Cash Withdraw: ಏಟಿಎಂ ನಲ್ಲಿ ಹರಿದ ನೋಟುಗಳು ಬಂದರೆ ಇನ್ನುಮುಂದೆ ಸಮಸ್ಯೆ ಇಲ್ಲ, ಕೆಲವೇ ನಿಮಿಷದಲ್ಲಿ ಬದಲಿಸಿಕೊಳ್ಳಬಹುದು.

ಬ್ಯಾಂಕಿನಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಬದಲು ಈಗಿನ ಕಾಲದಲ್ಲಿ ಜನರು ಏಟಿಎಂ ಮೂಲಕ ಹೆಚ್ಚಿನ ಹಣದ ವ್ಯವಹಾರವನ್ನ ಮಾಡುತ್ತಾರೆ. Bank Account ಹೊಂದಿರುವ ಎಲ್ಲ ಜನರ ಬಳಿ ATM Card ಇದ್ದೆ ಇರುತ್ತದೆ ಮತ್ತು ಇತ್ತೀಚಿನ ದಿನಗಳಲ್ಲಿ ಏಟಿಎಂ ಕಾರ್ಡ್ ಬಳಸದ ಜನರನ್ನ ಹುಡುಕುವುದು ಬಹಳ ಕಷ್ಟವೆಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ ಏಟಿಎಂ ನಲ್ಲಿ Cash Withdraw ಮಾಡುವ ಸಮಯದಲ್ಲಿ ಹಲವು ಜನರು ಸಮಸ್ಯೆಯನ್ನ ಅನುಭವಿಸುತ್ತಿದ್ದಾರೆ ಅನ್ನುವುದು ಈಗ RBI ಗಮನಕ್ಕೆ ಬಂದಿದೆ. ಹೌದು ಅದೆಷ್ಟೋ ಜನರು RBI ಗೆ ದೂರುಗಳನ್ನ ನೀಡಿದ್ದಾರೆ.

ಏಟಿಎಂ ನಲ್ಲಿ ಹರಿದ ನೋಟುಗಳು ಬಂದಿದೆ ಎಂದು ಜನರು ಹಲವು ದೂರುಗಳನ್ನ ನೀಡಿರುವ ಕಾರಣ ಈಗ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು ಇನ್ನುಮುಂದೆ ಏಟಿಎಂ ನಲ್ಲಿ ಹರಿದ ನೋಟುಗಳು ಬಂದರೆ ಯಾರು ಕೂಡ ಆಘಾತ ಪಡುವ ಅವಶ್ಯಕತೆ ಇಲ್ಲ ಮತ್ತು ಅದನ್ನ ಕೂಡಲೇ ಬದಲಾವಣೆ ಮಾಡಿಕೊಳ್ಳಬಹುದು. ಹಾಗಾದರೆ ಜಾರಿಗೆ ಬಂದಿರುವ ಹೊಸ ನಿಯಮ ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಇನ್ನುಮುಂದೆ ಏಟಿಎಂ ನಲ್ಲಿ ಹರಿದ ನೋಟುಗಳು ಬಂದರೆ ಅದನ್ನ ಸುಲಭವಾಗಿ ಬದಲಾವಣೆಯನ್ನ ಮಾಡಿಕೊಳ್ಳಲು ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ನೀವು ಏಟಿಎಂ ನಿಂದ ಹಣವನ್ನ ಪಡೆಯುವ ಸಮಯದಲ್ಲಿ ಹರಿದ ನೋಟುಗಳು ಬಂದರೆ ನೀವು ಯಾವ ಬ್ಯಾಂಕಿನ ಏಟಿಎಂ ನಲ್ಲಿ ಹಣವನ್ನ ತೆಗೆದಿದ್ದರೋ ಆ ಬ್ಯಾಂಕಿನಲ್ಲಿ ಅರ್ಜಿಯನ್ನ ಸಲ್ಲಿಸಬೇಕು.

ATM Cash withdraw
Image Credit: www.thebetterindia.com

ಅರ್ಜಿಯಲ್ಲಿ ನೀವು ಏಟಿಎಂ ನಲ್ಲಿ ಹಣವನ್ನ ತೆಗೆದ ದಿನಾಂಕ, ಸಮಯ ಮತ್ತು ಸ್ಥಳವನ್ನ ನಮೂದಿಸಬೇಕು ಮತ್ತು ಅದರ ನೀವು ಏಟಿಎಂ ನಲ್ಲಿ ಹಣ ತೆಗೆಯುವ ಸಮಯದಲ್ಲಿ ಬರುವ ಟ್ರಾನ್ಸಾಕ್ಷನ್ ಸ್ಲಿಪ್ ಅನ್ನು ಅದರ ಜೊತೆಗೆ ಲಗತ್ತಿಸಬೇಕು. ನೀವು ಹಣವನ್ನ ತೆಗೆದ ಸಮಯದಲ್ಲಿ ಟ್ರಾನ್ಸಾಕ್ಷನ್ ಸ್ಲಿಪ್ ಬಾರದೆ ಇದ್ದರೆ ನೀವು ನಿಮ್ಮ ಮೊಬೈಲ್ ಗೆ ಹಣವನ್ನ ತೆಗೆದ ಸಮಯದಲ್ಲಿ ಬಂದ ಸಂದೇಶವನ್ನ ಬ್ಯಾಂಕಿನವರಿಗೆ ನೀಡಬೇಕು.

ಈ ಕೆಲವು ನಿಯಮಗಳನ್ನ ಪಾಲಿಸುವುದರ ಮೂಲಕ ನೀವು ಸುಲಭವಾಗಿ ಹರಿದ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಬಹುದು. RBI ನ ಕೆಲವು ನಿಯಮಗಳ ಪ್ರಕಾರ ಯಾವುದೇ ಸರ್ಕಾರೀ ಬ್ಯಾಂಕುಗಳು ಹರಿದ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಲು ನಿರಾಕರಣೆ ಮಾಡುವಂತಿಲ್ಲ. ಈ ಎಲ್ಲಾ ನಿಯಮಗಳನ್ನ ಪಾಲನೆ ಮಾಡಿ ನೀವು ಅರ್ಜಿಯನ್ನ ಸಲ್ಲಿಸಿದರೆ ನೀವು ತಕ್ಷಣವೇ ಹರಿದ ಹಣವನ್ನ ಬದಲಿಸಿಕೊಳ್ಳಬಹುದು. RBI ಹೊರಡಿಸಿರುವ ಈ ನಿಯಮಗಳು ಎಲ್ಲಾ ಬ್ಯಾಂಕುಗಳಿಗೆ ಅನ್ವಯ ಆಗಲಿದ್ದು ಜನರು ಯಾವುದೇ ಸಮಸ್ಯೆಯನ್ನ ಅನುಭವಿಸಬೇಕಾಗಿಲ್ಲ. ಬ್ಯಾಂಕುಗಳು ನಿಮ್ಮ ಅರ್ಜಿಯನ್ನ ಸ್ವೀಕರಿಸಲು ನಿರಾಕರಣೆ ಮಾಡಿದರೆ ನೀವು RBI ಗೆ ದೂರು ನೀಡಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group