BPL Card Closure: ಇನ್ನುಮುಂದೆ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ, ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂದು ಈ ರೀತಿಯಾಗಿ ಪರಿಶೀಲಿಸಿಕೊಳ್ಳಿ.

BPL Ration Delete In Karnataka 2023: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಭಾಗ್ಯಗಳ ಜಾರಿ ಹೆಚ್ಚಾಗಿರುವುದರಿಂದ BPL Ration Card ಗೆ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಪಡಿತರನ್ನು ನೀಡಲು BPL Card ಗಳನ್ನೂ ಅರ್ಹ ಫಲಾನುಭವಿಗಳಿಗೆ ನೀಡಿತ್ತು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿ ಆರಂಭವಾದ ಕಾರಣದ BPL Ration Card ದಾರರಿಗೆ ಹೆಚ್ಚಿನ ಉಪಯೋಗ ಲಭ್ಯವಾಗುತ್ತಿದೆ.

BPL Ration Delete
Image Credit: Original Source

BPL Ration ಕಾರ್ಡ್ ಗೆ ಹೆಚ್ಚುತ್ತಿದೆ ಬೇಡಿಕೆ
ಇನ್ನು BPL ಕಾರ್ಡ್ ಹೊಂದಿರುವವರಿಗೆ ಸೌಲಭ್ಯ ಹೆಚ್ಚುತ್ತಿದ್ದಂತೆ BPL Card ಪಡೆಯಬೇಕೆನ್ನುವ ಹಂಬಲ ಆರ್ಥಿಕವಾಗಿ ಸಬಲರಾಗಿರುವವರಿಗೆ ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ BPL Ration Card ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನು ಸುಳ್ಳು ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಸುಳ್ಳು ದಾಖಲೆಗಳ ಮೂಲಕ ಈಗಾಗಲೇ ರಾಜ್ಯದಲ್ಲಿ ಹೆಚ್ಚಿನ ಜನರು BPL Ration Card ಅನ್ನು ಪಡೆದುಕೊಂಡಿದ್ದಾರೆ. ಅನರ್ಹರು ಉಚಿತ ರೇಷನ್ ಅನ್ನು ಪಡೆಯುವ ಮೂಲಕ ಸರ್ಕಾರ ಹೆಚ್ಚಿನ ನಷ್ಟವನ್ನು ಎಸಗುತ್ತಿದ್ದಾರೆ. ಹೀಗಾಗಿ ಸರ್ಕಾರ BPL Ration card ಅರ್ಜಿ ಸಲ್ಲಿಕೆ ವಿವಿಧ ಮಾನದಂಡವನ್ನು ಘೋಷಿಸಿದೆ. ಸರ್ಕಾರದ ನಿಯಮಾನುಸಾರವೇ BPL Card ಗೆ ಅರ್ಜಿ ಸಲ್ಲಿಸಬೇಕಿದೆ. ಅನರ್ಹರು ಅರ್ಜಿ ಸಲ್ಲಿಸಿದರೆ ಅಂತವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.

BPL Ration Card New Update
Image Credit: Kannada News Today

ರದ್ದು ಮಾಡಿರುವ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ ಸರ್ಕಾರ
ಇನ್ನು ಉಚಿತ ಪಡಿತರ ಹೆಸರಿನಲ್ಲಿ ಸರ್ಕಾರಕ್ಕೆ ವಂಚನೆ ಆಗುತ್ತಿರುವುದನ್ನು ತಪ್ಪಿಸಲು ಸರ್ಕಾರ ಅನರ್ಹರ Ration Card ಅನ್ನು ರದ್ದು ಮಾಡಿದೆ. ಸರ್ಕಾರದ ನಿಯಮವನ್ನು ಉಲ್ಲಂಘಿಸಿ ಯಾರು ರೇಷನ್ ಕಾರ್ಡ್ ಅನ್ನು ಪಡೆದಿರುತ್ತಾರೋ ಅಂತವರ ರೇಷನ್ ಕಾರ್ಡ್ ಅನ್ನು ಈಗಾಗಲೇ ಸರ್ಕಾರ ರದ್ದು ಮಾಡಿದೆ. ಇತ್ತೀಚೆಗಷ್ಟೇ 6 ತಿಂಗಳವರೆಗೆ ಯಾವ ಕುಟುಂಬ ರೇಷನ್ ಅನ್ನು ಪಡೆದಿಲ್ಲವೋ ಅಂತಹ 3.26 ಲಕ್ಷ ಕುಟುಂಬಗಳ BPL Ration Card ಅನ್ನು ಸರ್ಕಾರ ರದ್ದು ಪಡಿಸಿದೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿರಬಹುದು, ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ
ಇನ್ನು ಕೂಡ ಸರ್ಕಾರ ಅನರ್ಹರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವ ಕಾರ್ಯದಲ್ಲಿ ತೊಡಗಿದೆ. ಒಮ್ಮೆ ರೇಷನ್ ಕಾರ್ಡ್ ರದ್ದಾದರೆ ಅಂತಹ ಕುಟುಂಬದವರು ಕಾಂಗ್ರೆಸ್ ಸರ್ಕಾರದ ಅನ್ನ ಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯಾ..? ಎನ್ನುವುದನ್ನು ಪರಿಶೀಲಿಸಿಕೊಳ್ಳಲು ನೀವು http://http://ahar.kar.nic.in/ ಭೇಟಿ ನೀಡಿ. ಆಹಾರ ಇಲಾಖೆ ಈ ಅಧಿಕೃತ ವೆಬ್ ಸೈಟ್ ನಲ್ಲಿ ಚಾಲ್ತಿಯಿರುವ ಮತ್ತು ರದ್ದಾಗಿರುವ ರೇಷನ್ ಕಾರ್ಡ್ ನ ವಿವರ ಬಿಡುಗಡೆ ಮಾಡಿದೆ.

Join Nadunudi News WhatsApp Group

ಇನ್ನು ರೇಷನ್ ಕಾರ್ಡ್ ರದ್ದಾಗಿರುವ ಕಾರಣ ಗೃಹ ಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನ ಮಹಿಳೆಯರು ಪಡೆಯಲು ಸಾಧ್ಯವಿಲ್ಲ ಎಂದು ಹೇಳಬಹುದು. ಯಾರು ಯಾರು ಸುಳ್ಳು ಮಾಹಿತಿ ನೀಡಿ ರೇಷನ್ ಕಾರ್ಡ್ ಪಡೆದಿದ್ದಾರೋ ಅಂತಹ ಜನರ ರೇಷನ್ ಕಾರ್ಡುಗಳು ರದ್ದಾಗಿದೆ ಎಂದು ಸರ್ಕಾರ ಸ್ಪಷ್ಟನೆಯಲ್ಲಿ ತಿಳಿಸಿದೆ.

Join Nadunudi News WhatsApp Group