Car Loan Interest: ಹೊಸ ಕಾರ್ ಖರೀದಿಸಲು ಇದು ಬೆಸ್ಟ್ ಟೈಮ್, ಈ ಬ್ಯಾಂಕಿನಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ ಲೋನ್.

ಈ ಬ್ಯಾಂಕಿನಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ ಕಾರ್ ಲೋನ್, ಇಂದೇ ಕಾರ್ ಲೋನ್ ಗೆ ಅರ್ಜಿ ಹಾಕಿ

Bank Of Baroda Car Loan Interest: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಪರಿಚಯವಾಗುತ್ತ ಗ್ರಾಹಕರನ್ನು ಆಕರ್ಷಿಸುತ್ತಿದೆ. ಗ್ರಾಹಕರು ಹೊಸ ಹೊಸ ಕಾರ್ ಅನ್ನು ಖರೀದಿಸಲು ಮನಸ್ಸು ಮಾಡಿದರು ಅವರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇನ್ನು ಹೊಸ ಕಾರ್ ಖರೀದಿಸಲು ಬಯಸುವವರು ಹಣದ ಬಗ್ಗೆ ಯೋಚಿಸುವ ಅಗತ್ಯವಿಲ್ಲ.

ಏಕೆಂದರೆ ವಿವಿಧ ಕಾರ್ ತಯಾರಕ ಕಂಪನಿಗಳು ವಿಶೇಷ ಹಣಕಾಸು ಯೋಜನೆಯನ್ನು ಕೂಡ ಪರಿಚಯಿಸುತ್ತದೆ. ನೀವು ದೇಶದ ಯಾವುದೇ ಬ್ಯಾಂಕ್ ನಲ್ಲಿ Car Loan ಅನ್ನು ಪಡೆಯಬಹುದಾಗಿದೆ. ಇನ್ನು Car Loan ಅನ್ನು ಪಡೆಯುವ ಮುನ್ನ Bank ನ ಬಡ್ಡಿದರದ ಬಗ್ಗೆ ಗಮನಹರಿಸುವುದು ಅಗತ್ಯವಾಗುತ್ತದೆ. ಇದೀಗ ನಾವು ಈ ಲೇಖನದಲ್ಲಿ ಹೊಸ ಕಾರ್ ಖರೀದಿಸಲು Car Loan ತೆಗೆದುಕೊಳ್ಳಲು ಯಾವ Bank best ಆಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ.

Bank Of Baroda Car Loan Interest
Image Credit: Ionecredit

ಈ ಬ್ಯಾಂಕಿನಲ್ಲಿ ಸಿಗಲಿದೆ ಕಡಿಮೆ ಬಡ್ಡಿಗೆ ಲೋನ್
ಇದೀಗ ಸರ್ಕಾರೀ ವಲಯದ ಬ್ಯಾಂಕ್ ಆಗಿರುವ Bank Of Baroda ಜನಸಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. ವಾಹನ ಸಾಲ ಪಡೆದುಕೊಳ್ಳುವವರಿಗೆ ಒಂದೊಳ್ಳೆ ಅವಕಾಶವನ್ನು ನೀಡಿದೆ. ಸದ್ಯ Bank Of Baroda ತನ್ನ ಕಾರ್ ಸಾಲದ ಬಡಿದರಲ್ಲಿ ಕಡಿತವನ್ನು ಘೋಷಿಸಿದೆ. ಬ್ಯಾಂಕ್ ನ ಹೊಸ ಬಡ್ಡಿದರಗಳು ಫೆ. 26 ರಿಂದ ಅನ್ವಯವಾಗಲಿದೆ.

ಬ್ಯಾಂಕ್ ಆಫ್ ಬರೋಡಾ ಕಾರು ಸಾಲದ ದರಗಳನ್ನು ಶೇಕಡಾ 0.65 ರಷ್ಟು ಕಡಿಮೆ ಮಾಡಿದೆ ಮತ್ತು ದರಗಳು ಈಗ ಶೇಕಡಾ 9.4 ರಿಂದ ಶೇಕಡಾ 8.75 ಕ್ಕೆ ಇಳಿದಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಈ ಕೊಡುಗೆಯ ಅಡಿಯಲ್ಲಿ, ಸಂಸ್ಕರಣಾ ಶುಲ್ಕದಲ್ಲಿ ರಿಯಾಯಿತಿಯನ್ನು ಸಹ ಘೋಷಿಸಲಾಗಿದೆ. ಮಾರುಕಟ್ಟೆ ಮುಚ್ಚಿದ ಬಳಿಕ ಬ್ಯಾಂಕ್ ಈ ಆಫರ್ ಬಗ್ಗೆ ಮಾಹಿತಿ ನೀಡಿದೆ.

Car Loan Interest Rate 2024
Image Credit: Caranddriver

ಹೊಸ ಕಾರ್ ಖರೀದಿಸಲು ಇದು ಬೆಸ್ಟ್ ಟೈಮ್
ನೀವು ಮಾರ್ಚ್ 31 ರ ವರೆಗೆ ಅಗ್ಗದ ಕಾರು ಸಾಲದ ಪ್ರಯೋಜನವನ್ನು ಪಡೆಯಬಹುದು. ಈ ದರಗಳು 26 ಫೆಬ್ರವರಿ 2024 ರಿಂದ 31 ಮಾರ್ಚ್ 2024 ರ ವರೆಗೆ ಅನ್ವಯಿಸುತ್ತವೆ. ಈ ದರಗಳು ಹೊಸ ಕಾರಿನ ಖರೀದಿಗೆ ಅನ್ವಯಿಸುತ್ತದೆ. ಇದು ಕಾರ್ ಲೋನ್ ಎರವಲುಗಾರನ ಕ್ರೆಡಿಟ್ Profile ಅನ್ನು ಅವಲಂಬಿಸಿರುತ್ತದೆ.

Join Nadunudi News WhatsApp Group

ಎರವಲುಗಾರ ಯಾವ ದರದಲ್ಲಿ ಕಾರ್ ಸಾಲವನ್ನು ಪಡೆಯುತ್ತಾನೆ ಎನ್ನುವುದು ಮುಖ್ಯವಾಗಿರುತ್ತದೆ. Bank Of Baroda ಕಾರು ಸಾಲದ ಮೇಲೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಇದು 8.85 ಪ್ರತಿಶತದಿಂದ ಪ್ರಾರಂಭವಾಗುತ್ತದೆ. ಇದಲ್ಲದೆ, ಫ್ಲೋಟಿಂಗ್ ಮತ್ತು ಸ್ಥಿರ ದರದ ಆಯ್ಕೆಗಳ ಮೇಲೆ ಸಂಸ್ಕರಣಾ ಶುಲ್ಕದ ಮೇಲೆ ರಿಯಾಯಿತಿ ಇರುತ್ತದೆ. ಈ ಸಾಲಗಳನ್ನು ಗರಿಷ್ಠ 84 ತಿಂಗಳ ಅವಧಿಗೆ ನೀಡಲಾಗುವುದು.

Join Nadunudi News WhatsApp Group