Bigg Boss Winner: ಈ ಒಂದು ಕಾರಣಕ್ಕೆ ಪ್ರತಾಪ್ ಬಿಟ್ಟು ಕಾರ್ತಿಕ್ ಅನ್ನು ವಿನ್ನರ್ ಎಂದು ಘೋಷಿಸಿದ ಬಿಗ್ ಬಾಸ್, ಅಸಲಿ ಕಾರಣ ಇಲ್ಲಿದೆ

ಈ ಕಾರಣಕ್ಕೆ ಕಾರ್ತಿಕ್ ಅವರನ್ನ ಬಿಗ್ ಬಾಸ್ ವಿನ್ನರ್ ಎಂದು ಘೋಷಣೆ ಮಾಡಿದ ಬಿಗ್ ಬಾಸ್

Bigg Boss Kannada Season 10 Winner: ಈ ಭಾರಿಯ ಬಿಗ್ ಬಾಸ್ ಸೀಸನ್ 10 ಜನರನ್ನು ಮನರಂಜಿಸುವಲ್ಲಿ ಯಶಸ್ವಿ ಆಗಿದೆ. ದಿನಕ್ಕೊಂದು ತಿರುವಿನಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮ ಫೈನಲ್ ತಲುಪಿ ವಿಜೇತರನ್ನು ಸಹ ಘೋಷಣೆ ಮಾಡಿ ಆಗಿದೆ.

ಹಾಗೆಯೆ ಈ ಬಾರಿಯ ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ರ ವಿನ್ನರ್ ಆಗಿ ಕಾರ್ತಿಕ್ (Karthik Mahesh) ಬಿಗ್ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿದ್ದಾರೆ. ರನ್ನರ್ ಆಫ್ ಆಗಿ ಡ್ರೋನ್ ಪ್ರತಾಪ್ (Drone Prathap) ಆಯ್ಕೆ ಆದರು. ವಿನಯ್, ವರ್ತುರ್ ಸಂತೋಷ್, ತುಕಾಲಿ ಸಂತೋಷ್, ಸಂಗೀತ, ಡ್ರೋನ್ ಪ್ರತಾಪ್ ಹಾಗು ಕಾರ್ತಿಕ್ ಕೊನೆಯ ಸ್ಪರ್ಧಿಗಳಾಗಿ ಉಳಿದಿದ್ದು ನಂತರ ಒಬ್ಬೊಬ್ಬರಾಗಿ ಮನೆಯಿಂದ ಹೊರ ಬಂದರು.

Bigg Boss Kannada Season 10 Winner
Image Credit: Jagran

ಬಹಳ ಕುತೂಹಲಕಾರಿ ಫೈನಲ್ ಇದಾಗಿತ್ತು

ಬಿಗ್ ಬಾಸ್ ಸೀಸನ್ ಹತ್ತು ಇದು ಬಹಳ ವಿಶೇಷವಾಗಿ ಮೂಡಿ ಬಂದಿದ್ದೆ. ಹಿಂದಿನ ಸೀಸನ್ ಗಳಿಗಿಂತ ಈ ಸೀಸನ್ ಬಹಳ ನೀರಿಕ್ಷೆಯನ್ನು ಹೆಚ್ಚಿಸಿದೆ. ನಾಮಿನೇಷನ್ ಪ್ರಕ್ರಿಯೆ ಕೂಡ ವಿಭಿನ್ನ ರೀತಿಯಲ್ಲಿದ್ದು, ಮೊದಲನೇದಾಗಿ ಶನಿವಾರದ ಫಿನಾಲೆ ಎಪಿಸೋಡ್ ​ನಲ್ಲಿ ತುಕಾಲಿ ಸಂತೋಷ್​ ಮನೆಯಿಂದ ಹೊರ ಬರುವ ಮೂಲಕ 5ನೇ ರನ್ನರ್​ ಅಪ್​ ಎನಿಸಿಕೊಂಡರು. ಭಾನುವಾರದ ಅಂತಿಮ ಫಿನಾಲೆ ಎಪಿಸೋಡ್ ​ನಲ್ಲಿ ಐವರು ಸ್ಪರ್ಧಿಗಳು ಉಳಿದುಕೊಂಡಿದ್ದರು.

ಹಳ್ಳಿಕಾರ್​ ಒಡೆಯ ವರ್ತೂರ್​ ಸಂತೋಷ್​ ಮನೆಯಿಂದ ಹೊರಬಂದ ಮೊದಲ ಸ್ಪರ್ಧಿ ಎನಿಸಿಕೊಂಡರು. ಈ ಮೂಲಕ 4ನೇ ರನ್ನರ್​ ಅಪ್​ ಆದರು. ಇದಾದ ಬಳಿಕ ವಿನಯ್​ ಗೌಡ ದೊಡ್ಮನೆಯಿಂದ ಹೊರಗಡೆ ಬರುವ ಮೂಲಕ 3ನೇ ರನ್ನರ್​ ಅಪ್​ ಆದರೆ, ಸಂಗೀತಾ ಶೃಂಗೇರಿ ಕೂಡ ಮನೆಯಿಂದ ಎಲಿಮಿನೇಟ್​ ಆಗಿ 2ನೇ ರನ್ನರ್​ ಅಪ್​ ಎನಿಸಿಕೊಂಡರು. ಅಂತಿಮವಾಗಿ ಮನೆಯಲ್ಲಿ ಕಾರ್ತಿಕ್​ ಮತ್ತು ಪ್ರತಾಪ್​ ಮಾತ್ರ ಉಳಿದುಕೊಂಡರು.

Join Nadunudi News WhatsApp Group

Bigg Boss Kannada 10 winner Karthik Mahesh
Image Credit: News Next Live

ಕಾರ್ತಿಕ್ ಮತ್ತು ಪ್ರತಾಪ್ ನಡುವೆ ಗೆಲುವಿನ ಹೋರಾಟ
ಕಾರ್ತಿಕ್ ಹಾಗು ಪ್ರತಾಪ್ ಇಬ್ಬರಲ್ಲಿ ಒಬ್ಬರು ಗೆಲುವನ್ನು ಸಾಧಿಸುವುದು ಪಕ್ಕ ಆದಾಗ ಪ್ರತಿಯೊಬ್ಬರಲ್ಲೂ ಒಂದು ಭಯ ಹುಟ್ಟಿತು. ಹಾಗೆಯೆ ಕಾರ್ತಿಕ್​ ಮಹೇಶ್​ ಕೈಯನ್ನು ಮೇಲೆತ್ತುವ ಮೂಲಕ ಅಧಿಕೃತ ಘೋಷಣೆ ಮಾಡಿದರು. ಕಾರ್ತಿಕ್​ ಮಹೇಶ್​ಗೆ 2,97,39, 904 ಮತಗಳು ಸಿಕ್ಕಿದಾಗಿದೆ.

ವಿನ್ನರ್​ ಕಾರ್ತಿಕ್​ಗೆ 50 ಲಕ್ಷ ನಗದು ಮತ್ತು ಒಂದು ಕಾರು, ಬೈಕ್ ಬಹುಮಾನವಾಗಿ ಸಿಕ್ಕಿದೆ. ಪ್ರಥಮ ರನ್ನರ್​ ಅಪ್​ ಡ್ರೋನ್​ ಪ್ರತಾಪ್​ ಅವರಿಗೆ 10 ಲಕ್ಷ ರೂ. ನಗದು ಮತ್ತು ಒಂದು ಬೈಕ್​ ಉಡುಗೊರೆಯಾಗಿ ಲಭಿಸಿದೆ. ಕಾರ್ತಿಕ್ ಅವರು ಬಿಗ್ ಮನೆಯಲ್ಲಿ ಅನೇಕ ಟಾಸ್ಕ್ ಗಳನ್ನೂ ಗೆದ್ದಿದ್ದಲ್ಲದೆ, ಒಂದೆರಡು ಬಾರಿ ಕ್ಯಾಪ್ಟನ್ ಕೂಡ ಆಗಿದ್ದರು. ಅಷ್ಟೇ ಅಲ್ಲದೆ ಎಲ್ಲರೊಂದಿಗೆ ಬೆರೆತು ತುಂಬ ಚೆನ್ನಾಗಿ ಆಟ ಆಡಿದ್ದಾರೆ.

Bigg Boss Season 10 Kannada 1st Runner Up
Image Credit: Filmibeat

ಉತ್ತಮ ನಾಯಕನಾಗಿ ಕಾರ್ತಿಕ್

ಬಿಗ್ ಮನೆಯಲ್ಲಿ ಕಾರ್ತಿಕ್ ಎರಡು ಬಾರಿ ಕ್ಯಾಪ್ಟನ್ ಆಗಿದ್ದು, ಉತ್ತಮವಾಗಿ ತನ್ನ ಕೆಲಸವನ್ನು ಮಾಡಿದ್ದಾರೆ. ಕೇವಲ ಕ್ಯಾಪ್ಟನ್ ಆಗಿ ಮಾತ್ರ ವಲ್ಲದೆ ಎಲ್ಲಾ ಸರಿ ತಪ್ಪುಗಳಿಗೂ ಮಾತನಾಡಿ ಹಲವು ಬಾರಿ ಕೆಲವರನ್ನು ಸೇವ್ ಮಾಡಿದ್ದಾರೆ. ಎಲ್ಲರೊಂದಿಗೆ ಸ್ನೇಹಿತರಾಗಿ ನಡೆದುಕೊಳ್ಳುವ ಗುಣ ಇರುವ ಇವರು ಬಿಗ್ ಮನೆಯಲ್ಲಿ ಇದ್ದ ಪ್ರತಿ ದಿನವನ್ನು ಸಹ ಸಂಭ್ರಮಿಸಿದ್ದಾರೆ.

ಕೆಲವು ಟಾಸ್ಕ್ ಗಳಲ್ಲಿ ತನ್ನ ಆಪ್ತರ ಬಗ್ಗೆ ಹೇಳುವಾಗ ತನ್ನ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದ ವಿನಯ್ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದು , ಪ್ರತಿಯೊಬ್ಬ ಅಭಿಮಾನಿಗೂ ಕಣ್ಣಂಚಲ್ಲಿ ನೀರು ಬಂದಿದ್ದನ್ನು ಕಾಣಬಹುದಾಗಿ, ಭಾವನಾತ್ಮಕವಾಗಿ ಹಾಗು ದೈಹಿಕವಾಗಿ ಉತ್ತಮ ಆಟವಾಡಿ ಜನರ ಮೆಚ್ಚುಗೆಗೆ ಪಾತ್ರರಾದ ಕಾರ್ತಿಕ್ ಅವರು ಬಿಗ್ ಬಾಸ್ ಮನೆಯ ವಿನ್ನರ್ ಆಗಿ ಹೊರಹೊಮ್ಮಿದ್ದು, ಕೋಟ್ಯಂತರ ಅಭಿಮಾನಿಗಳಲ್ಲಿ ಖುಷಿ ತರಿಸಿದೆ .

Join Nadunudi News WhatsApp Group