Monthly Salary Hike: ಸರ್ಕಾರೀ ನೌಕರರಿಗೆ ಸಂಬಳ ಹೆಚ್ಚಳದ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ.

ಸಂಬಳ ಹೆಚ್ಚಳದ ಜೊತೆಗೆ ಕೇಂದ್ರ ಸರ್ಕಾರೀ ನೌಕರರಿಗೆ ಇನ್ನೊಂದು ಗುಡ್ ನ್ಯೂಸ್.

Government Employees: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಕೇಂದ್ರದ ನೌಕರರಿಗೆ ಸಾಲು ಸಾಲು ಸಿಹಿ ಸುದ್ದಿ ನೀಡುತ್ತಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಲಾಗಿದೆ.

ವೇತನ ಆಯೋಗ ಏಳರ ಅಡಿಯಲ್ಲಿ ಸರ್ಕಾರಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ಸರ್ಕಾರ ನೀಡಿದೆ. ಇದೀಗ ತುಟ್ಟಿಭತ್ಯೆ ಮತ್ತು ಪರಿಹಾರವನ್ನು 4%ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇವೆರಡನ್ನೂ 38 ರಿಂದ 42%ಗೆ ಏರಿಕೆ ಮಾಡಲಾಗಿದೆ.

Government Employees Monthly Salary Hike
Image Source: Times Of India

ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಹೊಸ ವರ್ಷದ ಆರಂಭದಿಂದ ಅಂದರೆ ಜನವರಿ ಒಂದು, 2023 ರಿಂದ ಈ ಹೆಚ್ಚಳವು ಜಾರಿಯಾಗಿದೆ. ಇದರಿಂದ ಪ್ರತಿ ವರ್ಷ 12,815 ಕೋಟಿ ರೂಪಾಯಿಗಳ ಆರ್ಥಿಕ ಹೊರೆ ಸರ್ಕಾರದ ಮೇಲೆ ಪ್ರತಿವರ್ಷ ಬೀಳಲಿದೆ.

ಇನ್ನು ಈ ತುಟ್ಟಿ ಬಗ್ಗೆ ಹೆಚ್ಚಳದ ಪ್ರಯೋಜನವನ್ನು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 69.76 ಲಕ್ಷ ಪಿಂಚಣಿದಾರರು ಸೇರಿದಂತೆ 1.17 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ.

Government Employees Monthly Salary Hike
Image Source: News18 Kannada

ಕೇಂದ್ರ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ
ನೌಕರರಿಗೆ ಶೀಘ್ರದಲ್ಲೇ 2 ತಿಂಗಳ ಬಾಕಿ ವೇತನ ದೊರೆಯಲಿದೆ. ಏಕೆಂದರೆ ಡಿಎ ಮತ್ತು ಡಿಆರ್ ಹೆಚ್ಚಳವು ಜನವರಿ 1 ರಿಂದ ಅನ್ವಯವಾಗುತ್ತದೆ ಎಂದು ಪರಿಗಣಿಸಲಾಗಿದೆ.

Join Nadunudi News WhatsApp Group

ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಹೆಚ್ಚಿದ ಡಿಎ ಬಾಕಿ ರೂಪದಲ್ಲಿ ದೊರೆಯಲಿದೆ. ಉದ್ಯೋಗಿಗಳ ಮಾರ್ಚ್ ತಿಂಗಳ ಸಂಬಳ ಹೆಚ್ಚಾಗುತ್ತದೆ. ಈ ಡಿಎ ಹೆಚ್ಚಳದ ನಂತರ ಸರಕಾರಕ್ಕೆ ಪ್ರತಿ ವರ್ಷ 12,815 ಕೋಟಿ ರೂ. ಗಳ ಆರ್ಥಿಕ ಹೊರೆ ಬೀಳಲಿದೆ.

Government Employees Monthly Salary Hike
Image Source: News18 Kannada

ಕೇಂದ್ರ ನೌಕರರ ಪ್ರತಿ ತಿಂಗಳ ಸಂಬಳದಲ್ಲಿ ಹೆಚ್ಚಳ
ಕೇಂದ್ರ ನೌಕರರ ಮಾಸಿಕ ವೇತನದಲ್ಲಿ ಹೆಚ್ಚಳ ಆಗಲಿದೆ. ಮಾಸಿಕ ಮೂಲ ವೇತನ 25,000 ರೂ. ಹೀಗಾಗಿ ಶೇ. 38 ಕ್ಕೆ 9,690 ರೂ. ಗೆ ಡಿಎ ಸಿಗಲಿದೆ.

ಈಗ ತುಟ್ಟಿಭತ್ಯೆಯಲ್ಲಿ ಶೇಕಡಾ 4 ಹೆಚ್ಚಳದ ನಂತರ, ಈ ಮೊತ್ತವು 10,710 ರೂ. ಆಗಿದೆ. ಅಂದರೆ ಉದ್ಯೋಗಿಯ ವೇತನದಲ್ಲಿ 1,020 ರೂ ಹೆಚ್ಚಳವಾಗಲಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿಯನ್ನು ಮಾರ್ಚ್ ತಿಂಗಳ ಸಂಬಳಕ್ಕೆ ಸೇರಿಸಲಾಗುತ್ತದೆ. ಇದರೊಂದಿಗೆ ಮಾರ್ಚ್ ತಿಂಗಳ ಡಿಎ ಕೂಡ ಬರಲಿದೆ. ಉದ್ಯೋಗಿಯ ವೇತನವು ಈ ತಿಂಗಳು 3,060 ರೂ. ಆಗಿದೆ.

Government Employees Monthly Salary Hike
Image Source: India Today

Join Nadunudi News WhatsApp Group