ಸಾಲಗಾರನ ಮನೆಗೆ ಹೋಗುವ ಅಧಿಕಾರ ಕೂಡ ಇದೆ ಸಮಯ ಆಗಿರುತ್ತದೆ. ಈ ಸಮಯಕ್ಕೂ ಮೊದಲು ಮತ್ತು ಈ ಸಮಯದ ನಂತರ ಅಧಿಕಾರಿಗಳು ಮತ್ತು ಏಜೆಂಟ್ ಗಳು ಮನೆಗೆ ಹೋಗುವ ಹಾಗಿಲ್ಲ. EMI 90 ದಿನಗಳ ಕಾಲ ಪಾವತಿ ಮಾಡದೆ ಇದ್ದರೆ ನೋಟೀಸ್ ನೀಡಬೇಕು ಮತ್ತು ನೋಟಿಸ್ ನೀಡಿದ 60 ದಿನದಲ್ಲಿ ಸಾಲಗಾರನಿಗೆ ಹಣವನ್ನ ಠೇವಣಿ ಮಾಡಲು ಸಮಯವನ್ನ ನೀಡಬೇಕು.

ಈ ಸಮಯದಲ್ಲಿ ವ್ಯಕ್ತಿ ಹಣವನ್ನ ಠೇವಣಿ ಮಾಡದೆ ಇದ್ದರೆ ಮಾತ್ರ ಬ್ಯಾಂಕುಗಳು ಆಸ್ತಿ, ವಾಹನಗಳು ಮತ್ತು ಇತರೆ ಬೆಲೆಬಾಳುವ ವಸ್ತುವನ್ನ ಜಪ್ತಿ ಮಾಡುವ ಅಧಿಕಾರವನ್ನ ಹೊಂದಿರುತ್ತದೆ. ಸಾಲವನ್ನ ವಸೂಲಿ ಮಾಡುವ ಸಮಯದಲ್ಲಿ ಅಧಿಕಾರಿಗಳು ಸಾಲಗಾರನ ಬಳಿ ಅನುಚಿತವಾಗಿ ವರ್ತನೆ ಮಾಡುವ ಹಾಗಿಲ್ಲ ಮತ್ತು ದೈಹಿಕವಾಗಿ ಮಾನಸಿಕವಾಗಿ ಹಿಂಸೆಯನ್ನ ಕೂಡ ನೀಡುವಂತಿಲ್ಲ.

Join Nadunudi News WhatsApp Group