Asafoetida Business: 3 ಲಕ್ಷ ಹೂಡಿಕೆ ಮಾಡಿ ಈ ಬಿಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 2 ಲಕ್ಷ ಲಾಭ, ಬಿಸಿನೆಸ್ ಪ್ಲ್ಯಾನ್.

ಪ್ರತಿ ತಿಂಗಳು ಇಂಗು ಮಾರಾಟದಿಂದ ಪಡೆಯಿರಿ 2 ಲಕ್ಷ ರೂಪಾಯಿ, ಇದೊಂದು ಉತ್ತಮವಾದ ವ್ಯವಹಾರವಾಗಿದೆ.

Asafoetida Business Investment And Profit: ಮನೆಯಲ್ಲಿಯೇ ಕುಳಿತು ಬ್ಯುಸಿನೆಸ್ ಆರಂಭ ಮಾಡುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ನೀವು ಮೊದಲು ಮನೆಯಲ್ಲಿಯೇ ಕುಳಿತು ಉದ್ಯೋಗ ಆರಂಭಿಸಲು ದೇಶದಲ್ಲಿ ಹೆಚ್ಚಿನ ಬೇಡಿಕೆ ಇರುವ ಬಗ್ಗೆ ತಿಳಿದುಕೊಳ್ಳಬೇಕು.

ದೇಶದಲ್ಲಿ ಇದರ ಉತ್ಪಾದನೆ ಕಡಿಮೆ ಇದೆ. ಅಲ್ಲದೆ ಇದರ ಬೇಡಿಕೆ ಹೆಚ್ಚಿದೆ ಎಂದು ಹೇಳಬಹುದು. ಹಿಮಾಚಲ ಪ್ರದೇಶದಲ್ಲಿ ಇಂಗು ಬೇಸಾಯ ಆರಂಭವಾಗಿದ್ದು ಇದರಿಂದ ಸಾಕಷ್ಟು ಲಾಭ ಪಡೆಯಬಹುದು.

ಇಂಗು ಬೆಳೆಯಿಂದ ಆಗುವ ಪ್ರಯೋಜನಗಳು
ಹಿಮಾಚಲ ಪ್ರದೇಶದಲ್ಲಿ ಇಂಗು ಬೆಲೆ ಕೆಜಿಗೆ 35 ಸಾವಿರದಿಂದ 40 ಸಾವಿರದ ವರೆಗೆ ಇದೆ. ಹಾಗಾಗಿ ಇಂಗು ಕೃಷಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ.

Sell ​​5 kg of Asafoetida every month and earn 2 lakh rupees
Image Credit: TimesOfIndia

ಇದನ್ನು ಮಸಾಲೆಯಾಗಿ ಬಳಸುವ ಏಕೈಕ ದೇಶ ಭಾರತ. 40 ರಷ್ಟು ಇಂಗನ್ನು ಇಡೀ ಪ್ರಪಂಚದಲ್ಲಿ ಭಾರತದಲ್ಲಿ ಮಾತ್ರ ಬಳಸಲಾಗುತ್ತಿದೆ ಮತ್ತು ಅಡುಗೆ ಮನೆಯಲ್ಲಿ ಇಂಗು ಇಲ್ಲದಿದ್ದರೆ ಹಲವು ಅಡುಗೆಗಳನ್ನ ಮಾಡಲು ಸಾಧ್ಯವಿಲ್ಲವಾಗಿದೆ. ಅಸೆಫೆಟಿಡಾದ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ, ಆದರೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

ಇಂಗು ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಅನೇಕ ಉತ್ಪನ್ನಗಳಿಗೆ ಪರಿಮಳವನ್ನು ನೀಡಲು ಮತ್ತು ಆಹಾರ ಮತ್ತು ಪಾನೀಯಕ್ಕಾಗಿ ಬಳಸಲಾಗುತ್ತದೆ.

Join Nadunudi News WhatsApp Group

Sell ​​5 kg of Asafoetida every month and earn 2 lakh rupees
Image Credit: Parenting

ಪ್ರತಿ ತಿಂಗಳು 5 ಕೆಜಿ ಇಂಗು ಮಾರಾಟ ಮಾಡಿ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಪಡೆಯಿರಿ
ಇನ್ನು ಇಂಗು ಬೆಳೆಯನ್ನ ಆರಂಭ ಮಾಡಲು ಸುಮಾರು 2 ರಿಂದ 3 ಲಕ್ಷ ರೂಪಾಯಿ ಖರ್ಚು ಆಗಬಹುದು. ಬೆಳೆಗೆ ಬೇಕಾದ ಸಲಕರಣೆ, ಗೊಬ್ಬರ ಮತ್ತು ಅದನ್ನ ಸರಿಯಾಗಿ ಬೇಸಾಯ ಮಾಡಲು ಬೇಕಾದ ಜಾಗ ಇವೆಲ್ಲದರ ಖರ್ಚು ಸುಮಾರು 2 ರಿಂದ 3 ಲಕ್ಷ ಆಗಬಹುದು ಎಂದು ಅಂದಾಜು ಮಾಡಲಾಗಿದೆ.

ಇನ್ನು ಒಮ್ಮೆ ಹೂಡಿಕೆ ಮಾಡಿದರೆ ಇದು ನಿಮ್ಮ ಜೀವನವನ್ನ ಬದಲಾಯಿಸಲಿದೆ. ನೀವು ಈ ಬೆಳೆಯನ್ನ ಆರಂಭ ಮಾಡಿದರೆ ಮುಂದಿನ ಐದು ವರ್ಷದಲ್ಲಿ ಇದರ ಹತ್ತು ಪಟ್ಟು ಹೆಚ್ಚು ಲಾಭವನ್ನ ಪಡೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ 1 ಕೆಜಿ ಇಂಗಿನ ಬೆಲೆ 35 ಸಾವಿರದಿಂದ 40 ಸಾವಿರ ರೂಪಾಯಿ ಇದೆ. ನೀವು ಪ್ರತಿ ತಿಂಗಳು 5 ಕೆಜಿ ಇಂಗು ಮಾರಾಟ ಮಾಡಿದರೆ ನೀವು ಸುಲಭವಾಗಿ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಗಳಿಸಬಹುದು.

Join Nadunudi News WhatsApp Group