CNG Cars 2023: 2023 ರಲ್ಲಿ ದಾಖಲೆಯ ಮಾರಾಟ ಕಂಡಿದೆ ಈ CNG ಕಾರುಗಳು, ಕಡಿಮೆ ಬೆಲೆ ಮತ್ತು 27 Km ಮೈಲೇಜ್

2023 ರಲ್ಲಿ ಈ CNG ಕಾರುಗಳು ದಾಖಲೆಯ ಮಾರಾಟ ಕಂಡಿದೆ

Best Mileage CNG Cars In India: ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಹಾಗು ನಿರ್ವಹಣಾ ವೆಚ್ಚ ಹೆಚ್ಚಳ ಪರಿಣಾಮ ಪ್ರತಿಯೊಬ್ಬರು ಎಲೆಕ್ಟ್ರಿಕ್ (Electric) ಮತ್ತು ಸಿಎನ್ ಜಿ (CNG) ಕಾರುಗಳನ್ನು ಖರೀದಿಸುತ್ತಿದ್ದಾರೆ. ಈ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದ್ದು, ವಿವಿಧ ಕಾರು ಉತ್ಪಾದನಾ ಕಂಪನಿಗಳು ಹಲವಾರು ಹೊಸ ಕಾರು ಮಾದರಿಗಳಲ್ಲಿ ಇದೀಗ ಸಿಎನ್​ಜಿ ಆವೃತ್ತಿಗಳನ್ನು ಮಾರಾಟ ಮಾಡುತ್ತಿವೆ.

ಉತ್ತಮ ಬೇಡಿಕೆ ಜೊತೆಗೆ ಈ ಕಾರುಗಳು ದುಬಾರಿ ಆಗಿದ್ದು, ಸಿಎನ್ ಜಿ ಕಾರುಗಳು ಸದ್ಯ ಎಂಟ್ರಿ ಲೆವಲ್ ಕಾರುಗಳಲ್ಲಿ ಮಾತ್ರವಲ್ಲದೆ ಮಧ್ಯಮ ಗಾತ್ರದ SUV ಮತ್ತು MPV ಕಾರುಗಳಲ್ಲೂ ಸಹ ಮಾರಾಟಗೊಳ್ಳುತ್ತಿದ್ದು, ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವ CNG ಮಾದರಿಗಳ ಮಾಹಿತಿ ಇಲ್ಲಿದೆ.

Maruti Suzuki Brezza Car
Image Credit: Car Wale

Maruti Suzuki Brezza Car

ಹೊಸ ಬ್ರೆಝಾ CNG ಮಾದರಿಯು ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರಿನಲ್ಲಿ 1.5 ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್ ನೊಂದಿಗೆ CNG KIt ಜೋಡಿಸಲಾಗಿದ್ದು, ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 88 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 25.51 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಕಾರಿನಲ್ಲಿ 6 ಏರ್ ಬ್ಯಾಗ್ ಗಳು, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಇಂಟಿರಿಯರ್ ಫೀಚರ್ಸ್ ಕೂಡ ಗಮನ ಸೆಳೆಯಲಿವೆ. ಈ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 9.24 ಲಕ್ಷ ಬೆಲೆ ಹೊಂದಿದೆ.

Maruti Suzuki Fronx Car
Image Credit: News 24

Maruti Suzuki Fronx Car

Join Nadunudi News WhatsApp Group

ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಸಿಎನ್ ಜಿ ಮಾದರಿಯು ಸಿಗ್ಮಾ ಮತ್ತು ಡೆಲ್ಟಾ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು,ಹೊಸ ಫ್ರಾಂಕ್ಸ್ CNG ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಹೊಂದಿದ್ದು, ಪ್ರತಿ ಲೀಟರ್ ಸಿಎನ್ ಜಿಗೆ ಗರಿಷ್ಠ 28.51 ಕಿ.ಮೀ ಮೈಲೇಜ್ ನೊಂದಿಗೆ ಇದು ಈ ವಿಭಾಗದ ಕಾರುಗಳಲ್ಲೇ ಅತಿ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಈ ಕಾರಿನಲ್ಲಿ ಸಿಗ್ಮಾ ವೆರಿಯೆಂಟ್ ರೂ. 8.42 ಲಕ್ಷ ಬೆಲೆ ಹೊಂದಿದ್ದರೆ ಡೆಲ್ಟಾ ವೆರಿಯೆಂಟ್ ರೂ. 9.28 ಲಕ್ಷ ಬೆಲೆ ಹೊಂದಿದೆ.

Hyundai Exter Car Price In India
Image Credit: Carwale

Hyundai Exter Car

Micro SUV ವೈಶಿಷ್ಟ್ಯತೆಯ ಹ್ಯುಂಡೈ ಎಕ್ಸ್ ಟರ್ ಕಾರು ಮಾದರಿಯು CNG ಆಯ್ಕೆ ಹೊಂದಿರುವ ಪ್ರಮುಖ ಕಾರು ಮಾದರಿಗಳಲ್ಲಿ ಒಂದಾಗಿದ್ದು, ಎಕ್ಸ್ ಶೋರೂಂ ಪ್ರಕಾರ ಈ ಕಾರು ರೂ. 8.34 ಲಕ್ಷದಿಂದ ರೂ. 9.06 ಲಕ್ಷ ಬೆಲೆ ಹೊಂದಿದೆ. ಎಕ್ಸ್ ಟರ್ ಸಿಎನ್ ಜಿ ಮಾದರಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಫ್ಯಾಕ್ಟರಿ ಫಿಟೆಡ್ ಸಿಎನ್ ಜಿ ಕಿಟ್ ಹೊಂದಿದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್ ಜಿಗೆ 27 ಕಿ.ಮೀ ಮೈಲೇಜ್ ನೀಡುತ್ತದೆ.

Tata Punch Car Price And Mileage
Image Credit: Cartrade

Tata Punch Car

ಹೊಸ ಪಂಚ್ ಸಿಎನ್‌ಜಿ ಮಾದರಿಯು ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಪಂಚ್ ಸಿಎನ್‌ಜಿ ಮಾದರಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ವಿಶೇಷ ತಂತ್ರಜ್ಞಾನ ಹೊಂದಿರುವ ಐಸಿಎನ್‌ಜಿ ಕಿಟ್ ಜೋಡಣೆ ಹೊಂದಿದ್ದು, ಇದು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಕೆಜಿ ಸಿಎನ್‌ಜಿಗೆ ಗರಿಷ್ಠ 26 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಈ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 7.10 ಲಕ್ಷದಿಂದ ರೂ. 9.68 ಲಕ್ಷ ಬೆಲೆ ಹೊಂದಿದೆ.

Toyota Rumion Car Price And Mileage
Image Credit: Cars

Toyota Rumion Car

ಟೊಯೊಟಾ ರೂಮಿಯಾನ್ ಎಂಪಿವಿ ಕಾರು ಮಾರುತಿ ಎರ್ಟಿಗಾ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆ ಹೊಂದಿದ್ದು, ಪ್ರತಿ ಕೆಜಿ ಸಿಎನ್ ಜಿಗೆ ಇದು ಗರಿಷ್ಠ 26.11 ಕಿ.ಮೀ ಮೈಲೇಜ್ ನೀಡುತ್ತದೆ. ರೂಮಿಯಾನ್ ಸಿಎನ್ ಜಿ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 11.24 ಲಕ್ಷ ಬೆಲೆ ಹೊಂದಿದ್ದು, ಎರ್ಟಿಗಾದಲ್ಲಿರುವಂತೆ ಹಲವಾರು ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ.

Join Nadunudi News WhatsApp Group