CIBIL Score: Cibil ಸ್ಕೋರ್ ಮೂಲಕ ಕೇವಲ ಸಾಲ ಮಾತ್ರ ಅಲ್ಲದೆ ಉದ್ಯೋಗ ಕೂಡ ಪಡೆಯಬಹುದು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Cibil ಸ್ಕೋರ್ ಮೂಲಕ ಕೇವಲ ಸಾಲ ಮಾತ್ರ ಅಲ್ಲದೆ ಉದ್ಯೋಗವನ್ನು ಕೂಡ ಪಡೆಯಬಹುದು

CIBIL Score Importance: ಸಾಮಾನ್ಯವಾಗಿ ಸಾಲವನ್ನು ಪಡೆಯಲು CIBIL Score ಎಷ್ಟು ಮುಖ್ಯ ಎನ್ನುವುದು ಎಲ್ಲರಿಗು ತಿಳಿದೇ ಇದೆ. Cibil Score ಸರಿ ಇದ್ದರೆ ಮಾತ್ರ ಸಾಲ ಪಡೆಯುವ ಪ್ರಕ್ರಿಯೆ ತುಂಬ ಸುಲಭವಾಗುತ್ತದೆ. ನಿಮಗೆ ಗೊತ್ತೇ..? CIBIL Score ಎನ್ನುವುದು ಕೇವಲ ಸಾಲ ಪಡೆಯಲು ಮಾತ್ರ ಮುಖ್ಯವಲ್ಲ. ಬದಲಾಗಿ ಉದ್ಯೋಗವನ್ನು ಪಡೆಯಲು ಕೂಡ CIBIL Score ಮುಖ್ಯ ಪಾತ್ರ ವಹಿಸುತ್ತದೆ. Cibil ಸ್ಕೋರ್ ಮೂಲಕ ಕೇವಲ ಸಾಲ ಮಾತ್ರ ಅಲ್ಲದೆ ಉದ್ಯೋಗವನ್ನು ಕೂಡ ಪಡೆಯಬಹುದು.

CIBIL Score Importance
Image Credit: Zeebiz

Cibil ಸ್ಕೋರ್ ಮೂಲಕ ಕೇವಲ ಸಾಲ ಮಾತ್ರ ಅಲ್ಲದೆ ಉದ್ಯೋಗ ಕೂಡ ಪಡೆಯಬಹುದು
ಬ್ಯಾಂಕ್ ನಿಂದ ಸಣ್ಣ ಅಥವಾ ದೊಡ್ಡ ಮೊತ್ತದ ಸಾಲವನ್ನು ಪಡೆಯಬೇಕಿದ್ದರು ಕೂಡ ಬ್ಯಾಂಕ್ ಮುಖ್ಯವಾಗಿ CIBIL Score ಅನ್ನು ಪರಿಶೀಲಿಸುತ್ತದೆ. ಈ CIBIL ಸಾಲ ಪಡೆಯುವುದರ ಜೊತೆಗೆ ಉದ್ಯೋಗವನ್ನು ಪಡೆಯುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ, ಬ್ಯಾಂಕಿಂಗ್ ನೇಮಕಾತಿ ಸಂಸ್ಥೆ ಇನ್‌ ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್, ಸಾರ್ವಜನಿಕ ವಲಯದ ಬ್ಯಾಂಕ್‌ ಗಳಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕಡ್ಡಾಯ ಅರ್ಹತೆಯಾಗಿ CIBIL ಸ್ಕೋರ್ ಅನ್ನು ಸೇರಿಸಿದೆ. ಈ ಮೂಲಕ ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ CIBIL Score ಅನ್ನು ಮುಖ್ಯವನ್ನಾಗಿಸಿದೆ. ಅನೇಕ ಕಂಪನಿಗಳು ತಮ್ಮ ಹಿನ್ನೆಲೆ ಪರಿಶೀಲನೆಯ ಸಮಯದಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಕ್ರೆಡಿಟ್ ಇತಿಹಾಸವನ್ನು ಪರಿಶೀಲಿಸುತ್ತವೆ.

CIBIL Score Latest Update
Image Credit: Informalnewz

CIBIL Score ನ ಅಗತ್ಯಗಳ ಬಗ್ಗೆ ತಿಳಿದುಕೊಳ್ಳಿ
ಈ ಹಿಂದೆ ಯಾವ ರೀತಿಯ ಸಾಲಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಅವುಗಳ ಪಾವತಿಯನ್ನು ಸಮಯಕ್ಕೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದು ಈ CIBIL Score ನಲ್ಲಿ ಅಡಕವಾಗಿರುತ್ತದೆ. ಯಾವುದೇ ವ್ಯಕ್ತಿಯ ಕ್ರೆಡಿಟ್ ಸ್ಕೋರ್ 300 ರಿಂದ 900 ಅಂಕಗಳ ನಡುವೆ ಇರುತ್ತದೆ ಮತ್ತು 700 ಕ್ಕಿಂತ ಹೆಚ್ಚಿಗೆ ಇದ್ದರೆ ಅದು ಉತ್ತಮ ಕ್ರೆಡಿಟ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.

ವಾಸ್ತವವಾಗಿ, CIBIL ಸ್ಕೋರ್ ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ. ನೀವು ಯಾವಾಗ ಸಾಲವನ್ನು ತೆಗೆದುಕೊಂಡಿದ್ದೀರಿ, ಪ್ರಸ್ತುತ ನೀವು ಎಷ್ಟು ಸಾಲಗಳನ್ನು ಹೊಂದಿದ್ದೀರಿ, ನೀವು ಎಷ್ಟು ಕ್ರೆಡಿಟ್ ಕಾರ್ಡ್‌ ಗಳನ್ನು ಬಳಸುತ್ತಿರುವಿರಿ ಮತ್ತು ನೀವು ಎಷ್ಟು ಹೊಣೆಗಾರಿಕೆಗಳನ್ನು ಹೊಂದಿದ್ದೀರಿ ಎನ್ನುವುದನ್ನು ತಿಳಿಸುತ್ತದೆ.

Join Nadunudi News WhatsApp Group

Join Nadunudi News WhatsApp Group