BPL Ration Card: ಹೊಸ BPL ರೇಷನ್ ಕಾರ್ಡ್ ಅರ್ಜಿ ಹಾಕಿದವರಿಗೆ ಬೇಸರದ ಸುದ್ದಿ, ಕಾರ್ಡ್ ಬರುತ್ತೋ ಇಲ್ಲವೋ ಎಂದು ಕೇಳುವಂತಿಲ್ಲ.

ದೇಶದಲ್ಲಿ ಮತ್ತು ರಾಜ್ಯದಲ್ಲಿ ಅದೆಷ್ಟೋ ಬಡಜನರು ಪ್ರತಿನಿತ್ಯ ಆಹಾರವನ್ನ ಸೇವನೆ ಮಾಡುತ್ತಿರುವುದು ಪದಿತ್ಯರ ಚೀಟಿಗಳ ಮೂಲಕ ಆಗಿದೆ. ಪ್ರತಿ ತಿಂಗಳು ಸರ್ಕಾರ ಬಡವರಿಗೆ ಅವರ ಪಡಿತರ ಚೀಟಿಗೆ ಅನುಗುಣವಾಗಿ ಆಹಾರಗಳನ್ನ ನೀಡುತ್ತದೆ. ಸದ್ಯ ಕಳೆದ ವರ್ಷ ದೇಶದಲ್ಲಿ ಅದೆಷ್ಟೋ BPL Ration Card ಗಳನ್ನ ರದ್ದು ಮಾಡಲಾಗಿದೆ. ಅನರ್ಹರು ಕೂಡ ಪಡಿತರ ಧಾನ್ಯಗಳನ್ನ ಪಡೆಯುತ್ತಿದ್ದಾರೆ ಅನ್ನುವ ಕಾರಣಕ್ಕೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಅದೆಷ್ಟೋ ಜನರ Ration Card ಗಳನ್ನ ಅನರ್ಹ ಎಂದು ರದ್ದು ಮಾಡಲಾಗಿತ್ತು. ವರ್ಷದ ಆರಂಭದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನ ಸಲ್ಲಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಅರ್ಜಿಯನ್ನ ಕೂಡ ಆನ್ಲೈನ್ ನಲ್ಲಿ ಕರೆದಿತ್ತು, ಆದರೆ ಜನರು ಅರ್ಜಿಯನ್ನ ಸಲ್ಲಿಸಿ ವರ್ಷ ಆಗುತ್ತಾ ಬಂದರೂ ಕೂಡ ಅವರಿಗೆ ಇನ್ನೂ ಕೂಡ ರೇಷನ್ ಕಾರ್ಡ್ ಸಿಕ್ಕಿಲ್ಲ.

ರೇಷನ್ ಕಾರ್ಡ್ ಸಿಗದ ಕಾರಣ ಅದೆಷ್ಟೋ ಬಡಜನರು ಊಟಕ್ಕೆ ಆಹಾರ ಇಲ್ಲದೆ ಕಷ್ಟ ಪಡುತ್ತಿರುವುದನ್ನ ನಾವು ಗಮನಿಸಬಹುದಾಗಿದೆ. ಸದ್ಯ ಈಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಆಹಾರ ಇಲಾಖೆಯಿಂದ ಇನ್ನೊಂದು ಬೇಸರದ ಸುದ್ದಿ ಬಂದಿದೆ. ಇನ್ನುಮುಂದೆ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿದ ಜನರು ರೇಷನ್ ಕಾರ್ಡ್ ಯಾವ ಬರುತ್ತದೆ ಮತ್ತು ರೇಷನ್ ಕಾರ್ಡ್ ಬರುತ್ತೋ ಇಲ್ಲವೋ ಎಂದು ಪ್ರಶ್ನೆಯನ್ನ ಕೇಳುವ ಹಾಗೆ ಇಲ್ಲ ಎಂದು ರಾಜ್ಯ ಆಹಾರ ಇಲಾಖೆ ಹೇಳಿಕೆಯನ್ನ ನೀಡಿದೆ. Food, Civil Supplies And Consumer Affairs Department ಇದರ ಬಗ್ಗೆ ಮಾಹಿತಿಯನ್ನ ನೀಡಿದೆ ಮತ್ತು ಇನ್ನುಮುಂದೆ ಅರ್ಜಿ ಸಲ್ಲಸಿದ ಜನರು ಬಂತೋ ಇಲ್ಲವೋ ಅಥವಾ ಬರುತ್ತೋ ಇಲ್ಲವೋ ಎಂದು ಅಧಿಕಾರಿಗಳ ಬಳಿ ಪ್ರಶ್ನೆಯನ್ನ ಕೇಳುವಂತೆ ಇಲ್ಲ ಎಂದು ಹೇಳಿದೆ.

BPL ration card application
Image Credit: www.deccanherald.com

ರಾಜ್ಯದಲ್ಲಿ ಸುಮಾರು 31.11 ಲಕ್ಷ ಕುಟುಂಬಗಳು ಈಗಾಗಲೇ ಹೊಸ ರೇಷನ್ ಕಾರ್ ಗಾಗಿ ಅರ್ಜಿಯನ್ನ ಸಲ್ಲಿಸಿದ್ದಾರೆ, ಆದರೆ ಅರ್ಹರಿಗೆ ರೇಷನ್ ಕಾರ್ಡ್ ವಿತರಿಸುವ ಬಗ್ಗೆ ಸರ್ಕಾರ ಯಾವುದೇ ಒಪ್ಪಿಗೆಯನ್ನ ಇಲ್ಲಿಯತನಕ ನೀಡಿಲ್ಲ ಮತ್ತು ಈ ಕಾರಣಗಳಿಂದ ಇನ್ನೂ ಕೂಡ ರೇಷನ್ ಬಿಡುಗಡೆ ಆಗಲಿಲ್ಲ ಎಂದು ಆಹಾರ ಇಲಾಖೆ ಹೇಳಿದೆ. ರಾಜ್ಯ ಸರ್ಕಾರ ಯಾವುದೇ ಆದೇಶವನ್ನ ಹೊರಡಿಸದ ಕಾರಣ ಹಲವು ಬಡವರಿಗೆ ಇನ್ನು ರೇಷನ್ ಕಾರ್ಡ್ ಸಿಗದೇ ಆಹಾರಕ್ಕಾಗಿ ಪರದಾಡುತ್ತಿದ್ದಾರೆ ಮತ್ತು ಅದೆಷ್ಟೋ ಬಡವರು ಉಚಿತ ಚಿಕಿತ್ಸೆಯ ಸೌಲಭ್ಯ ಕೂಡ ಸಿಗದೇ ಪರದಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರ ಅನುಮತಿ ನೀಡದ ಕಾರಣ ಅರ್ಜಿ ಸಲ್ಲಿಸಿದ ರೇಷನ್ ಕಾರ್ಡ್ ಗಳು ಹಾಗೆ ಉಳಿದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದು ಇದು ಜನರ ಬೇಸರ ಮತ್ತು ಆಕ್ರೋಶಕ್ಕೆ ಕೂಡ ಕಾರಣವಾಗಿದೆ. ಸರ್ಕಾರ ಈ ಆಲಸ್ಯತನಕ್ಕೆ ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಯಾವಾಗ ಹೊಸ ರೇಷನ್ ಕಾರ್ಡ್ ಮಾಡಲು ಅನುಮತಿ ನೀಡುತ್ತದೆಯೋ ಅಲ್ಲಿಯನಾಟಕ ಹೊಸ ರೇಷನ್ ಕಾರ್ಡ್ ವಿತರಣೆ ಆಗುವುದಿಲ್ಲ ಅನ್ನುವುದು ಖಚಿತವಾಗಿದೆ.

Join Nadunudi News WhatsApp Group

Join Nadunudi News WhatsApp Group