Cheque Bounce: ನೀವು ಕೊಟ್ಟ ಚೆಕ್ ಬೌನ್ಸ್ ಆದರೆ ಬ್ಯಾಂಕಿಗೆ ಎಷ್ಟು ದಂಡ ಕಟ್ಟಬೇಕು…? ಎಷ್ಟು ವರ್ಷ ಜೈಲು ಶಿಕ್ಷೆ ಗೊತ್ತಾ…?

ಚೆಕ್ ಬೌನ್ಸ್ ಯಾವಾಗ ಸಂಭವಿಸುತ್ತದೆ...? ಬೌನ್ಸ್ ಆದ ಚೆಕ್ ಗೆ ಎಷ್ಟು ದಂಡ ವಿಧಿಸಲಾಗುತ್ತದೆ...?

Cheque Bounce Fine And Punishment: ಬ್ಯಾಂಕ್ ನ ಗ್ರಾಹಕರು ಹೆಚ್ಚಾಗಿ Cheque ನ ಮೂಲಕ ದೊಡ್ಡ ದೊಡ್ಡ ವ್ಯವಹಾರವನ್ನು ಮಾಡಲು ಬಯಸುತ್ತಾರೆ. ದೇಶದ ಜನಪ್ರಿಯ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಚೆಕ್ ಸೌಲಭ್ಯವನ್ನು ನೀಡುತ್ತದೆ. ಇನ್ನು ಚೆಕ್ ನಲ್ಲಿ ಹಣದ ವಹಿವಾಟು ನಡೆಸುವುದು ಅಷ್ಟು ಸುಲಭದ ಮಾತಲ್ಲ. ಚೆಕ್ ವ್ಯವಹಾರವನ್ನು ನಡೆಸುವಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

Cheque Bounce Fine And Punishment
Image Credit: Vidhikarya

ರಾಜ್‌ಕುಮಾರ್ ಸಂತೋಷಿ ಚೆಕ್ ಬೌನ್ಸ್ ಪ್ರಕರಣ
ಘಾಯಲ್, ದಾಮಿನಿ, ಲಜ್ಜಾ, ಖಾಕಿ, ದಿ ಲೆಜೆಂಡ್ಸ್ ಆಫ್ ಭಗತ್ ಸಿಂಗ್ ಚಿತ್ರಗಳ ಖ್ಯಾತಿಯ ಚಲನಚಿತ್ರ ನಿರ್ಮಾಪಕರಾದ ರಾಜಕುಮಾರ ಸಂತೋಷಿಗೆ ಗುಜರಾತ್‌ನ ಜಾಮ್‌ನಗರ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದಲ್ಲದೇ 2 ಕೋಟಿ ದಂಡವನ್ನೂ ಕಟ್ಟಬೇಕಾಗಬಹುದು. ಇದಕ್ಕೆ ಕಾರಣ ರಾಜ್‌ಕುಮಾರ್ ಸಂತೋಷಿ ಅವರ ಚೆಕ್ ಬೌನ್ಸ್ ಪ್ರಕರಣ

ವಿವರಣೆ
ಜಾಮ್‌ನಗರದ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಶಿಪ್ಪಿಂಗ್ ಮ್ಯಾಗ್ನೆಟ್ ಅಶೋಕ್ ಲಾಲ್ ಅವರು ರಾಜ್‌ಕುಮಾರ್ ಸಂತೋಷಿ ಅವರ ಚಿತ್ರಕ್ಕೆ 1 ಕೋಟಿ ರೂಪಾಯಿ ಹೂಡಿಕೆ ಮಾಡುದಾಗಿ ಹೇಳಿದ್ದರು, ಇದಕ್ಕೆ ಪ್ರತಿಯಾಗಿ ಸಂತೋಷಿ ತಲಾ 10 ಲಕ್ಷ ರೂಪಾಯಿಗಳ 10 ಚೆಕ್ ನೀಡಿದ್ದಾರೆ. ಆದರೆ ಈ ಎಲ್ಲ ಚೆಕ್ ಗಳು ಬೌನ್ಸ್ ಆಗಿತ್ತು. ಈ ಬಗ್ಗೆ ಅವರ ಬಳಿ ಮಾತನಾಡಲು ಯತ್ನಿಸಿದರು ಸಿಗಲಿಲ್ಲ ಎಂದು ಅಶೋಕ್ ಆರೋಪಿಸಿದ್ದಾರೆ. ಇದಾದ ಬಳಿಕ ಅಶೋಕ್ ಅವರು ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Cheque Bounce Rules
Image Credit: Informal News

ಚೆಕ್ ಬೌನ್ಸ್ ಯಾವಾಗ ಸಂಭವಿಸುತ್ತದೆ…?
*ಖಾತೆಯಲ್ಲಿ ಹಣ ಇಲ್ಲದಿದ್ದಾಗ ಅಥವಾ ಕಡಿಮೆ ಬ್ಯಾಲೆನ್ಸ್ ಇದ್ದಾಗ.
*ಸಹಿ ಹೊಂದಾಣಿಕೆಯಾಗದಿದ್ದಾಗ
*ಖಾತೆ ಸಂಖ್ಯೆಯಲ್ಲಿ ತಪ್ಪಾದಾಗ
*ನಕಲಿ ಚೆಕ್‌ ನ ಶಂಕೆ
*ಚೆಕ್‌ ನಲ್ಲಿ ಕಂಪನಿಯ ಮುದ್ರೆಯ ಅನುಪಸ್ಥಿತಿ

ಬೌನ್ಸ್ ಆದ ಚೆಕ್ ಗೆ ಎಷ್ಟು ದಂಡ ವಿಧಿಸಲಾಗುತ್ತದೆ…?
ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ 1881 ರ ಸೆಕ್ಷನ್ 138 ರ ಪ್ರಕಾರ, ಚೆಕ್ ಅನ್ನು ಬೌನ್ಸ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಮತ್ತು 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಚೆಕ್ ನ ದುಪ್ಪಟ್ಟು ದಂಡ ಅಥವಾ ಎರಡನ್ನೂ ವಿಧಿಸಬಹುದು. ಈ ದಂಡವು ಕಾರಣಗಳನ್ನು ಅವಲಂಬಿಸಿ ಬದಲಾಗಬಹುದು. ಸಾಮಾನ್ಯವಾಗಿ 150 ರಿಂದ 800 ಒಳಗೆ ದಂಡವನ್ನು ವಿಧಿಸಬಹುದು.

Join Nadunudi News WhatsApp Group

Join Nadunudi News WhatsApp Group