LPG Price Fall: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ಭರ್ಜರಿ ಇಳಿಕೆ.

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ ಆಗಿದ್ದು ಇದು ಗ್ಯಾಸ್ ಸಿಲಿಂಡರ್ ಬಳಸುವವರ ಸಂತಸಕ್ಕೆ ಕಾರಣವಾಗಿದೆ.

LPG Cylinder Price Fall In India: ಇದೀಗ ಜನಸಾಮಾನ್ಯರಿಗೆ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್  (LPG Cylinder) ನ ಬೆಲೆ ಕಡಿಮೆ ಆಗಿದೆ.  ಕಾರ್ಮಿಕರ ದಿನದಂದು ಸಿಲಿಂಡರ್ ನ ಬೆಲೆ ಇಳಿಕೆ ಕಂಡಿದ್ದು ಜನಸಾಮಾನ್ಯರು ಈ ವಿಚಾರ ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ.

ವಾಣಿಜ್ಯ ಬಳಕೆಯ ಸಲಿಂಡರ್ ನ ಬೆಲೆಯಲ್ಲಿ ಇಳಿಕೆ ಆಗಿದ್ದು, ವಾಣಿಜ್ಯ ಉದ್ದೇಶದಿಂದ ಗಾಸ್ ಸಿಲಿಂಡರ್ ಬಳಸುವ ಜನರಿಗೆ ಕಾರ್ಮಿಕ ದಿನಾಚರಣೆಯ ಗುಡ್ ನ್ಯೂಸ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಳೇದ ತಿಂಗಳು ಕೂಡ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಿದ್ದು ಈ ತಿಂಗಳು ಕೂಡ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 

There has been a decrease in the price of commercial gas cylinders in the country.
Image Credit: moneycontrol

ಎಲ್ ಪಿ ಜಿ ಸಿಲಿಂಡರ್ ನ ಬೆಲೆ ಇಳಿಕೆ 

ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಬೆಲೆ ಕಾರ್ಮಿಕರ ದಿನದಂದು ಇಳಿಕೆ ಆಗಿದೆ. 19 ಕೆಜಿ ತೂಕದ ಏ ಪಿ ಜಿ ಸಿಲಿಂಡರ್ ಬೆಲ್ ಭಾರಿ ಇಳಿಕೆ ಕಂಡಿದ್ದು 171.50 ರೂಪಾಯಿ ಕಡಿಮೆ ಆಗಿದೆ. ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದೆ. ಈ ಹಿಂದೆ ಏಪ್ರಿಲ್ ನಲ್ಲಿ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ನ ಬೆಲೆಗಳನ್ನು 92 ರೂಪಾಯಿ ಇಳಿಕೆ ಮಾಡಿತ್ತು.

ಇದೀಗ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ಪರಿಷ್ಕರಿಸಿದ್ದು, ಪುನಃ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ದರ ಪರಿಷ್ಕರಣೆ ಆಗಿಲ್ಲ.

Join Nadunudi News WhatsApp Group

Commercial gas cylinder prices have come down in the country and there has been no reduction in domestic gas cylinder prices.
Image Credit: siasat

ಗೃಹಬಳಕೆಯ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ

ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ 171.50 ರೂಪಾಯಿ ಇಳಿಕೆ ಕಂಡಿದ್ದು, ಗೃಹಬಳಕೆಯ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಮುಂದಿನ ಜೂನ್ ತಿಂಗಳಲ್ಲಿ ಗೃಹಬಳಕೆಯ ಸಿಲಿಂಡರ್ ನಲ್ಲಿ ಬೆಲೆ ಕಡಿಮೆ ಆಗಲಿದೆ ಅನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Join Nadunudi News WhatsApp Group