RBI Instructions: ಬ್ಯಾಂಕ್ ಖಾತೆ ಮಿನಿಮಂ ಬ್ಯಾಲೆನ್ಸ್ ನಿಯಮ ಬದಲಿಸಿದ RBI, ರಾತ್ರೋರಾತ್ರಿ RBI ದೊಡ್ಡ ಘೋಷಣೆ
ಬ್ಯಾಂಕ್ ಖಾತೆಯ ಮಿನಿಮಂ ಬ್ಯಾಲೆನ್ಸ್ ವಿಚಾರವಾಗಿ ಹೊಸ ರೂಲ್ಸ್ ಜಾರಿಗೆ ತಂದ RBI
RBI Instructions On Bank Minimum Balance: ಆರ್ಬಿಐ (RBI) ಹೊಸ ನಿಯಮ ಒಂದನ್ನು ಜಾರಿಗೆ ತಂದಿದ್ದು, ಎರಡಕ್ಕೂ ಹೆಚ್ಚು ವರ್ಷದಿಂದ ಖಾತೆಯನ್ನು ನಿರ್ವಹಿಸದ (inoperative bank account) ಮತ್ತು ಮಿನಿಮಮ್ ಬ್ಯಾಲನ್ಸ್ ಉಳಿಸದ ಖಾತೆದಾರರಿಗೆ RBI ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು.
ಆರ್ಬಿಐ ಕ್ಲೈಮ್ ಆಗದ ಬ್ಯಾಂಕ್ ಹಣದ (unclaimed bank deposits) ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಹಲವು ಕ್ರಮಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಶುಲ್ಕದ ನಿರ್ಧಾರವೂ ಒಂದಾಗಿದೆ. ಈ ಹಿಂದೆಯೂ ಮಿನಿಮಮ್ ಬ್ಯಾಲನ್ಸ್ ವಿಚಾರದಲ್ಲಿ ಬ್ಯಾಂಕುಗಳಿಗೆ ಆರ್ಬಿಐ ಮಾಹಿತಿ ನೀಡಿದ್ದು ಇದು ಹಲವು ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
![RBI Instructions On Bank Minimum Balance](https://nadunudi.in/wp-content/uploads/2024/01/RBI-Instructions.jpg)
ನಿಷ್ಕ್ರಿಯ ಬ್ಯಾಂಕ್ ಖಾತೆ ವರ್ಗಾಯಿಸುವಂತಿಲ್ಲ
RBI ಈ ಮೂಲಕ ಸ್ಕಾಲರ್ಶಿಪ್ ಹಣ ಪಡೆಯಲು ಅಥವಾ DBT ಹಣಕ್ಕೆಂದು ರಚನೆಯಾಗಿರುವ ಬ್ಯಾಂಕ್ ಖಾತೆಗಳನ್ನು Inoperative ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆ ಎಂದು ವರ್ಗಾಯಿಸಬಾರದು ಎಂದೂ ಇನ್ನೊಂದು ಮಹತ್ವದ ಆದೇಶದಲ್ಲಿ ತಿಳಿಸಿದೆ. ಎರಡಕ್ಕೂ ಹೆಚ್ಚು ವರ್ಷ ಯಾವುದೇ ವಹಿವಾಟು ನಡೆಸದ ಇಂತಹ ಖಾತೆಗಳನ್ನು ಬ್ಯಾಂಕುಗಳು Inoperative ಅಕೌಂಟ್ ಎಂದು ವರ್ಗೀಕರಿಸುತ್ತವೆ.
ಈಗ ಆರ್ಬಿಐ ಈ ಕ್ರಮವನ್ನು ಬದಲಿಸಿದೆ. ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಹೊಂದಿರುವುದು ಅವಶ್ಯಕ. ಕೆಲ ಬ್ಯಾಂಕುಗಳು ಝೀರೋ ಬ್ಯಾಲನ್ಸ್ ಸೌಲಭ್ಯ ಹೊಂದಿರುತ್ತವೆ. ಸ್ಯಾಲರಿ ಅಕೌಂಟ್ಗಳಿಗೂ ಈ ಸವಲತ್ತು ಇರುತ್ತದೆ. ಎಚ್ಡಿಎಫ್ಸಿ, ಎಕ್ಸಿಸ್ ಮೊದಲಾದ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಮೊತ್ತ 10,000 ರೂ ಇದೆ. ಕೆಲ ಬ್ಯಾಂಕುಗಳಲ್ಲಿ 1,000 ರೂನಿಂದ 10,000 ರೂವರೆಗೂ ಮಿನಿಮಮ್ ಬ್ಯಾಲನ್ಸ್ ಇರುತ್ತದೆ.
![Bank Minimum Balance](https://nadunudi.in/wp-content/uploads/2024/01/Bank-Minimum-Balance.jpg)
ಮಿನಿಮಮ್ ಬ್ಯಾಲನ್ಸ್ ಶುಲ್ಕ ವಸೂಲಿ ಮಾಡುವಂತಿಲ್ಲ
ಖಾತೆಯಲ್ಲಿ ಕನಿಷ್ಠ ಮೊತ್ತದ ಬ್ಯಾಲನ್ಸ್ ಉಳಿಸಿಕೊಳ್ಳದೇ ಹೋದರೆ ಬ್ಯಾಂಕುಗಳು ದಂಡ ವಿಧಿಸುತ್ತವೆ. ಮಿನಿಮಮ್ ಬ್ಯಾಲನ್ಸ್ ಇಲ್ಲದೇ ಹಲವು ವರ್ಷಗಳಿಂದ Inoperative ಆಗಿರುವ ಖಾತೆಗಳಿಗೆ ಹಲವು ಸಾವಿರ ರೂ ಗಳಷ್ಟು ದಂಡ ಬೀಳಬಹುದು. ಒಂದು ವೇಳೆ, ದಂಡ ಕಟ್ಟುವ ಭಯದಲ್ಲಿ ಗ್ರಾಹಕ ತಮ್ಮ ಹಳೆಯ ಖಾತೆಗೆ ಮರುಜೀವ ಪಡೆಯಲು ಬಯಸಿದರೂ ದೂರವಾಗಬಹುದು.
ಇದನ್ನು ತಪ್ಪಿಸಲು ಆರ್ಬಿಐ ಮಿನಿಮಮ್ ಬ್ಯಾಲನ್ಸ್ ಶುಲ್ಕ ವಸೂಲಿ ಮಾಡಬಾರದು ಎಂದು ಬ್ಯಾಂಕುಗಳಿಗೆ ಹೇಳಿದೆ. ಮಿನಿಮಮ್ ಬ್ಯಾಲನ್ಸ್ ಉಳಿಸದ್ದಕ್ಕೆ ದಂಡವನ್ನು ವಿಧಿಸುವುದರಿಂದ ಖಾತೆಯ ಹಣ ನೆಗಟಿವ್ಗೆ ಹೋಗುತ್ತದೆ. ಈ ಹಿಂದೆಯೂ ಮಿನಿಮಮ್ ಬ್ಯಾಲನ್ಸ್ ವಿಚಾರದಲ್ಲಿ ಬ್ಯಾಂಕುಗಳಿಗೆ RBI ಮಾಹಿತಿ ನೀಡಿದೆ. ಇನ್ನುಮುಂದೆ ಹಲವು ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಜನರು ಯಾವುದೇ ಮಿನಿಮಂ ಬ್ಯಾಲೆನ್ಸ್ ಮೈಟೈನ್ ಮಾಡುವ ಅಗತ್ಯ ಇರುವುದಿಲ್ಲ.