Congress Govt: ಉಚಿತ ಗ್ಯಾರೆಂಟಿಗಳಿಗೆ ಸಿದ್ದರಾಮಯ್ಯ ಸರ್ಕಾರ ಇಲ್ಲಿಯತನಕ ಮಾಡಿದ ಖರ್ಚು ಎಷ್ಟು ಗೊತ್ತಾ…? ಇಲ್ಲಿದೆ ಡೀಟೇಲ್ಸ್

ಉಚಿತ ಗ್ಯಾರೆಂಟಿಗಳಿಗೆ ಸರ್ಕಾರ ಇಲ್ಲಿಯತನಕ ಮಾಡಿದ ಖರ್ಚಿನ ಪಟ್ಟಿ ಈ ರೀತಿಯಂತಿದೆ

Congress Govt Guarantee Scheme Expenditure: ಸದ್ಯ ಕರ್ನಾಟಕದಲ್ಲಿ Congress ಸರ್ಕಾರ ಅಧಿಕಾರವನ್ನು ಪಡೆದುಕೊಂಡಾಗಿನಿಂದ ರಾಜ್ಯದ ಜನತೆಗೆ ವಿವಿಧ ಯೋಜನೆಗಳ ಸೌಲಭ್ಯ ದೊರೆಯುತ್ತಿದೆ. ಇನ್ನು ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿತ್ತು.

ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ ಜನರು ಕಾಂಗ್ರೆಸ್ ಸರ್ಕಾರ ಬೆಂಬಲವನ್ನು ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವನ್ನು ಪಡೆದುಕೊಂಡು ಹತ್ತು ತಿಂಗಳು ಕಳೆದಿದೆ.

Congress Govt Guarantee Scheme Expenditure
Image Credit: Karnataka Gov

ರಾಜ್ಯದಲ್ಲಿ ಪಡೆದುಕೊಂಡು ಕಾಂಗ್ರೆಸ್ ನ ಐದು ಉಚಿತ ಗ್ಯಾರಂಟಿ ಯೋಜನೆಗಳು
ಚುನಾವಣಾ ಸಮಯದಲ್ಲಿ ಘೋಷಿಸಿರುವಂತೆ ಸರ್ಕಾರ ರಾಜ್ಯದಲ್ಲಿ ಐದು ಯೋಜನೆಗಳನ್ನು ಜಾರಿ ಮಾಡಿದೆ. ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳು ಜನರಿಗೆ ಲಭ್ಯವಾಗುತ್ತಿದೆ. ಚುನಾವಣೆಯ ವೇಳೆ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಕಾರಣ
ಜನರು ಕಾಂಗ್ರೆಸ್ ಸರ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಸರ್ಕಾರ ಉಚಿತ ಗ್ಯಾರಂಟಿಗಾಗಿ ಎಷ್ಟು ಹಣವನ್ನು ಖರ್ಚು ಮಾಡುತ್ತಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

Congress Govt Guarantee Scheme
Image Credit: Deccanherald

ಉಚಿತ ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ. ವ್ಯಯ
ರಾಜ್ಯ ಸರಕಾರ ಜಾರಿಗೊಳಿಸಿರುವ ಐದು ಖಾತರಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ನಮ್ಮ ಸರ್ಕಾರ ಇರುವವರೆಗೂ ಎಲ್ಲ ವರ್ಗದ ಜನರಿಗೆ ಖಾತರಿ ಯೋಜನೆಗಳನ್ನು ತಲುಪಿಸುತ್ತೇವೆ. ರಾಜ್ಯ ಸರ್ಕಾರದ ಬೊಕ್ಕಸದಿಂದ 58,000 ಕೋಟಿ ರೂ. ಗಳನ್ನು ಖಾತರಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ನಮ್ಮ ರಾಜ್ಯ ಸರ್ಕಾರವು ದೇಶದಾದ್ಯಂತ ಉಚಿತ ಐದು ಖಾತರಿ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ.

Join Nadunudi News WhatsApp Group

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಶಾಸಕರು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಖಾತ್ರಿ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ಇತರೆ ಕಾರ್ಯಕ್ರಮಗಳ ಕುರಿತು ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಅರ್ಹರು ಕೂಡ ಯೋಜನೆಯ ಲಾಭ ಪಡೆಯಬೇಕ್ಕೆನ್ನುವುದು ಸರ್ಕಾರದ ಉದ್ದೇಶ ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group