Pavithra Gowda: ದರ್ಶನ್ ಮತ್ತು ನನ್ನ ಸಂಬಂಧಕ್ಕೆ 10 ವರ್ಷ ಆಯಿತು ಎಂದು ಹೇಳಿದ ಈ ಪವಿತ್ರ ಗೌಡ ನಿಜಕ್ಕೂ ಯಾರು ಗೊತ್ತಾ…?

ದರ್ಶನ್ ಜೊತೆಗಿನ ವಿಡಿಯೋ ಹಂಚಿಕೊಂಡಿರುವ ಪವಿತ್ರ ಗೌಡ ಯಾರು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

Darshan And Pavithra Gowda Controversy: ಸದ್ಯ ಸೋಶಿಯಲ್ ಮೀಡಿಯಾದಲ್ಲಿ Darshan ಅವರ ಎರಡನೇ ಮದುವೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ದರ್ಶನ್ ಅಭಿಮಾನಿಗಳಿಗೆ ಸದ್ಯ ಶಾಕಿಂಗ್ ಸುದ್ದಿ ಹೊರಬೀಳುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಟೇರ ಚಿತ್ರದ ಯಶಸ್ಸಿನ ಸಮಭ್ರಮದಲ್ಲಿರುವ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾದ ಸುದ್ದಿಗಳು ವೈರಲ್ ಆಗುತ್ತಿದೆ. ಡಿ ಬಾಸ್ ಎರಡು ಮದುವೆ ಆಗಿದ್ದಾರೆ..? ಎನ್ನುವುದು ಸದ್ಯದ ಚರ್ಚೆಯಾಗಿದೆ.

Pavitra Gowda Latest News
Image Credit: tv9kannada

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಪವಿತ್ರ ಗೌಡ ಫೋಟೋಸ್ ಬಾರಿ ವೈರಲ್ ಆಗುತ್ತಿದೆ. ಪವಿತ್ರ ಗೌಡ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನು ಎಡಿಟ್ ಮಾಡಿ ವಿಡಿಯೋವನ್ನು ಹಂಚಿಕೊಂಡು, ಅದಕ್ಕೆ ನಮ್ಮ ಸಂಬಂಧಕ್ಕೆ 10 ವರ್ಷವಾಯಿತು ಎನ್ನುವ ಕ್ಯಾಪ್ಷನ್ ಅನ್ನು ನೀಡಿದ್ದಾರೆ.

ಇದನ್ನು ನೋಡಿದವರು ದರ್ಶನ್ ಎರಡು ಮದುವೆಯಾಗಿದ್ದಾರಾ ಎಂದು ಅಚ್ಚರಿ ಪಡುವಂತಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ದರ್ಶನ್ ಜೊತೆಗಿನ ವಿಡಿಯೋ ಹಂಚಿಕೊಂಡಿರುವ ಪವಿತ್ರ ಗೌಡ ಯಾರು ಎನ್ನುವ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಹುಟ್ಟಿರಬಹದು. ಇದೀಗ ನಾವು ಈ ಬಗ್ಗೆ ಮಾಹಿತಿ ತಿಳಿಯೋಣ.

Darshan And Pavithra Gowda Latest Update
Image Credit: Vistaranews

ದರ್ಶನ್ ಜೊತೆಗಿನ ವಿಡಿಯೋ ಹಂಚಿಕೊಂಡಿರುವ ಪವಿತ್ರ ಗೌಡ ಯಾರು..?
ದರ್ಶನ್ ಅವರು ವಿಜಯಲಕ್ಷ್ಮಿ ಎನ್ನುವವರನ್ನು 2003 ರಲ್ಲಿ ಮದುವೆಯಾಗಿದ್ದಾರೆ ಈ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ದರ್ಶನ್ ಎರಡನೇ ಮದುವೆಯಾಗಿದ್ದಾರೆ ಎನ್ನುದು ಸದ್ಯದ ಸುದ್ದಿಯಾಗಿದೆ. ದರ್ಶನ್ ಜೊತೆಗಿರುವ ಪವಿತ್ರ ಗೌಡ ಯಾರು ಅನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ ಎಂದು ಹೇಳಬಹುದು.

ಪವಿತ್ರ ಗೌಡ ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಗಮ್ಯಾ, ಛತ್ರಿಗಳು ಸಾರ್ ಛತ್ರಿಗಳು, ಸಾಗುವ ದಾರಿ, ಪ್ರೀತಿ ಕಿತಾಬು ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪವಿತ್ರ ಗೌಡ ಫ್ಯಾಶನ್ ಡಿಸೈನರ್ ಆಗಿದ್ದಾರೆ.

Join Nadunudi News WhatsApp Group

2017 ರಲ್ಲಿ ದರ್ಶನ್ ಜೊತೆಗಿರುವ ಫ್ಯಾಮಿಲಿ ಫೋಟೋವನ್ನು DP ಹಾಕಿ ಒಮ್ಮೆ ಸುದ್ದಿಯಾಗಿದ್ದರು. ಇದೀಗ ಮತ್ತೆ ದರ್ಶನ್ ಜೊತೆಗಿನ ಫೋಟೋಗಳನ್ನು ಎಡಿಟ್ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪವಿತ್ರ ಗೌಡ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಪವಿತ್ರ ಗೌಡ ವಿರುದ್ಧ ಗರಂ ಆಗಿದ್ದು ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Join Nadunudi News WhatsApp Group