Tanisha Kuppanda: ಈ ಬಾರಿ ಬಿಗ್ ಬಾಸ್ ವಿನ್ ಆಗುವುದು ಇವರೇ, ಬಿಗ್ ಬಾಸ್ ವಿನ್ನರ್ ಯಾರೆಂದು ತಿಳಿಸಿದ ತನಿಷಾ

ಬಿಗ್ ಬಾಸ್ ಮನೆಯ ಅನುಭವಗಳನ್ನು ಹಂಚಿಕೊಂಡ ತನಿಷಾ, ಇವರೇ ನೋಡಿ ಬಿಗ್ ಬಾಸ್ ವಿನ್ನರ್ ಅಂದ ತನಿಷಾ

Tanisha Kuppanda About Bigg Boss Winner: ಬಿಗ್ ಬಾಸ್ (Bigg Boss) ಕಾರ್ಯಕ್ರಮದಲ್ಲಿ ದಿನಕ್ಕೊಂದು ತಿರುವುಗಳಿರುವುದು ಸಹಜ, ಹಾಗೆಯೆ ಹಿಂದಿನ ವಾರ ಮಿಡ್‌ವೀಕ್ ಎಲಿಮಿನೇಷನ್‌ ಪ್ರಕ್ರಿಯೆ ನಡೆದು ಇದರಲ್ಲಿ ಬೆಂಕಿ ಎಂದು ಹೆಸರು ಪಡೆದಿರುವ ತನಿಷಾ ಕುಪ್ಪಂಡ ಅವರು ಮನೆಯಿಂದ ಹೊರ ಬಂದರು.

ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ ನಟಿ ತನಿಷಾ ಉತ್ತಮ ಸ್ಪರ್ಧಿ ಆಗಿದ್ದರು ಆದ್ರೆ ಅವರು ಬಿಗ್ ಮನೆಯಿಂದ ಹೊರ ಬಂದಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ ಅಷ್ಟೇ ಅಲ್ಲದೆ ಅವರು ಕೂಡ ತಾನು ಎಲಿಮಿನೇಷನ್‌ ಆಗುತ್ತೀನಿ ಅಂತ ಅಂದುಕೊಂಡಿರಲ್ಲಿವಾಗಿತ್ತು. ಕಣ್ಣೀರಾಕುತ್ತಲೇ ಬಿಗ್ ಮನೆಯಿಂದ ಹೊರ ಬಂದ ತನಿಷಾ ಈಗ ತನ್ನ ಬಿಗ್ ಬಾಸ್ ಮನೆಯ ಅನುಭವಗಳನ್ನು ಜಿಯೊಸಿನಿಮಾಗೆ ಎಕ್ಸ್‌ಕ್ಲ್ಯೂಸಿವ್ ನಲ್ಲಿ ಹಂಚಿಕೊಂಡರು.

Bigg Boss Tanisha Kuppanda
Image Credit: Ottplay

ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ವಿವರಿಸಿದ ತನಿಷಾ

ತನಿಷಾ ಅವರು ತಾನು ಖಂಡಿತವಾಗಿಯು ಬಿಗ್ ಮನೆಯಿಂದ ಹೊರ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ ಅಂದರು. ಹೌದು ಕಾಲುನೋವಾಗಿ ವಾಪಸ್ ಬರುತ್ತಾರೋ ಇಲ್ಲವೋ ಎಂಬ ಹಂತ ತಲುಪಿದರೂ, ಬಿಡದೇ ವಾಪಸ್ ಬಂದು ಸಾಕಷ್ಟು ಆಟವಾಡಿ ನೂರಕ್ಕೂ ಅಧಿಕ ದಿನ ಉಳಿದಿಕೊಂಡಿದ್ದ ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು.

‘ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ’ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಬಿಗ್ ಮನೆಯಿಂದ ಹೋಗುವಾಗ ಕಣ್ಣೀರು ಹಾಕುತ್ತ ಮನೆಯ ಸದಸ್ಯರ ಬಳಿ ನಿಮಗೂ ಬೇಕಾಗಿರುವುದು ಇದೆ ತಾನೇ, ನನ್ನ ದ್ವನಿ ನಿಮಗೆ ಇಷ್ಟ ಇರ್ಲಿಲ್ಲವಾಗಿತ್ತಲ್ಲ, ‘ಬಿಗ್‌ಬಾಸ್ ಯಾಕಿಷ್ಟುಕೆಟ್ಟದಾಗಿ ಕಳಿಸಿಕೊಡ್ತೀರಾ?’ ಎಂದು ಕೇಳುತ್ತಲೇ ಹೊರಗೆ ಹೋದರು.

Join Nadunudi News WhatsApp Group

ಬಿಗ್ ಬಾಸ್ ಮನೆಯ ಸುಂದರ ಕ್ಷಣಗಳನ್ನು ನೆನಪಿಸಿಕೊಂಡ ತನಿಷಾ

ಬಿಗ್ ಮನೆಯಿಂದ ಹೊರ ಬಂದ ಮೇಲೆ ನಿಜವಾಗಿಯೂ ನಾನು ಬಿಗ್ ಮನೆಯಲ್ಲಿ ಹೇಗಿದ್ದೆ ಎನ್ನುವುದರ ಅರಿವಾಯಿತು, ನಾನು ನಿಜ ಹೇಗೆದ್ದೀನೋ ಹಾಗೆ ಇದ್ದೆ ನಾಟಕದ ಆಟ ಆಡಿಲ್ಲ, ಅಲ್ಲಿ ಇರುವವರು ಹಿಂದೆ ಏನು ಮಾತಾಡಿದ್ದಾರೆ, ಮುಂದೆ ಹೇಗಿದ್ದರೂ ಎನ್ನುವುದರ ಅರಿವು ಈಗ ನನಗಾಗಿದೆ, ನನಗೀಗ ಅನಿಸುತ್ತಿದೆ ನಾನು ಪಾಪ ಅಂತ ಅವರನ್ನೆಲ್ಲ ಬಿಡಬಾರದಿತ್ತು ಅನಿಸಿದೆ ಎಂದರು.

ನನ್ನ ಬಿಗ್ ಬಾಸ್ ಜರ್ನಿ ನನಗೆ ಖುಷಿ ಕೊಟ್ಟಿದೆ. ನಾನು ಮಾಡಬೇಕಾದ ಎಲ್ಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದೇನೆ ಹಾಗಾಗಿ ನಾನು ಬಿಗ್‌ಬಾಸ್ ಮನೆಯ ಒಳಗೆ ಇದ್ದಾಗ ಎಷ್ಟು ಖುಷಿಯಾಗಿದ್ದೆನೊ, ತೃಪ್ತಳಾಗಿದ್ದೇನೋ. ಆಚೆ ಬಂದಾಗಲೂ ಹಾಗೆಯೇ ಇದ್ದೇನೆ. ಎಲ್ಲರ ಮನೆಯ ಮಗಳಾಗಿದ್ದೇನೆ ನಾನು. ತುಂಬ ಖುಷಿ ಕೊಟ್ಟ ಪಯಣ ಇದಾಗಿದೆ ಅಂದರು.

Bigg Boss Tanisha Kuppanda Latest News
Image Credit: Publictv

ಬಿಗ್‌ಬಾಸ್ ಮನೆಯಿಂದ ಇದನ್ನೆಲ್ಲಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ

ತನಿಷಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮೈಕ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದರಂತೆ. ಮೈಕ್ ಅನ್ನೋದು ನನ್ನ ದೇಹದ ಒಂದು ಭಾಗವೇ ಆಗಿಬಿಟ್ಟಿದೆ. ಎರಡನೇದಾಗಿ ಬಿಗ್‌ಬಾಸ್ ಧ್ವನಿ. ನೀವು ತುಂಬ ತಿದ್ದಿದೀರಾ, ಪ್ರೀತಿ ಕೊಟ್ಟಿದೀರಾ…. ನಾವು ಮುಂದೆ ನಡೆಯುವುದಕ್ಕೆ ದಾರಿಯೇ ಇಲ್ಲ ಅಂದಾಗ ಹೆಜ್ಜೆ ಎಲ್ಲಿ ಇಡಬಹುದು ಎಂದು ತೋರಿಸಿಕೊಟ್ಟಿದೀರಾ, ನಿಮ್ಮ ಕಡೆಯಿಂದ ಸಮಾನವಾದ ಪ್ರೀತಿ ಕಾಣಿಸ್ತಾ ಇತ್ತು. ನಮ್ಮ ಮನೆಯವರೂ ಇಷ್ಟು ಕೇರ್ ಮಾಡಿರ್ಲಿಲ್ವೇನೋ. ಅಷ್ಟು ಪ್ರೀತಿ ಕೊಟ್ಟಿದೀರಾ, ನಾನು ಇದನ್ನು ಯಾವತ್ತಿಗೂ ಮರೆಯಲಾರೆ, ಎಂದು ತನ್ನ ಅನುಭವಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಇವರೇ ಗೆಲ್ಲಬಹುದು?

ತನಿಷಾ ಅವರಿಗೆ ವರ್ತೂರು ಅವರ ಮುಗ್ಧತೆ ಇಷ್ಟವಾಗಿದೆಯಂತೆ. ಯಾರದೋ ಮಾತಿಗೆ ಕೇಳಿಸಿಕೊಂಡು, ಬಲಿಯಾಗಿ ಯಾರ ಬಗ್ಗೆಯೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದಿಲ್ಲ ಅವರು. ಹಾಗಾಗಿ ಅವರ ಜೊತೆಗೆ ಮಾತಾಡುವುದು ನನಗೆ ಮೊದಲಿನಿಂದಲೂ ಇಷ್ಟ. ನನ್ನ ಪ್ರಕಾರ ಬಿಗ್‌ಬಾಸ್ ಮನೆಯಲ್ಲಿ ಫೇಕ್ ಅಂದ್ರೆ, ಸಂಗೀತಾ. ಜೆನ್ಯೂನ್ ಅನಿಸುವುದು ವರ್ತೂರು ಸಂತೋಷ್. ನನ್ನ ಪ್ರಕಾರ ಗೆಲ್ಲಬಹುದು ಅನಿಸುವುದು ಸಂಗೀತಾ. ಆದರೆ ನನಗೆ ವಿನ್ ಆಗಬೇಕು ಅನ್ನುವುದು ಕಾರ್ತಿಕ್ ಎಂದಿದ್ದಾರೆ.

Join Nadunudi News WhatsApp Group