e-Shram Card: ದೇಶದ ಕಾರ್ಮಿಕರಿಗಾಗಿ ಕೇಂದ್ರದಿಂದ ಹೊಸ ಯೋಜನೆ, ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಸಿಗಲಿದೆ 2 ಲಕ್ಷ.

ದೇಶದ ಕಾರ್ಮಿಕರಿಗೆ ಈ ಯೋಜನೆಯಲ್ಲಿ ಸಿಗಲಿದೆ 2 ಲಕ್ಷ ರೂ ಉಚಿತ, ಷರತ್ತು ಅನ್ವಯ

e-Shram Card latest Update: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರನ್ನು ಸಮರ್ಥರನ್ನಾಗಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ. ಸದ್ಯ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ.

ಇನ್ನು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು e-Shram Card ಅನ್ನು ಸರ್ಕಾರ ಪರಿಚಯಿಸಿದೆ. ಈ ಕಾರ್ಡ್ ನ ಮೂಲಕ ಕಾರ್ಮಿಕರು ವಿಮಾ ಮೊತ್ತವನ್ನು ಪಡೆಯಬಹುದು. ನಾವೀಗ ಈ ಲೇಖನದಲ್ಲಿ e-Shram Card ನ ಮೂಲಕ ಏನೆಲ ಸೌಲಭ್ಯ ಸಿಗಲಿದೆ ಎನ್ನುವ ಬಗ್ಗೆ ಮಹಿತಿ ಹೇಳಲಿದ್ದೇವೆ.

e-Shram Card Benefits
Image Credit: Businessleague

ದೇಶದ ಕಾರ್ಮಿಕರಿಗಾಗಿ ಕೇಂದ್ರದಿಂದ ಹೊಸ ಯೋಜನೆ
ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರ e-Shram Card ಯೋಜನೆಯನ್ನು ಪರಿಚಯಿಸಿದೆ. ಇದಕ್ಕಾಗಿಯೇ ಸರ್ಕಾರ ಈ ಶ್ರಮ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಈ ಪೋರ್ಟಲ್ ನ ಮೂಲಕ ಕಾರ್ಮಿಕರು ಸರ್ಕಾರ ಯೋಜನೆಯ ಲಾಭವನ್ನು ಸುಲಭವಾಗಿ ಪಡೆಯಬಹುದು. ಇನ್ನು ನೀವು e-Shram Card ಗೆ ಅರ್ಜಿ ಸಲ್ಲಿಸಲು CSC- Common Service Centre ಅಥವಾ ಇ- ಶ್ರಮ್ ಪೋರ್ಟಲ್ ನ ಮೂಲಕ ಅಗತ್ಯ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಸಿಗಲಿದೆ 2 ಲಕ್ಷ
e-Shram Card ನ ಮೂಲಕ 60 ವರ್ಷದ ನಂತರ 3,000 ಪಿಂಚಣಿ, ವಿಮೆ ಮತ್ತು ಅಂಗವೈಫಲ್ಯ ಸಮಯದಲ್ಲಿ ಕಾರ್ಮಿಕರು ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ಗಳ ಆರ್ಥಿಕ ನೆರವು ಹಾಗೂ ಸಾವಿನ ಸಂದರ್ಭದಲ್ಲಿ 2,00,000 ರೂ. ಗಳ ಹಣಕಾಸಿನ ಸಹಾಯವನ್ನು ಪಡೆಯಬಹುದು. ಯೋಜನೆಯ ಲಾಭವನ್ನು ಪಡೆಯಲು ಕಾರ್ಮಿಕರು e-Shram Card ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇನ್ನು ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

e-Shram Card latest Update
Image Credit: Pratidintime

ಈವರೆಗೆ ಇ- ಶ್ರಮ್ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು 59 ವರ್ಷ ಗರಿಷ್ಟ ವಯೋಮಿಯಿಯನ್ನು ನಿಗದಿಪಡಿಸಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಈ ವಯೋಮಿತಿಯನ್ನು ವಿಸ್ತರಿಸಿದೆ. ಹೌದ ಅಸಂಘಟಿತ ಕಾರ್ಮಿಕ ವಯೋಮಿತಿಯನ್ನು ಕೇಂದ್ರ ಸರ್ಕಾರ 59 ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಿದೆ. ಈ ಮೂಲಕ ಅಸಂಘಟಿತ ಕಾರ್ಮಿಕೆರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕಾರ್ಮಿಕರು ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿ ಈ ಯೋಜನೆಯಡಿ ಲಾಭವನ್ನು ಪಡೆಯಬಹುದು.

Join Nadunudi News WhatsApp Group

e-Shram card apply
Image Credit: Housing

Join Nadunudi News WhatsApp Group